ಭಾರತಕ್ಕೆ iQOO 15R ಆಗಮನ ಶೀಘ್ರ: ಅಧಿಕೃತ ಟೀಸರ್ ಬಿಡುಗಡೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ iQOO ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ iQOO 15R ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯ ಅಧಿಕೃತ ಟೀಸರ್‌ಗಳು ಈಗಾಗಲೇ ಲಭ್ಯವಾಗಿದ್ದು, ಈ ಫೋನ್ 2025ರ ನವೆಂಬರ್‌ನಲ್ಲಿ ಬಿಡುಗಡೆಯಾದ ಫ್ಲ್ಯಾಗ್‌ಶಿಪ್ iQOO 15 ಬಳಿಕ iQOO 15 ಸರಣಿಯ ಎರಡನೇ ಪ್ರಮುಖ ಮಾದರಿಯಾಗಿ ಮಾರುಕಟ್ಟೆಗೆ ಬರಲಿದೆ. ಹೊಸ ವಿನ್ಯಾಸ ಮತ್ತು ಶಕ್ತಿಶಾಲಿ ಫೀಚರ್‌ಗಳೊಂದಿಗೆ iQOO 15R, ಮಧ್ಯಮ ಭಾರತೀಯ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡಿದೆ.
iQOO ಇಂಡಿಯಾದ ಸಿಇಒ ನಿಪುನ್ ಮರ್ಯಾ ಅವರು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ iQOO 15R ಭಾರತ ಲಾಂಚ್ ಬಗ್ಗೆ ಸುಳಿವು ನೀಡಿದ್ದಾರೆ. "Coming Soon" ಎಂಬ ಸಂದೇಶದೊಂದಿಗೆ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಟೀಸರ್ ಚಿತ್ರಗಳು ಫೋನ್‌ನ ವಿನ್ಯಾಸದ ಬಗ್ಗೆ ಸ್ಪಷ್ಟ ಕಲ್ಪನೆ ನೀಡುತ್ತವೆ. ಚೌಕಾಕಾರದ ಫ್ಲೋಟಿಂಗ್ ಕ್ಯಾಮೆರಾ ಮಾಡ್ಯೂಲ್, ವೃತ್ತಾಕಾರದ ಮೂಲೆಗಳು ಮತ್ತು ಹೊರಭಾಗದಲ್ಲಿರುವ LED ಫ್ಲ್ಯಾಶ್ ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತವೆ.
iQOO 15R ನ ಹಿಂಭಾಗದಲ್ಲಿ ಚೆಕ್ಕರ್ಡ್ ಪ್ಯಾಟರ್ನ್ ಹೊಂದಿರುವ ಬಹುಬಣ್ಣದ ಫಿನಿಶ್ ನೀಡಲಾಗಿದೆ. ಟೀಸರ್‌ನಲ್ಲಿ ಗ್ರೇ ಬಣ್ಣದ ಆಯ್ಕೆ ಕಾಣಿಸಿಕೊಂಡಿದೆ. ಫೋನ್‌ನ ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಇದ್ದು, ಆಂಟೆನಾ ಬ್ಯಾಂಡ್‌ಗಳು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಜೊತೆಗೆ, ಕರ್ವ್ಡ್ ಎಡ್ಜ್‌ಗಳು ಹಿಡಿತ ಮತ್ತು ಲುಕ್ ಎರಡಕ್ಕೂ ಪ್ಲಸ್ ಪಾಯಿಂಟ್ ಆಗಿವೆ. ಒಟ್ಟಾರೆಯಾಗಿ, ಮೊದಲ ನೋಟದ ಪ್ರಕಾರ, ಈ ಫೋನ್ iQOO Z11 Turbo ಯ ರೀಬ್ರ್ಯಾಂಡೆಡ್ ಆವೃತ್ತಿಯಂತೆಯೇ ಇದೆ.

