Home
ಮೊಬೈಲ್

ಭಾರತದಲ್ಲಿ iQOO 15R ಬೆಲೆ ಬಹಿರಂಗ: ಅಫೋರ್ಡಬಲ್ ಪ್ರೈಸ್, ಪ್ರೀಮಿಯಂ ಫೀಚರ್ಸ್!

iQOO ತನ್ನ ಹೊಸ ಸ್ಮಾರ್ಟ್‌ಫೋನ್ iQOO 15R ಅನ್ನು ಭಾರತದಲ್ಲಿ ಫೆಬ್ರವರಿ 24 ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯ ಇತ್ತೀಚಿನ ಘೋಷಣೆಯೊಂದಿಗೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ iQOO 15R ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಫೋನ್‌ನ ಪ್ರೊಸೆಸರ್, ಲಭ್ಯತೆ ಮತ್ತು ಬೆಲೆ ಶ್ರೇಣಿಯ ಕುರಿತು ಪ್ರಮುಖ ಸುಳಿವುಗಳನ್ನು ನೀಡಿದೆ. ಈ ಸ್ಮಾರ್ಟ್‌ಫೋನ್ ಹೈ-ಪರ್ಫಾರ್ಮೆನ್ಸ್ ಸೆಗ್ಮೆಂಟ್‌ನಲ್ಲಿ ಹೊಸ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಇದೇ ವೇಳೆಗೆ ಈ ಫೋನ್ ಬೆಲೆ ಕೂಡ ಸೋರಿಕೆಯಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

iQOO 15R ಬೆಲೆ ಮತ್ತು ಫೀಚರ್ಸ್ (ನಿರೀಕ್ಷಿತವೂ ಸೇರಿದಂತೆ)
iQOO 15R ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ನವೀಕರಿಸಲಾಗಿದೆ, ಇದು 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ಬಹಿರಂಗಪಡಿಸಲಾಗಿದೆ. ಕಂಪನಿಯ ಮಾಹಿತಿಯಂತೆ, ಈ ಫೋನ್ AnTuTu ಬೆಂಚ್‌ಮಾರ್ಕ್‌ನಲ್ಲಿ 35 ಲಕ್ಷಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದೆ. iQOO 15R ಸುಮಾರು 36 ಪ್ರತಿಶತ ಸುಧಾರಿತ CPU ಕಾರ್ಯಕ್ಷಮತೆ ಮತ್ತು ಸುಮಾರು 46 ಪ್ರತಿಶತ ವರ್ಧಿತ NPU ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದರಿಂದ CPU ಕಾರ್ಯಕ್ಷಮತೆಯಲ್ಲಿ ಸ್ಪಷ್ಟವಾದ ಸುಧಾರಣೆ ಮತ್ತು AI ಆಧಾರಿತ ಕಾರ್ಯಗಳಲ್ಲಿ ಉತ್ತಮ ಅನುಭವ ಸಿಗಲಿದೆ.

ಬೆಲೆ ವಿಭಾಗದಲ್ಲಿ, iQOO 15R ಅನ್ನು 55,000 ರೂ. ಒಳಗಿನ ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಎಂದು ಕಂಪನಿ ಬಿಂಬಿಸಿದೆ. ಇದರರ್ಥ ಮುಂಬರುವ iQOO 15R ಅನ್ನು ಭಾರತದಲ್ಲಿ ಡಿಸೆಂಬರ್ 2025 ರಲ್ಲಿ ಅನಾವರಣಗೊಳಿಸಲಾದ OnePlus 15R ನಂತೆಯೇ ಬೆಲೆಯಲ್ಲಿ ಬಿಡುಗಡೆ ಮಾಡಸಬಹುದು. ಇದು ಮೂಲ 12GB RAM ಮತ್ತು 256GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 47,999 ರೂ. ಮತ್ತು 12GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಟಾಪ್-ಆಫ್-ಲೈನ್ ಮಾದರಿಗೆ 52,999 ರೂ. ಬೆಲೆ ಹೊಂದಿತ್ತು. ಈ ಸೂಚನೆಯಂತೆ, ಇದರ ಬೆಲೆ ಅಫೋರ್ಡಬಲ್ ಫ್ಲ್ಯಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ ಇರಬಹುದು ಎಂದು ಅಂದಾಜಿಸಬಹುದು.

