Home
ಮೊಬೈಲ್

ಭಾರತದಲ್ಲಿ ಫೆ.24ಕ್ಕೆ iQOO 15R ಬಿಡುಗಡೆ: ಬೆಲೆ ಮತ್ತು ಫೀಚರ್ಟ್ ಔಟ್!

ಬಹುನಿರೀಕ್ಷಿತ ಮಿಡ್‌-ರೇಂಜ್ ಫ್ಲಾಗ್‌ಶಿಪ್ iQOO 15R ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇದೇ ಫೆಬ್ರವರಿ 24 ರಂದು ಪರಿಚಯಿಸಲಾಗುತ್ತಿದೆ. ಬಿಡುಗಡೆಗೂ ಮುನ್ನವೇ ಕಂಪನಿಯು iQOO 15R ಸ್ಮಾರ್ಟ್‌ಫೋನ್ ಹೊಂದಿರುವ ಪ್ರಮುಖ ವೈಶಿಷ್ಟ್ಯಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುತ್ತಿದ್ದು, ಇದೀಗ ಬ್ಯಾಟರಿ ಸಾಮರ್ಥ್ಯದ ಮಾಹಿತಿಯು ಟೆಕ್ ಪ್ರಿಯರ ಗಮನ ಸೆಳೆಯುತ್ತಿದೆ. ಹಾಗಾದರೆ, ಮುಂಬರುವ ಹೊಸ iQOO 15R ಸ್ಮಾರ್ಟ್‌ಫೋನ್ ಹೇಗಿರಲಿದೆ?, ಬೆಲೆ ಎಷ್ಟಿರಲಿದೆ ಎಂಬುದನ್ನು ನೋಡೋಣ ಬನ್ನಿ.

7,600mAh ಬ್ಯಾಟರಿ ಇರುವುದು ಖಚಿತ
ಅಧಿಕೃತ X ಪೋಸ್ಟ್ ಮೂಲಕ iQOO, iQOO 15R ನಲ್ಲಿ 7,600mAh ಸಾಮರ್ಥ್ಯದ ಭಾರೀ ಬ್ಯಾಟರಿ ಇರಲಿದೆ ಎಂದು ದೃಢಪಡಿಸಿದೆ. ಇದು ಈಗಿರುವ iQOO 15 ಮಾದರಿಯ 7,000mAh ಬ್ಯಾಟರಿಗಿಂತಲೂ ದೊಡ್ಡದು. ದಿನಪೂರ್ತಿ ಗೇಮಿಂಗ್, ಸ್ಟ್ರೀಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಮಾಡುವ ಬಳಕೆದಾರರಿಗೆ ಇದು ದೊಡ್ಡ ಪ್ಲಸ್ ಆಗಲಿದೆ.

ದೊಡ್ಡ ಬ್ಯಾಟರಿ, ಆದರೆ ಸ್ಲಿಮ್ ಡಿಸೈನ್
ಇಷ್ಟು ದೊಡ್ಡ ಬ್ಯಾಟರಿ ಇದ್ದರೂ, iQOO 15R ಕೇವಲ 7.9 ಮಿಮೀ ದಪ್ಪ ಹೊಂದಿರುತ್ತದೆ. ಕಂಪನಿಯ ಪ್ರಕಾರ, ಇದು ಭಾರತದಲ್ಲಿ 7,600mAh ಬ್ಯಾಟರಿ ವಿಭಾಗದಲ್ಲೇ ಅತಿ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿದೆ. ಹೀಗಾಗಿ, ದಪ್ಪ ಮತ್ತು ಭಾರವಾದ ಫೋನ್ ಎಂಬ ಅನುಭವ ಇಲ್ಲದೇ, ಕೈಯಲ್ಲಿ ಹಗುರಾಗಿ ಹಿಡಿಯಬಹುದಾದ ವಿನ್ಯಾಸವನ್ನು ಇದು ನೀಡಲಿದೆ.

ಭಾರತದಲ್ಲಿ ಫೆ.24ಕ್ಕೆ iQOO 15R ಬಿಡುಗಡೆ: ಬೆಲೆ ಮತ್ತು ಫೀಚರ್ಟ್ ಔಟ್!

