Home
ಮೊಬೈಲ್

iQOO 15 ನಿಂದ ಶಾಕಿಂಗ್ ಎಂಟ್ರಿ?..ಅಗ್ಗದ ಬೆಲೆಗೆ Snapdragon 8 Elite Gen 5?!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಪರ್ಧಾತ್ಮಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ iQOO 15 ಶೀಘ್ರದಲ್ಲೇ ಪ್ರವೇಶಿಸಲು ಸಜ್ಜಾಗಿದೆ. iQOO ಕಂಪನಿಯು ಇದೇ ನವೆಂಬರ್ 26 ರಂದು ದೇಶದಲ್ಲಿ ಅಧಿಕೃತವಾಗಿ ಈ ಹೊಸ ಫೋನ್‌ನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಇದೀಗ ಒಂದು ವರದಿಯು Snapdragon 8 Elite Gen 5 ಚಿಪ್‌ಸೆಟ್ ಹೊಂದಿರುವ ಅತ್ಯಂತ ಅಗ್ಗದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ iQOO 15 ಬಿಡುಗಡೆಯಾಗಲಿದೆ ಎಂದು ಹೇಳಿದೆ.!

ಹೌದು, ಹೆಸರಿಸದ ಉದ್ಯಮ ಮೂಲಗಳನ್ನು ಉಲೇಖಿಸಿರುವ Gadgets300 ವರದಿಯು, ಭಾರತದಲ್ಲಿ iQOO 15 ಸುಮಾರು ₹60,000 ಪ್ರಾರಂಭಿಕ ಆಫರ್ ಬೆಲೆಯೊಂದಿಗೆ ಲಭ್ಯವಾಗಬಹುದು ಎಂದು ಹೇಳಿದೆ. ಸುಮಾರು 60,000 ರೂ.ಗಳ ಈ ಬೆಲೆ ತಂತ್ರವು iQOO 15 ಫೋನ್ ಅನ್ನು ಈ ಕಡಿಮೆ ಬೆಲೆಯಲ್ಲಿ Snapdragon 8 Elite Gen 5 ಹೊಂದಿರುವ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಎಂದು ಪ್ರಚಾರ ಮಾಡಬಹುದು ಎಂದು ವರದಿಯು ಅಭಿಪ್ರಾಯಪಟ್ಟಿದೆ. ಇಷ್ಟೇ ಅಲ್ಲದೆ, ಇದಕ್ಕೆ ಕಾರಣವಾಗಬಹುದಾದ ಅಂಶವನ್ನು ತಿಳಿಸಲಾಗಿದೆ.

ಭಾರತದಲ್ಲಿ ಪ್ರಸ್ತುತ ಸಾಮಾನ್ಯವಾಗಿ Snapdragon 8 Elite Gen 5 ಮಟ್ಟದ ಚಿಪ್‌ಸೆಟ್ ಹೊಂದಿರುವ ಫೋನ್‌ಗಳು ₹70,000 ಕ್ಕಿಂತ ಹೆಚ್ಚು ಬೆಲೆಯಲ್ಲೇ ಲಭ್ಯವಾಗುತ್ತವೆ. ಶೀಘ್ರದಲ್ಲೇ Snapdragon 8 Elite Gen 5 ಹೊಂದಿರುವ OnePlus 15 ಮತ್ತು Realme GT 8 Pro ಫೋನ್‌ಗಳು ದೇಶದಲ್ಲಿ ಬಿಡುಗಡೆಯಾಗುತ್ತಿವೆ. ಹಾಗಾಗಿ, ಗ್ರಾಹಕರು iQOO 15 ಮೇಲೆ ತಮ್ಮ ಗಮನವನ್ನು ಹರಿಸಲು ಈ ಕಡಿಮೆ ಬೆಲೆ ತಂತ್ರವು ಇರಬಹುದು. ಈ ಮೂಲಕ ಪ್ರತಿಸ್ಪರ್ಧಿ ಸ್ಮಾರ್ಟ್‌ಫೋನ್‌ಗಳಿಗೆ ನೇರ ಸವಾಲು ನೀಡಲು iQOO ಸಜ್ಜಾಗಿರಬಹುದು.

iQOO 15 ನಿಂದ ಶಾಕಿಂಗ್ ಎಂಟ್ರಿ?..ಅಗ್ಗದ ಬೆಲೆಗೆ Snapdragon 8 Elite Gen 5?!

