ಭರ್ಜರಿ ಸಿಹಿಸುದ್ದಿ: ಭಾರತದಲ್ಲಿ iQOO 15 ಪೋನ್ ಬಿಡುಗಡೆ ದಿನಾಂಕ ಘೋಷಣೆ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವಂತಹ ಸುದ್ದಿಯನ್ನು iQOO ಕಂಪೆನಿ ಪ್ರಕಟಿಸಿದೆ. iQOO ಕಂಪೆನಿಯ ಸಿಇಒ ನಿಪುಣ್ ಮಾರ್ಯ ಅವರು X (ಹಳೆಯ Twitter) ನಲ್ಲಿ ಶೇರ್ ಮಾಡಿರುವ ಇತ್ತೀಚಿನ ಪೋಸ್ಟ್‌ನಲ್ಲಿ, ಭಾರತದಲ್ಲಿ ಬಹುನಿರೀಕ್ಷಿತ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟಿಸಿದ್ದಾರೆ. ಈಗಾಗಲೇ Amazon ಪೇಜ್‌ನಲ್ಲಿ ಈ iQOO 15 ಸ್ಮಾರ್ಟ್‌ಫೋನ್ ಕುರಿತ ಟೀಸರ್ ಕೂಡ ಲೈವ್ ಆಗಿದೆ. ಹಾಗಾದರೆ, ಮುಂಬರಲಿರುವ iQOO 15 ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ?, ಬೆಲೆ ಎಷ್ಟಿರಬಹುದು ಹಾಗೂ ಫೀಚರ್ಸ್ ಹೇಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಭಾರತದಲ್ಲಿ iQOO 15 ಸ್ಮಾರ್ಟ್‌ಪೋನ್ ಬಿಡುಗಡೆ ದಿನಾಂಕ.
iQOO ಕಂಪನಿಯ ಸಿಇಒ ನಿಪುಣ್ ಮಾರ್ಯ ಅವರು X (ಹಳೆಯ Twitter) ನಲ್ಲಿ ಹಂಚಿದ ಪೋಸ್ಟ್‌ನಲ್ಲಿ, ಭಾರತದಲ್ಲಿ ನವೆಂಬರ್ 27, 2025 ರಂದು iQOO 15 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. ಹಾಗೂ, ಬಿಡುಗಡೆ ನಂತರ ಈ ಫೋನ್ iQOO ಅಧಿಕೃತ ವೆಬ್‌ಸೈಟ್ ಮತ್ತು Amazon Indiaನಲ್ಲಿ ಖರೀದಿಗೆ ಲಭ್ಯವಾಗಲಿದೆ.
iQOO 15 ಸ್ಮಾರ್ಟ್‌ಪೋನ್: ಪ್ರಮುಖ ವೈಶಿಷ್ಟ್ಯಗಳು
ಮುಂಬರಲಿರುವ iQOO 15 ಸ್ಮಾರ್ಟ್‌ಫೋನ್ 6.85 ಇಂಚಿನ Samsung M14 AMOLED 2K ಡಿಸ್ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್ ಹಾಗೂ 2,600 ನಿಟ್ ಪೀಕ್ ಬ್ರೈಟ್‌ನೆಸ್ ಒದಗಿಸುತ್ತದೆ. ಇದರಲ್ಲಿನ 2160Hz PWM ಡಿಮ್ಮಿಂಗ್ ಮತ್ತು ಆಂಟಿ-ರಿಫ್ಲೆಕ್ಷನ್ ಕೋಟಿಂಗ್ ತಂತ್ರಜ್ಞಾನವು ಬೆಳಕಿನಲ್ಲಿಯೂ ಸ್ಪಷ್ಟ ದೃಶ್ಯ ನೀಡುತ್ತದೆ. ಫೋನ್ ಕೇವಲ 8.28mm ದಪ್ಪವಾಗಿದ್ದು, ತೂಕ ಸುಮಾರು 221 ಗ್ರಾಂ ಇದೆ. ಇದಕ್ಕೆ IP68 ಮತ್ತು IP69 ರೇಟಿಂಗ್ ಇದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ಒದಗಿಸುತ್ತದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ Snapdragon 8 Elite Gen 5 ಚಿಪ್‌ಸೆಟ್ ಪವರ್ ನೀಡುತ್ತದೆ. ಜೊತೆಗೆ Adreno 840 GPU ಹಾಗೂ Q3 ಗೇಮಿಂಗ್ ಚಿಪ್ ಸಹ ಸೇರಿದ್ದು, ಗೇಮಿಂಗ್ ಅನುಭವವನ್ನು ಮತ್ತಷ್ಟು ವಾಸ್ತವಿಕಗೊಳಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.