iQOO 15 Ultra ಫೋನಿನಲ್ಲಿ 8T LTPO OLED ಡಿಸ್‌ಪ್ಲೇ ಇರುವುದು ಖಚಿತ!
iQOO ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 Ultra ಅನ್ನು ಚೀನಾದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. iQOO 15 ಸರಣಿಯ ಎರಡನೇ ಮಾದರಿಯಾಗಿರುವ ಈ ಹೊಸ ಸ್ಮಾರ್ಟ್‌ಫೋನ್, ಯುವ ಬಳಕೆದಾರರು ಮತ್ತು ಗೇಮಿಂಗ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದು, ಬಿಡುಗಡೆಗೂ ಮುನ್ನವೇ ಕಂಪನಿಯು ಡಿಸ್‌ಪ್ಲೇ, ವಿನ್ಯಾಸ ಮತ್ತು ಕಾರ್ಯಕ್ಷಮತೆ ಸಂಬಂಧಿತ ಪ್ರಮುಖ ಮಾಹಿತಿಗಳನ್ನು ಹಂತ ಹಂತವಾಗಿ ಬಹಿರಂಗಪಡಿಸಿದೆ. ಇದರ ಕೆಲವು ಫೀಚರ್ಸ್ ಇದೀಗ ಸ್ಮಾರ್ಟ್‌ಫೋನ್ ಲೋಕದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹೌದು, iQOO 15 Ultra ನಲ್ಲಿ 2K ರೆಸಲ್ಯೂಶನ್ ಹೊಂದಿರುವ 8T LTPO OLED ಡಿಸ್‌ಪ್ಲೇ ಇರಲಿದೆ ಎಂಬುದನ್ನು ಕಂಪೆನಿಯು ಖಚಿತಪಡಿಸಿದೆ. ಈ ಪರದೆಯು 144Hz ವರೆಗೆ ರಿಫ್ರೆಶ್ ರೇಟ್ ನೀಡುವುದರಿಂದ ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವ ಸಿಗಲಿದೆ. M14 ಲ್ಯೂಮಿನೆಸೆಂಟ್ ಮೆಟೀರಿಯಲ್ ಬಳಕೆಯಿಂದ ಗರಿಷ್ಠ 8,000 ನಿಟ್ಸ್ ಪೀಕ್ ಬ್ರೈಟ್ನೆಸ್, 2,160Hz PWM ಡಿಮ್ಮಿಂಗ್ ಮತ್ತು 508ppi ಪಿಕ್ಸೆಲ್ ಡೆನ್ಸಿಟಿ ಲಭ್ಯವಾಗುತ್ತದೆ. ಜೊತೆಗೆ Dolby Vision ಸಪೋರ್ಟ್ ಇರುವುದರಿಂದ ವಿಡಿಯೋ ಮತ್ತು ಗೇಮ್ಸ್ ಇನ್ನಷ್ಟು ಜೀವಂತವಾಗಿ ಕಾಣಲಿವೆ ಎಂದು ಕಂಪೆನಿ ತಿಳಿಸಿದೆ.
ಕಂಪನಿಯ ಪ್ರಕಾರ, ಈ ಹೊಸ ಡಿಸ್‌ಪ್ಲೇ ಹಿಂದಿನ iQOO 13 ಮಾದರಿಗಿಂತ ಸುಮಾರು 44 ಶೇಕಡಾ ಹೆಚ್ಚು ಎನರ್ಜಿ ಎಫಿಷಿಯಂಟ್ ಆಗಿದೆ. ಅಲ್ಲದೆ, 118 ಶೇಕಡಾ P3 ಕಲರ್ ಗ್ಯಾಮಟ್ ಕವರೆಜ್ ನೀಡುವುದರಿಂದ ಬಣ್ಣಗಳ ಪ್ರದರ್ಶನ ಹೆಚ್ಚು ನಿಖರ ಮತ್ತು ಪ್ರಕಾಶಮಾನವಾಗಿರುತ್ತದೆ. ಇದು iQOO ಇದುವರೆಗೆ ಪರಿಚಯಿಸಿರುವ ಅತ್ಯಂತ ವೈಡ್ ಕಲರ್ ಡಿಸ್‌ಪ್ಲೇ ಎಂದು ಕಂಪನಿ ಹೇಳಿದೆ. ಇದರಿಂದ ಮೊಬೈಲ್ ಪ್ರಿಯರಲ್ಲಿ ಒಂದು ಮಿಡ್-ರೇಂಜ್ ಫ್ಲಾಗ್‌ಶಿಪ್‌ನಲ್ಲಿ 8T LTPO OLED ಡಿಸ್‌ಪ್ಲೇ ನಿರಿಕ್ಷೆಯು ಹೆಚ್ಚಾಗಿದೆ.