Snapdragon 8 Gen 5 ಪ್ರೊಸೆಸರ್ ಶಕ್ತಿ
iQOO 15R ನಲ್ಲಿ Snapdragon 8 Gen 5 ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಹೊಂದಿರಲಿದೆ. 3nm ತಂತ್ರಜ್ಞಾನದಲ್ಲಿ ತಯಾರಿಸಲಾದ ಈ ಪ್ರೊಸೆಸರ್, ವೇಗ ಮತ್ತು ದಕ್ಷತೆಯಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ನೀಡುತ್ತದೆ. ಕಂಪನಿಯ ಹೇಳಿಕೆಯಂತೆ, ಈ ಚಿಪ್‌ಸೆಟ್ 36% ಹೆಚ್ಚುವರಿ CPU ಕಾರ್ಯಕ್ಷಮತೆ ಮತ್ತು 46% ಉತ್ತಮ NPU ಕಾರ್ಯಕ್ಷಮತೆ ಒದಗಿಸುತ್ತದೆ. AnTuTu ಬೆಂಚ್‌ಮಾರ್ಕ್‌ನಲ್ಲಿ ಇದು 3.5 ಮಿಲಿಯನ್‌ಗಿಂತ ಹೆಚ್ಚು ಸ್ಕೋರ್ ಗಳಿಸಿದೆ ಎನ್ನಲಾಗಿದೆ.

ಬೆಲೆ ವಿಭಾಗದಲ್ಲಿ ತೀವ್ರ ಸ್ಪರ್ಧೆ
iQOO ಮೈಕ್ರೋಸೈಟ್ ಪ್ರಕಾರ, ₹55,000 ಒಳಗಿನ ಬೆಲೆ ವಿಭಾಗದಲ್ಲಿ ಅತಿ ವೇಗದ ಸ್ಮಾರ್ಟ್‌ಫೋನ್ ಎಂಬ ಸ್ಥಾನವನ್ನು iQOO 15R ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಇದರ ಬೆಲೆ OnePlus 15R ಗೆ ಸಮೀಪವಾಗಿರಬಹುದು ಎಂಬ ನಿರೀಕ್ಷೆ ಇದೆ. OnePlus 15R ಅನ್ನು ಭಾರತದಲ್ಲಿ ₹47,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದ್ದು, ಅದೂ ಸಹ Snapdragon 8 Gen 5 ಪ್ರೊಸೆಸರ್‌ನನ್ನೇ ಬಳಸುತ್ತದೆ. ಇದರಿಂದ iQOO 15R ಬೆಲೆಯು ಇದಕ್ಕಿಂತಲೂ ಕಡಿಮೆ ಇರುವ ಸಾಧ್ಯತೆ ಇದೆ.

ಬಣ್ಣ ಆಯ್ಕೆಗಳು
iQOO ಈಗಾಗಲೇ Dark Knight ಬಣ್ಣದ ವೇರಿಯಂಟ್ ಅನ್ನು ಅಧಿಕೃತವಾಗಿ ಟೀಸ್ ಮಾಡಿದೆ. ಇದರ ಜೊತೆಗೆ, ಭಾರತಕ್ಕೆ ವಿಶೇಷವಾಗಿ ನೀಲಿ ಬಣ್ಣದ ಮತ್ತೊಂದು ಆವೃತ್ತಿ ಕೂಡ ಬರಲಿದೆ ಎಂದು ಸೂಚಿಸಲಾಗಿದೆ. ಆದರೆ ಆ ಬಣ್ಣದ ಅಧಿಕೃತ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಲಾಂಚ್ ದಿನಾಂಕ ಮತ್ತು ನಿರೀಕ್ಷೆಗಳು
iQOO 15R ಅನ್ನು ಫೆಬ್ರವರಿ 24 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ದೊಡ್ಡ ಬ್ಯಾಟರಿ, ಶಕ್ತಿಶಾಲಿ ಫ್ಲ್ಯಾಗ್‌ಶಿಪ್ ಪ್ರೊಸೆಸರ್ ಮತ್ತು ಸ್ಲಿಮ್ ವಿನ್ಯಾಸದ ಸಂಯೋಜನೆಯೊಂದಿಗೆ, ಈ ಫೋನ್ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಲಾಂಚ್ ಹತ್ತಿರವಾಗುತ್ತಿದ್ದಂತೆ, ಕ್ಯಾಮೆರಾ, ಡಿಸ್ಪ್ಲೇ ಮತ್ತು ಚಾರ್ಜಿಂಗ್ ವಿವರಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದೆ. ಅಲ್ಲಿಯವರೆಗೂ, ಸಂಪೂರ್ಣ ಟೆಕ್ ಮಾಹಿತಿಗಾಗಿ ನಿಮ್ಮ ನೆಚ್ಚಿನ ಕನ್ನಡ ಗಿಜ್‌ಬಾಟ್ ಅನ್ನು ಫಾಲೊ ಮಾಡುತ್ತಿರಿ.

Best Mobiles in India

English summary
The upcoming iQOO 15R is set to launch in India on February 24, featuring a massive 7,600mAh battery packed into a slim 7.9mm design. Aimed at gamers and power users, the mid-range flagship promises all-day performance with a sleek and lightweight build.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+