ಸಾಫ್ಟ್‌ವೇರ್ ವಿಭಾಗದಲ್ಲಿ, iQOO 15R ಹೊಸ ತಲೆಮಾರಿನ OriginOS ಮೇಲೆ ಕಾರ್ಯನಿರ್ವಹಿಸುವುದು ಖಚಿತವಾಗಿದೆ. ಈ ಯುಐ ಅನ್ನು ಕಂಪನಿ ಫ್ಲ್ಯಾಗ್‌ಶಿಪ್ iQOO 15 ಜೊತೆ ಪರಿಚಯಿಸಿತ್ತು. ವರದಿಗಳ ಪ್ರಕಾರ, ಈ ಫೋನ್ Android 16 ಆಧಾರಿತ OriginOS 6 ಮೇಲೆ ರನ್ ಆಗುವ ಸಾಧ್ಯತೆ ಇದ್ದು, ಉತ್ತಮ ಪರ್ಫಾರ್ಮೆನ್ಸ್, ಸ್ಮೂತ್ ಅನಿಮೇಷನ್‌ಗಳು ಮತ್ತು ಸುಧಾರಿತ ಪ್ರೈವಸಿ ಫೀಚರ್‌ಗಳನ್ನು ನೀಡಬಹುದು. ಮತ್ತು Snapdragon 8 Gen 5 ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆ ನಿಚ್ಚಳವಾಗಿದೆ.
iQOO Z11 Turbo: ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ!
ಇತ್ತೀಚಿನ ಟೆಕ್ ವಲಯದ ವರದಿಗಳ ಪ್ರಕಾರ, iQOO 15R ಚೀನಾದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಲಿರುವ iQOO Z11 Turbo ಫೋನಿನ ರೀಬ್ರ್ಯಾಂಡೆಡ್ ಆವೃತ್ತಿಯಾಗಿರಬಹುದು ಎನ್ನಲಾಗಿದೆ. ಈಗಾಗಲೇ ಪರಿಚಯಗೊಂಡಿರುವ ಈ ಹೊಸ iQOO Z11 Turbo ಫೋನ್ 6.59 ಇಂಚಿನ ಡಿಸ್‌ಪ್ಲೇ, 200 ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಪ್ರೈಮರಿ ರಿಯರ್ ಕ್ಯಾಮೆರಾ ಮತ್ತು IP68 ಮತ್ತು IP69 ರೇಟಿಂಗ್ ಸೇರಿದಂತೆ ಹಲವಾರು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಿದೆ. (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಒಟ್ಟಾರೆಯಾಗಿ, iQOO 15R ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಆಕರ್ಷಕ ವಿನ್ಯಾಸ, ಫ್ಲ್ಯಾಗ್‌ಶಿಪ್ ಮಟ್ಟದ ಪ್ರೊಸೆಸರ್ ಮತ್ತು ಹೊಸ OriginOS ಅನುಭವದೊಂದಿಗೆ, ಈ ಫೋನ್ ಮಧ್ಯಮ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಬಲವಾದ ಆಯ್ಕೆಯಾಗುವ ನಿರೀಕ್ಷೆ ಇದೆ. ಅಧಿಕೃತ ಬಿಡುಗಡೆ ದಿನಾಂಕ, ಬೆಲೆ ಮತ್ತು ಸಂಪೂರ್ಣ ಸ್ಪೆಸಿಫಿಕೇಶನ್‌ಗಳಿಗಾಗಿ iQOO ಯ ಮುಂದಿನ ಘೋಷಣೆಗಾಗಿ ಗ್ರಾಹಕರು ಕಾಯಬೇಕು. ಆದರೆ, ಇದೇ ಫೆಬ್ರವರಿ ಆರಂಭದಲ್ಲಿ iQOO 15R ಆಗಮನವನ್ನು ನಾವು ನಿರೀಕ್ಷಿಸಿದ್ದೇವೆ.


Click it and Unblock the Notifications








