Home
ಮೊಬೈಲ್

ಭಾರತದಲ್ಲಿ ಇಂದು iQOO 15 ಪ್ರೀ-ಬುಕಿಂಗ್ ಆರಂಭ: ಭರ್ಜರಿ ಕೊಡುಗೆಗಳು!

ಭಾರತದ ಮೊಬೈಲ್ ಮಾರುಕಟ್ಟೆಗೆ Snapdragon 8 Elite Gen 5 ಪ್ರೊಸೆಸರ್‌ನೊಂದಿಗೆ ಬರುತ್ತಿರುವ ಫ್ಲ್ಯಾಗ್‌ಶಿಪ್ ಫೋನ್ iQOO 15 ಇದೀಗ ಪ್ರೀ-ಬುಕ್ಕಿಂಗ್‌ಗೆ ಲಭ್ಯವಾಗಿದೆ. ದೇಶದಲ್ಲಿ ಮಧ್ಯಾಹ್ನ 12 ಗಂಟೆಯಿಂದ Amazon ಮತ್ತು iQOO India e-storeಗಳಲ್ಲಿ ಈ ಸ್ಮಾರ್ಟ್‌ಫೋನ್‌ನ್ನು ಬುಕ್ ಮಾಡಬಹುದು. ಪ್ರೀ-ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಹಾಗೂ ವಿಶೇಷ ಲಾಭಗಳನ್ನು ಕಂಪನಿಯು ಘೋಷಿಸಿದೆ. ಇದೇ ನವೆಂಬರ್ 26 ರಂದು ಅಧಿಕೃತವಾಗಿ ದೇಶದಲ್ಲಿ ಬಿಡುಗಡೆಯಾಗಲಿರುವ ಈ ಪೋನ್, Snapdragon 8 Elite Gen 5 ಪ್ರೊಸೆಸರ್ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್ ಆಗಿ ಎಂಟ್ರಿ ನೀಡುವ ಸಾಧ್ಯತೆ ಇದೆ. ಹಾಗಾದರೆ, ಮುಂಬರುವ iQOO 15 ಪ್ರೀ-ಬುಕ್ಕಿಂಗ್ ಕೊಡುಗೆಗಳು ಯಾವುವು?, ಬೆಲೆ ಎಷ್ಟಿರಬಹುದು ಹಾಗೂ ಫೀಚರ್ಸ್ ಹೇಗಿವೆ ಎಂಬ ಎಲ್ಲಾ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.

iQOO 15 : ಪ್ರೀ-ಬುಕಿಂಗ್‌ಗಾಗಿ ವಿಶೇಷ 'Priority Pass'
ಇಂದಿನಿಂದ iQOO 15 ಪ್ರೀ-ಬುಕ್ ಮಾಡಲಿರುವ ಗ್ರಾಹಕರಿಗೆ ಕಂಪೆನಿಯು Priority Pass ನೀಡುತ್ತಿದೆ. ಈ Priority Pass ಪಡೆಯುವ ಗ್ರಾಹಕರು ಒಂದು ಜೋಡಿ iQOO TWS 1e ಇಯರ್‌ಬಡ್‌ಗಳು ಮತ್ತು ಹೆಚ್ಚುವರಿ 12 ತಿಂಗಳ ವಿಸ್ತೃತ ಖಾತರಿಯ ಕೊಡುಗೆಯನ್ನು ಪಡೆಯಬಹುದು.

ಭಾರತದಲ್ಲಿ ಇಂದು iQOO 15 ಪ್ರೀ-ಬುಕಿಂಗ್ ಆರಂಭ: ಭರ್ಜರಿ ಕೊಡುಗೆಗಳು!

iQOO 15 : ಭಾರತದ ಬೆಲೆ ಶ್ರೇಣಿ ₹65,000-₹70,000
Gadgets 360 ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, iQOO 15 ಅನ್ನು ಭಾರತದಲ್ಲಿ ₹65,000 ರಿಂದ ₹70,000 ಬೆಲೆ ಶ್ರೇಣಿಯಲ್ಲಿ ಮಾರಾಟಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ. ಹಾಗೂ ಈ ಫೋನ್ ಆಲ್ಫಾ (ಕಪ್ಪು) ಮತ್ತು ಲೆಜೆಂಡ್ (ಬಿಳಿ) ಬಣ್ಣ ಆಯ್ಕೆಗಳಲ್ಲಿ ಬರುವುದು ದೃಢಪಡಿಸಲಾಗಿದೆ.

