Home
ಮೊಬೈಲ್

ಭಾರತದಲ್ಲಿ iQOO 15R ಲಾಂಚ್‌ಗೆ ಕೆಲವೇ ದಿನ: ಕ್ಯಾಮೆರಾ ಫೀಚರ್ಸ್ ಔಟ್!

ಭಾರತದಲ್ಲಿ iQOO ತನ್ನ ಬಹುನಿರೀಕ್ಷಿತ ಮಿಡ್‌-ರೇಂಜ್ ಫ್ಲ್ಯಾಗ್‌ಶಿಪ್ iQOO 15R ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಿಡುಗಡೆಗೂ ಮೊದಲೇ ಕಂಪೆನಿಯು ಅಧಿಕೃತ ಟೀಸರ್‌ಗಳ ಮೂಲಕ iQOO 15R ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತಿದ್ದು, ಇದೀಗ ಅದರ ಕ್ಯಾಮೆರಾ ಸಾಮರ್ಥ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಈ ಫೋನ್ ಮಿಡ್-ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಹೊಸ ಮಾನದಂಡ ಸ್ಥಾಪಿಸುವ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗಿದೆ.

ಹೌದು, ಇತ್ತೀಚೆಗೆ iQOO ಇಂಡಿಯಾದ ಸಿಇಒ ನಿಪುಣ್ ಮೌರ್ಯ ಅವರು X (ಹಳೆಯ ಟ್ವಿಟರ್) ನಲ್ಲಿ ಹಂಚಿಕೊಂಡ ಟೀಸರ್ ಪೋಸ್ಟ್‌ನಲ್ಲಿ, iQOO 15R ನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ ಎಂಬುದು ದೃಢಪಟ್ಟಿದೆ. ಈ ಕ್ಯಾಮೆರಾ Sony LYT ಸೆನ್ಸರ್ ಆಧಾರಿತವಾಗಿದ್ದು, ಉತ್ತಮ ಲೋ-ಲೈಟ್ ಫೋಟೋಗ್ರಫಿ ಮತ್ತು ನಿಖರ ಬಣ್ಣಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಚೌಕಾಕಾರದ ಕ್ಯಾಮೆರಾ ಐಲ್ಯಾಂಡ್ ವಿನ್ಯಾಸದಲ್ಲೇ ಈ ಮಾಹಿತಿ ಸ್ಮಾರ್ಟ್ ರೀತಿಯಲ್ಲಿ ಮರೆಮಾಡಲಾಗಿದ್ದು, ಬಳಕೆದಾರರಲ್ಲಿ ಕುತೂಹಲ ಹೆಚ್ಚಿಸಿದೆ.

ಈ ಹಿಂದೆ iQOO 15R ಅನ್ನು ಚೀನಾದಲ್ಲಿ ಮಾತ್ರ ಲಭ್ಯವಿರುವ iQOO Z11 Turbo ಯ ಮರುಬ್ರ್ಯಾಂಡ್ ಆವೃತ್ತಿ ಎಂದು ಅಂದಾಜಿಸಲಾಗಿತ್ತು. ಆದರೆ Z11 Turbo ಯಲ್ಲಿ 200MP ಮುಖ್ಯ ಕ್ಯಾಮೆರಾ ಇರುವುದರಿಂದ, ಭಾರತಕ್ಕೆ ಬರುತ್ತಿರುವ iQOO 15R ನಲ್ಲಿ ಕ್ಯಾಮೆರಾ ಸೆಟಪ್ ಸೇರಿದಂತೆ ಕೆಲವು ಸ್ಪೆಸಿಫಿಕೇಶನ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದು ಭಾರತೀಯ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಮತ್ತು ಬೆಲೆ ವಿಭಾಗದಲ್ಲಿ ಮಾಡಿದ ಸ್ಥಳೀಯ ಕಸ್ಟಮೈಜೇಶನ್ ಆಗಿರಬಹುದು ಎಂದು ಅನಿಸುತ್ತಿದೆ.

