iQOO ಇದೀಗ ಹೊಸ ಫ್ಲ್ಯಾಗ್‌ಶಿಪ್ ಫೋನ್ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ!..ಯಾವುದು ಗೊತ್ತಾ?
ಚೀನಾದ ಫೋನ್ ತಯಾರಕ ವಿವೋದ ಉಪ-ಬ್ರಾಂಡ್ ಆಗಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ iQOO ಇದೀಗ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಹೊಸ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ..! ಹೌದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಜನಪ್ರಿಯವಾಗಿರುವ iQOO ಕಂಪೆನಿ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ನೀಡುವ ನಿರೀಕ್ಷೆಯಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿರುವ ಶಕ್ತಿಶಾಲಿ ಚಿಪ್‌ಸೆಟ್ ಹೊಂದಿರುವ ಸ್ಮಾರ್ಟ್‌ಫೋನ್ ತರುತ್ತಿದೆ ಎಂದು ಜನಪ್ರಿಯ ಟಿಪ್‌ಸ್ಟರ್ DCS ಹಂಚಿಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಜನಪ್ರಿಯ ಟಿಪ್‌ಸ್ಟರ್ DCS ಹಂಚಿಕೊಂಡ ಮಾಹಿತಿಯ ಪ್ರಕಾರ, iQOO ಹೊಸದಾಗಿ 6.82-ಇಂಚಿನ OLED 2K ರೆಸಲ್ಯೂಶನ್ ಫ್ಲಾಟ್ ಡಿಸ್ಪ್ಲೇ ಪ್ಯಾನೆಲ್ ಅನ್ನು ಒಳಗೊಂಡಿರುವ ಹೊಸ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ, ಈ ಸಾಧನವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ನಿಂದ ಚಾಲಿತವಾಗಲಿದೆ ಮತ್ತು ಸ್ವತಂತ್ರ ಗ್ರಾಫಿಕ್ಸ್ ಚಿಪ್ ಅನ್ನು ಸಹ ಹೊಂದಿರುತ್ತದೆ. ಇದು ಬಳಕೆದಾರರಿಗೆ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

iQOO ಈ ಸಾಧನದಲ್ಲಿ ಅಲ್ಟ್ರಾ-ಸಾನಿಕ್ ಸಿಂಗಲ್ ಪಾಯಿಂಟ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಸಂಯೋಜಿಸಬಹುದು. ಸಾಮಾನ್ಯವಾಗಿ, ಅಲ್ಟ್ರಾ-ಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ನ ಬೆಲೆ ಏನಾಗಿರುತ್ತದೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿರುತ್ತದೆ. ಇನ್ನು iQOO ನಿಂದ ಈ ಹೊಸ ಸ್ಮಾರ್ಟ್‌ಫೋನ್ 2025 ರ ಮೊದಲಾರ್ಧದಲ್ಲಿ ಬಿಡುಗಡೆಯಾಗಲಿದೆ ಎಂದು DCS ಹೇಳಿದೆ.
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಕುರಿತು iQOO ಈ ಸಾಧನದ ಬಗ್ಗೆ ಇನ್ನೂ ಏನನ್ನೂ ದೃಢೀಕರಿಸದಿದ್ದರೂ, iQOO ನಿಯೋ 9S ಪ್ರೊ+ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಒಳಗೊಂಡಿತ್ತು. ಇದು 2024 ರ ಕ್ವಾಲ್ಕಾಮ್‌ನ ಪ್ರಮುಖ ಚಿಪ್‌ಸೆಟ್ ಆಗಿತ್ತು. ಹಾಗಾಗಿ, ಮುಂಬರುವ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆ ಹೆಚ್ಚಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಪ್ರೊಸೆಸರ್ ಪ್ರಸ್ತುತ ಆಂಡ್ರಾಯ್ಡ್ ಫೋನ್‌ಗಳಿಗೆ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಚಿಪ್‌ಸೆಟ್ ಆಗಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ, ಒನ್‌ಪ್ಲಸ್ 13 5G, iQOO 13 5G, ಮತ್ತು ಇತರ ಕೆಲವೇ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಾಗುತ್ತಿದೆ. ಈ ಪ್ರೊಸೆಸರ್ ಇದೀಗ iQOO ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನಿನಲ್ಲಿ ಬರುತ್ತಿರುವುದು ನಿರೀಕ್ಷೆಯನ್ನು ಹೆಚ್ಚಿಸಿದೆ.
iQOO ತನ್ನ ಈ ಹೊಸ ಫೋನ್‌ನ ಬೆಲೆ ಮತ್ತು ಬಿಡುಗಡೆಯ ಬಗ್ಗೆ iQOO ಕಂಪನಿಯು ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಈ ಹೊಸ ಸಾಧನವನ್ನು ನಿಖರವಾಗಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ. ಏಕೆಂದರೆ, ಸ್ನಾಪ್‌ಡ್ರಾಗನ್ 8 ಎಲೈಟ್ SoC ಅನ್ನು ಒಳಗೊಂಡಿರುವ ಅನೇಕ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿವೆ, ಆದರೆ 50,000 ರೂಕ್ಕಿಂತ ಕಡಿಮೆ ಬೆಲೆಯ ಯಾವುದೇ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.ನೆನಪಿರಲಿ iQOO ಬಜೆಟ್ ಬೆಲೆಯ ಪ್ರೀಮಿಯಂ ಫೋನ್‌ಗಳಿಗೆ ಹೆಸರುವಾಸಿ.


Click it and Unblock the Notifications