iQOO 15 : ಪ್ರಮುಖ ವೈಶಿಷ್ಟ್ಯಗಳು.
ನಾವು ಈಗಾಗಲೇ ತಿಳಿದಿರುವಂತೆ, iQOO 15 ಫೋನ್ ಅತ್ಯಂತ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊತ್ತು ಬರುತ್ತಿದೆ. ಇವುಗಳಲ್ಲಿ, Samsung ಅಭಿವೃದ್ಧಿಪಡಿಸಿದ 2K M14 LEAD OLED ಡಿಸ್‌ಪ್ಲೇ ಹೆಚ್ಚು ಗಮನಸೆಳೆದಿದೆ. ಈ ಡಿಸ್‌ಪ್ಲೇಯು 2,600 ನಿಟ್‌ಗಳವರೆಗೆ ಗರಿಷ್ಠ ಹೊಳಪು, ಡಾಲ್ಬಿ ವಿಷನ್ ಬೆಂಬಲ ಮತ್ತು ಟ್ರಿಪಲ್ ಆಂಬಿಯೆಂಟ್ ಲೈಟ್ ಸೆನ್ಸರ್‌ಗಳನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಗೇಮಿಂಗ್ ಮತ್ತು ಸಾಮಾನ್ಯ ಬಳಕೆಯ ಸಮಯದಲ್ಲಿ ವರ್ಧಿತ ಹ್ಯಾಪ್ಟಿಕ್ ಪ್ರತಿಕ್ರಿಯೆಗಾಗಿ ಈ ಫೋನ್ ಡ್ಯುಯಲ್-ಆಕ್ಸಿಸ್ ವೈಬ್ರೇಶನ್ ಮೋಟಾರ್ ಅನ್ನು ಸಹ ಒಳಗೊಂಡಿದೆ.

ಕಾರ್ಯಕ್ಷಮತೆಗಾಗಿ, ಈ iQOO 15 ಫೋನಿನಲ್ಲಿ ಇತ್ತೀಚಿನ Snapdragon 8 Elite Gen 5 ಪ್ರೊಸೆಸರ್ ಬಳಸಲಾಗಿದೆ. ಈ ಚಿಪ್‌ಸೆಟ್ ,LPDDR5X Ultra RAM, UFS 4.1 ಆನ್‌ಬೋರ್ಡ್ ಸ್ಟೋರೇಜ್, iQOO ನ ಸೂಪರ್‌ಕಂಪ್ಯೂಟಿಂಗ್ ಚಿಪ್ Q3 ಮತ್ತು ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 8,000 ಚದರ ಎಂಎಂ ಸಿಂಗಲ್-ಲೇಯರ್ ವೇಪರ್ ಚೇಂಬರ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್‌ ಭಾರತದಲ್ಲಿ ಮೊದಲ ಬಾರಿಗೆ Android 16 ಆಧಾರಿತ OriginOS 6 ನೊಂದಿಗೆ ಬಿಡುಗಡೆಯಾಗುತ್ತಿದೆ. ಕಂಪನಿ 5 ವರ್ಷಗಳ OS ಅಪ್ಡೇಟ್ ಮತ್ತು 7 ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ ಇಂದು iQOO 15 ಪ್ರೀ-ಬುಕಿಂಗ್ ಆರಂಭ: ಭರ್ಜರಿ ಕೊಡುಗೆಗಳು!

ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ 50-ಮೆಗಾಪಿಕ್ಸೆಲ್ ಸೆನ್ಸರ್‌ಗಳ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಸಂವೇದಕ, 3x ಜೂಮ್ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ IMX882 ಸಂವೇದಕ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 100W ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿರುವ 7,000mAh ದೊಡ್ಡ ಬ್ಯಾಟರಿ ಇದೆ. ಜೊತೆಗೆ ಕಂಪನಿ ಹೊಸ Game Live Streaming Assistant ಪರಿಚಯಿಸಿದೆ.

ನವೆಂಬರ್ 26 ರಂದು ಅಧಿಕೃತವಾಗಿ ದೇಶದಲ್ಲಿ ಬಿಡುಗಡೆಯಾಗಲಿರುವ iQOO 15 ಫೋನ್ ದೇಶದ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಪರ್ಧೆಗೆ ಹೊಸ ತೀವ್ರತೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರೀ-ಬುಕಿಂಗ್ ಆಫರ್‌ಗಳೊಂದಿಗೆ ನಿರೀಕ್ಷೆಯು ಮತ್ತಷ್ಟು ಹೆಚ್ಚಿದೆ.

Best Mobiles in India

English summary
The flagship phone iQOO 15, which comes with the Snapdragon 8 Elite Gen 5 processor, is now available for pre-booking. The smartphone can be booked from 12 noon in the country on Amazon and iQOO India e-stores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+