ಭಾರತದಲ್ಲಿ iQOO 15R ಲಾಂಚ್‌ಗೆ ಕೆಲವೇ ದಿನ: ಕ್ಯಾಮೆರಾ ಫೀಚರ್ಸ್ ಔಟ್!

ಭಾರತದಲ್ಲಿ iQOO 15R ಮೂಲ ರೂಪಾಂತರದ ಆರಂಭಿಕ ಬೆಲೆ ಸುಮಾರು ₹45,999 ಆಗಿರಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ₹50,000 ಕ್ಕಿಂತ ಕಡಿಮೆ ಇರುವ ವಿಭಾಗದಲ್ಲಿ iQOO 15R ಬೆಲೆ ಸ್ಪರ್ಧಾತ್ಮಕವಾಗಿರುವಂತೆ, ಕಂಪೆನಿಯು ಭಾರತೀಯ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಮತ್ತು ಬೆಲೆ ವಿಭಾಗದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿಯೇ, iQOO 15R ನಲ್ಲಿ ಕ್ಯಾಮೆರಾ ಸೆಟಪ್ ಸೇರಿದಂತೆ ಕೆಲವು ಸ್ಪೆಸಿಫಿಕೇಶನ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

ಇನ್ನು ನಾವು ಈಗಾಗಲೇ ತಿಳಿದಿರುವಂತೆ, ಡಿಸೈನ್ ಮತ್ತು ಸಾಫ್ಟ್‌ವೇರ್ ಭಾಗದಲ್ಲಿ iQOO 15R ನಲ್ಲಿ Origin Island ವೈಶಿಷ್ಟ್ಯವನ್ನು ನೀಡಲಾಗುತ್ತಿದೆ. ಇದು ಆಪಲ್‌ನ Dynamic Island ಗೆ ಸಮಾನವಾದ ಅನುಭವ ನೀಡುತ್ತಿದ್ದು, ನೋಟಿಫಿಕೇಶನ್‌ಗಳು, ಲೈವ್ ಆಕ್ಟಿವಿಟಿಗಳು ಮತ್ತು ಕ್ವಿಕ್ ಕಂಟ್ರೋಲ್‌ಗಳನ್ನು ಒಂದೇ ಜಾಗದಲ್ಲಿ ತೋರಿಸುತ್ತದೆ. ಜೊತೆಗೆ, ಕಂಪನಿ ಈ ಫೋನ್‌ಗೆ 4 ವರ್ಷಗಳ Android ಅಪ್‌ಡೇಟ್‌ಗಳು ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್‌ಗಳು ನೀಡುವುದಾಗಿ ಖಚಿತಪಡಿಸಿದೆ, ಇದು ದೀರ್ಘಾವಧಿ ಬಳಕೆಗೆ ದೊಡ್ಡ ಪ್ಲಸ್ ಆಗಿದೆ.

ಬ್ಯಾಟರಿ ವಿಭಾಗದಲ್ಲಿ iQOO 15R ಸ್ಪಷ್ಟವಾಗಿ ಗಮನಸೆಳೆಯುವಂತೆ ಬರುತ್ತಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಭಾರೀ 7,600mAh ಬ್ಯಾಟರಿ ನೀಡಲಾಗಿದ್ದು, ಇಂತಹ ದೊಡ್ಡ ಬ್ಯಾಟರಿಯೊಂದಿಗೆ 7.9mm ಸ್ಲಿಮ್ ಡಿಸೈನ್ ಹೊಂದಿರುವುದು ವಿಶೇಷ. ಕಂಪನಿಯ ಪ್ರಕಾರ, ಇದು ಭಾರತದಲ್ಲಿ 7,600mAh ಬ್ಯಾಟರಿ ವಿಭಾಗದ ಅತ್ಯಂತ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿರಲಿದೆ. ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಬಯಸುವ ಬಳಕೆದಾರರಿಗೆ ಇದು ದೊಡ್ಡ ಆಕರ್ಷಣೆಯಾಗಲಿದೆ.

ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, iQOO 15R ನಲ್ಲಿ ಹೊಸ ತಲೆಮಾರಿನ Qualcomm Snapdragon 8 Gen 5 ಪ್ರೊಸೆಸರ್ ಬಳಕೆಯಲ್ಲಿರಲಿದೆ. ಈ ಚಿಪ್‌ಸೆಟ್ AnTuTu ಬೆಂಚ್‌ಮಾರ್ಕ್‌ನಲ್ಲಿ 3.5 ಮಿಲಿಯನ್‌ಗಿಂತ ಹೆಚ್ಚು ಸ್ಕೋರ್ ಗಳಿಸಿದೆ ಎಂದು ಕಂಪನಿ ಹೇಳಿದೆ. ಹಿಂದಿನ ತಲೆಮಾರಿನೊಂದಿಗೆ ಹೋಲಿಸಿದರೆ, CPU ಕಾರ್ಯಕ್ಷಮತೆಯಲ್ಲಿ ಸುಮಾರು 36% ಸುಧಾರಣೆ ಮತ್ತು AI ಆಧಾರಿತ NPU ಕಾರ್ಯಕ್ಷಮತೆಯಲ್ಲಿ 46% ಹೆಚ್ಚಳ ದೊರೆಯಲಿದೆ ಎಂದು ತಿಳಿಸಲಾಗಿದೆ.

ಬಿಡುಗಡೆ ಯಾವಾಗ?
ಭಾರತದಲ್ಲಿ iQOO 15R ಫೋನ್ ಬಿಡುಗಡೆ ಫೆಬ್ರವರಿ 24ರಂದು ನಡೆಯಲಿದೆ. ಇದರ ಜೊತೆಗೆ, iQOO ಕಂಪನಿ iQOO 15R Sneak Peek Event ಅನ್ನು ಕೂಡ ಘೋಷಿಸಿದೆ. ಈ ಕಾರ್ಯಕ್ರಮ ಫೆಬ್ರವರಿ 22ರಂದು ಕೊಯಮತ್ತೂರಿನಲ್ಲಿ ನಡೆಯಲಿದ್ದು, ಆಯ್ದ ಬಳಕೆದಾರರಿಗೆ ಲಾಂಚ್‌ಗೂ ಮುನ್ನವೇ ಫೋನ್ ಅನ್ನು ಹತ್ತಿರದಿಂದ ಬಳಸುವ ಅವಕಾಶ ನೀಡಲಾಗುತ್ತದೆ. ಈ ಈವೆಂಟ್ ನಂತರ BGMI ಗೇಮಿಂಗ್ ಸೆಷನ್ ಕೂಡ ಆಯೋಜಿಸಲಾಗಿದ್ದು, ಗೇಮಿಂಗ್ ಪ್ರಿಯರಿಗೆ ಇದು ವಿಶೇಷ ಅನುಭವವಾಗಲಿದೆ. ಒಟ್ಟಾರೆಯಾಗಿ, ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ, ಅಪ್‌ಡೇಟ್ ಭರವಸೆ ಮತ್ತು ಆಧುನಿಕ ಡಿಸೈನ್‌ನೊಂದಿಗೆ iQOO 15R, ಭಾರತದಲ್ಲಿ 2026ರ ಅತ್ಯಂತ ಗಮನಾರ್ಹ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗುವ ಸಾಧ್ಯತೆ ಇದೆ.

Best Mobiles in India

English summary
iQOO has officially teased the camera details of its upcoming iQOO 15R smartphone ahead of its India launch. The device is confirmed to feature a 50MP primary camera with a Sony LYT sensor, promising improved low-light photography and accurate colours, positioning it as a strong contender in the mid-range flagship segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+