ಈ ಫೋನ್‌ನಲ್ಲಿ 16GB LPDDR5x Ultra RAM ಮತ್ತು 1TB ವರೆಗೆ UFS 4.1 ಸ್ಟೋರೇಜ್ ಆಯ್ಕೆಗಳು ಲಭ್ಯ. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು Android 16 ಆಧಾರಿತ OriginOS 6 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಈ iQOO 15 ಸ್ಮಾರ್ಟ್‌ಫೋನ್ ಫೋಟೋಗ್ರಫಿ ಪ್ರಿಯರಿಗೆ ಅತ್ಯುತ್ತಮ ಆಯ್ಕೆ ಆಗಲಿದೆ. ಇದರ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದು 50MP Sony IMX921 ಪ್ರೈಮರಿ ಸೆನ್ಸರ್ (OIS), 50MP Samsung JN1 ಅಲ್ಟ್ರಾವೈಡ್ ಲೆನ್ಸ್, ಹಾಗೂ 3x ಆಪ್ಟಿಕಲ್ ಜೂಮ್ ಸಹಿತ Sony IMX882 ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಲಾಗಿದೆ.
ಬ್ಯಾಟರಿ ಮತ್ತು ಸಂಪರ್ಕ ಆಯ್ಕೆಗಳಲ್ಲಿ, ಈ ಫೋನ್‌ನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿ ಇದ್ದು, 100W ಫಾಸ್ಟ್ ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕದ ಆಯ್ಕೆಗಳಲ್ಲಿ Wi-Fi 7, Bluetooth 6.0, NFC, ಮತ್ತು IR ಬ್ಲಾಸ್ಟರ್ ವೈಶಿಷ್ಟ್ಯಗಳಿವೆ.
iQOO 15 ಸ್ಮಾರ್ಟ್‌ಫೋನ್ ಬೆಲೆ ಎಷ್ಟಿರಬಹುದು?
ಮುಂಬರುವ ಹೊಸ iQOO 15 ಫೋನ್‌ನ ಭಾರತ ದರ ₹60,000ಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ನಾವು ಹಿಂದಿನ iQOO 13 ಮಾದರಿ ಫೋನಿನ ಬೆಲೆಯನ್ನು ಗಮನಿಸುವುದಾದರೆ, ಇದರ ಪ್ರಾರಂಭಿಕ ಬೆಲೆ ₹54,999 ಆಗಿತ್ತು. ಈ ಬಾರಿ, iQOO 15 ಫೋನ್ ಬೆಲೆ ₹60,000ಕ್ಕಿಂತ ಕಡಿಮೆ ಇರಬಹುದು ಎಂದು ಹಲವಾರು ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ. ಒಟ್ಟಾರೆಯಾಗಿ, iQOO 15 ಪೋನ್ ಭಾರತ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್ ಪರ್ಫಾರ್ಮೆನ್ಸ್ ಮತ್ತು ಪ್ರೀಮಿಯಂ ವಿನ್ಯಾಸವನ್ನು ಒಟ್ಟಿಗೆ ನೀಡುವ ಶಕ್ತಿಶಾಲಿ ಆಯ್ಕೆಯಾಗಲಿದೆ. ಏನಂತಿರಾ?


Click it and Unblock the Notifications