iQOO 15 Priority Pass: ಪ್ರೀ ಬುಕಿಂಗ್ ಆಫರ್
ಈ ಮೇಲೆ ತಿಳಿಸಿದ ಸುದ್ದಿಯ ಇನ್ನೂ ಅಧಿಕೃತವಾಗಿಲ್ಲ. ಆದರೆ, iQOO ಕಂಪನಿಯು iQOO 15 ಫೋನಿ ಅಧಿಕೃತ ಬಿಡುಗಡೆಗೂ ಮುನ್ನ Priority Pass ಆಫರ್ ಅನ್ನು ಘೋಷಿಸಿದೆ. ಆಸಕ್ತ ಗ್ರಾಹಕರು ಕೇವಲ ₹1,000 ಪಾವತಿಸಿ (ರಿಫಂಡಬಲ್) ಫೋನ್‌ನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಈ ಪಾಸ್ ಖರೀದಿದಾರರಿಗೆ ಕಂಪನಿಯು ಉಚಿತ iQOO TWS 1e ಇಯರ್‌ಬಡ್ಸ್ ಮತ್ತು 12 ತಿಂಗಳ ವಿಸ್ತೃತ ವಾರಂಟಿ ನೀಡುತ್ತಿದೆ.ಈ ಪ್ರೀ-ಬುಕ್ಕಿಂಗ್ ನವೆಂಬರ್ 20ರಿಂದ ಆರಂಭವಾಗಲಿದ್ದು, ಪಾಸ್‌ಗಳ ಸಂಖ್ಯೆ ಸೀಮಿತವಾಗಿದೆ. "first come, first served" ಆಧಾರದ ಮೇಲೆ ಈ ಆಫರ್ ಲಭ್ಯವಿರುತ್ತದೆ.

ಭಾರತಕ್ಕೆ iQOO 15 : ಏನೆಲ್ಲಾ ನಿರೀಕ್ಷೆಗಳಿವೆ?
ನವೆಂಬರ್ 26 ರಂದು ಬಿಡುಗಡೆಯಾಗುತ್ತಿರುವ ಈ ಬಹುನಿರೀಕ್ಷಿತ iQOO 15 ಸ್ಮಾರ್ಟ್‌ಫೋನ್ Snapdragon 8 Elite Gen 5 ಪ್ರೊಸೆಸರ್ ಚಾಲಿತ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ಈ ಫೋನಿನಲ್ಲಿ Samsung 2K M14 OLED ಡಿಸ್‌ಪ್ಲೇ ಇರಲಿದೆ. ಔಟ್‌ ಆಫ್‌ ದಿ ಬಾಕ್ಸ್‌ OriginOS ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 5 ವರ್ಷಗಳ OS ನವೀಕರಣಗಳು ಮತ್ತು 7 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುತ್ತದೆ ಎಂದು ಕಂಪೆನಿಯು ಇತ್ತೀಚಿಗಷ್ಟೇ ದೃಢಪಡಿಸಿದೆ.

ಇದರ ಪ್ರಮುಖ ಫೀಚರ್ಸ್‌ಗಳಲ್ಲಿ, ಬೃಹತ್ 7000mAh ಬ್ಯಾಟರಿ, ಟ್ರಿಪಲ್ 50-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಸೆಟಪ್ ಇರುವುದು ಖಚಿತವಾಗಿದ್ದರೆ, iQOO 15 ಆಂತರಿಕವಾಗಿ ಅಭಿವೃದ್ಧಿಪಡಿಸಿದ ಗೇಮ್ ಲೈವ್‌ಸ್ಟ್ರೀಮಿಂಗ್ ಅಸಿಸ್ಟೆಂಟ್ ಅನ್ನು ಒಳಗೊಂಡಿರುತ್ತದೆ, ಜೊತೆಗೆ ಅತಿದೊಡ್ಡ ಸಿಂಗಲ್-ಲೇಯರ್ ಕೂಲಿಂಗ್ ಸಿಸ್ಟಮ್ ಎಂದು ಹೇಳಲಾಗುತ್ತದೆ. ಈ ಎಲ್ಲಾ ಅಂಶಗಳು ಭಾರತೀಯ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ iQOO 15 ಹೊಸ ಟ್ರೆಂಡ್ ನಿರ್ಮಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

ಆಧಾರ: Gadgets300

Best Mobiles in India

English summary
A report by Gadgets300 suggests that the iQOO 15 could be available in India with a starting offer price of around ₹60,000. The report opines that this pricing strategy of around Rs 60,000 could promote the iQOO 15 phone as the cheapest smartphone with Snapdragon 8 Elite Gen 5 at this low price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+