ಭಾರತದಲ್ಲಿ iQOO 15R ಬೆಲೆ ಬಹಿರಂಗ: ಅಫೋರ್ಡಬಲ್ ಪ್ರೈಸ್, ಪ್ರೀಮಿಯಂ ಫೀಚರ್ಸ್!

ಡಿಸ್ಪ್ಲೇ ವಿಭಾಗದಲ್ಲಿ, iQOO 15R ನಲ್ಲಿ 6.59 ಇಂಚಿನ 1.5K AMOLED ಡಿಸ್ಪ್ಲೇ ಇರಲಿದೆ ಎಂದು ವರದಿಯಾಗಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲ ನೀಡಲಿದೆ. ಜೊತೆಗೆ, ಈ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿದ್ದು, ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆ ದೊರೆಯುತ್ತದೆ. ಹಾರ್ಡ್‌ವೇರ್ ವಿಷಯದಲ್ಲಿ, ಈ ಫೋನ್‌ನಲ್ಲಿ 16GB ವರೆಗೆ LPDDR5x Ultra RAM ಮತ್ತು 1TB ವರೆಗೆ UFS 4.1 ಸ್ಟೋರೇಜ್ ಸಾಧ್ಯತೆ ಇದೆ. ಕ್ಯಾಮೆರಾ ವಿಭಾಗದಲ್ಲಿ, 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಇರಬಹುದು. ಈ ಸೆಟಪ್ ಫೋಟೋಗ್ರಫಿ ಮತ್ತು 4K ವೀಡಿಯೋ ರೆಕಾರ್ಡಿಂಗ್‌ ನೀಡಲಿದೆ.

ಬ್ಯಾಟರಿ ವಿಚಾರಕ್ಕೆ ಬಂದರೆ, iQOO 15R ನಲ್ಲಿ ದೊಡ್ಡ 7,600mAh ಬ್ಯಾಟರಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ 100W ವೇಗದ ವೈರ್‌ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ದೊರೆಯುವ ಸಾಧ್ಯತೆ ಇದೆ. ಡಿಸೈನ್ ವಿಷಯದಲ್ಲಿ, ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳನ್ನು ಬಲಭಾಗದಲ್ಲಿ ಅಳವಡಿಸಲಾಗಿದೆ. ಇನ್ನು ನಾವು ಈಗಾಗಲೇ ತಿಳಿದಿರುವಂತೆ, iQOO 15R ಅನ್ನು ಫೆಬ್ರವರಿ 24ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಅಮೆಜಾನ್ ಮೂಲಕ ಮಾರಾಟಕ್ಕೆ ಬರಲಿದೆ. ಈ ಫೋನ್ ಕನಿಷ್ಠ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಒಟ್ಟಾರೆಯಾಗಿ, iQOO 15R ತನ್ನ ಶಕ್ತಿಶಾಲಿ ಪ್ರೊಸೆಸರ್, ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ, ದೊಡ್ಡ ಬ್ಯಾಟರಿ ಮತ್ತು ಪ್ರೀಮಿಯಂ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ, ಭಾರತದಲ್ಲಿ ಫ್ಲ್ಯಾಗ್‌ಶಿಪ್ ಕಿಲ್ಲರ್ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಫೆಬ್ರವರಿ ಅಂತ್ಯದ ಬಿಡುಗಡೆ ಟೆಕ್ ಪ್ರಿಯರಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿಸಿದೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
iQOO is set to launch its new high-performance smartphone, the iQOO 15R, in India on February 24. The newly live microsite confirms the Snapdragon 8 Gen 5 chipset, hints at flagship-level performance, and reveals expected pricing details ahead of the official launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+