ಇತ್ತೀಚೆಗೆ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಹ್ಯಾಂಡ್ಸ್-ಆನ್ ವಿಡಿಯೋ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆ ವಿಡಿಯೋದಲ್ಲಿ iQOO 15 Ultra ಫೋನ್‌ನ ಎಡಭಾಗದಲ್ಲಿ ಆಕ್ಟಿವ್ ಕೂಲಿಂಗ್ ಫ್ಯಾನ್‌ಗಾಗಿ ಹೀಟ್ ವೆಂಟ್ ಇರುವುದನ್ನು ಕಾಣಬಹುದು. ಇದು ದೀರ್ಘಕಾಲ ಗೇಮಿಂಗ್ ಮಾಡುವಾಗ ಫೋನ್ ತಾಪಮಾನವನ್ನು ನಿಯಂತ್ರಿಸಲು ಸಹಾಯಕವಾಗಲಿದೆ. ಜೊತೆಗೆ, ಗೇಮಿಂಗ್ ಅನುಭವವನ್ನು ಹೆಚ್ಚಿಸಲು ಎರಡು ಶೋಲ್ಡರ್ ಟ್ರಿಗರ್‌ಗಳು ಇರುವ ಸಾಧ್ಯತೆಯೂ ಇದೆ.
ವಿನ್ಯಾಸದ ವಿಚಾರಕ್ಕೆ ಬಂದರೆ, ಈ ಫೋನ್ ಫ್ಲಾಟ್ ಸೈಡ್ಸ್ ಹೊಂದಿರುವ ಮೆಟಲ್ ಫ್ರೇಮ್‌ನೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳು ಇರಲಿವೆ. ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಡೆಕೊ ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಬಹುದು. ಲೀಕ್ ಆದ ಮಾಹಿತಿಯಂತೆ, ಇದು 2077 (ಬ್ಲ್ಯಾಕ್) ಮತ್ತು 2049 (ಸಿಲ್ವರ್) ಎಂಬ ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
iQOO ಅಧಿಕೃತವಾಗಿ ತಿಳಿಸಿದಂತೆ, iQOO 15 Ultra ಫೆಬ್ರವರಿ ಮೊದಲ ವಾರ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ 4:30) ಚೀನಾದಲ್ಲಿ ಬಿಡುಗಡೆ ಆಗಲಿದೆ. ಈ ಫೋನ್‌ನಲ್ಲಿ iQOO ಯ ಸ್ವಂತ Ice Dome Air Cooling System ಮತ್ತು ಹೊಸ Q3 ಗೇಮಿಂಗ್ ಚಿಪ್ ಇರಲಿದ್ದು, ಹೈ-ಪರ್ಫಾರ್ಮೆನ್ಸ್ ಗೇಮಿಂಗ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಇನ್ನೂ ಅಧಿಕೃತ ದೃಢೀಕರಣ ಬಾಕಿಯಿದ್ದರೂ, ಲೀಕ್ ವರದಿಗಳ ಪ್ರಕಾರ iQOO 15 Ultra ನಲ್ಲಿ Qualcomm Snapdragon 8 Elite Gen (3nm) ಪ್ರೊಸೆಸರ್, 7,400mAh ಬ್ಯಾಟರಿ ಮತ್ತು 100W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಬಹುದು.
ಒಟ್ಟಾರೆಯಾಗಿ, ಪ್ರೀಮಿಯಂ ಡಿಸ್‌ಪ್ಲೇ, ಶಕ್ತಿಶಾಲಿ ಗೇಮಿಂಗ್ ವೈಶಿಷ್ಟ್ಯಗಳು ಮತ್ತು ನವೀನ ಕೂಲಿಂಗ್ ತಂತ್ರಜ್ಞಾನಗಳೊಂದಿಗೆ iQOO 15 Ultra ಫ್ಲ್ಯಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ ಗಮನ ಸೆಳೆಯುವ ಸ್ಮಾರ್ಟ್‌ಫೋನ್ ಆಗುವ ಸಾಧ್ಯತೆ ಇದೆ. ಚೀನಾದ ಬಿಡುಗಡೆ ಬಳಿಕ, ಭಾರತೀಯ ಮಾರುಕಟ್ಟೆಯಲ್ಲೂ ಇದರ ಪ್ರವೇಶದ ನಿರೀಕ್ಷೆ ಹೆಚ್ಚಿದ್ದು, ಟೆಕ್ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ. ಒಂದು ಮಿಡ್-ರೇಂಜ್ ಫ್ಲಾಗ್‌ಶಿಪ್‌ನಲ್ಲಿ 8T LTPO OLED ಡಿಸ್‌ಪ್ಲೇ ನಿರೀಕ್ಷೆ ಇರುವುದು ಸಹ ಈ ಸ್ಮಾರ್ಟ್‌ಫೋನ್ ಕುರಿತು ಮತ್ತೊಂದು ಪ್ರಮುಖ ಆಕರ್ಷಣೆ ಎನ್ನಬಹುದು.


Click it and Unblock the Notifications