ಭಾರತದಲ್ಲಿ iQOO Neo 10 ಭರ್ಜರಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ?!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ iQOO ತನ್ನ ಮಧ್ಯಮ ಶ್ರೇಣಿಯ ನಿಯೋ ಸರಣಿಯ ಅಡಿಯಲ್ಲಿ ಭಾರತದಲ್ಲಿ ಹೊಸ ಗೇಮಿಂಗ್-ಕೇಂದ್ರಿತ ಸ್ಮಾರ್ಟ್‌ಫೋನ್ ಅನ್ನು ಇಂದು ಬಿಡುಗಡೆ ಮಾಡಿದೆ. ಕಳೆದ ಕೆಲವು ದಿನಗಳಿಂದ ದೇಶದ ಮೊಬೈಲ್ ಪ್ರಿಯರನ್ನು ಕುತೂಹಲದಲ್ಲಿ ಇಟ್ಟ iQOO Neo 10 ಸ್ಮಾರ್ಟ್‌ಫೋನ್ ಇದೀಗ ಅಧಿಕೃತವಾಗಿ ಮಾರುಕಟ್ಟೆಗೆ ಬಂದಿದ್ದು, ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ದೇಶದ ಮೊದಲ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ, ಹೊಸ ಗೇಮಿಂಗ್-ಕೇಂದ್ರಿತ iQOO Neo 10 ಸ್ಮಾರ್ಟ್‌ಫೋನ್ ಹೇಗಿದೆ, ಬೆಲೆ ಎಷ್ಟು ಮತ್ತು ಇದರ ಸಂಪೂರ್ಣ ಫೀಚರ್‌ಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
iQOO Neo 10: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹೊಸ iQOO Neo 10 ಸ್ಮಾರ್ಟ್‌ಫೋನನ್ನು ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಇವುಗಳಲ್ಲಿ, ಮೂಲ 8GB RAM/128GB ಸಂಗ್ರಹಣೆ ಮಾದರಿಯು ₹31,999 ಕ್ಕೆ ಬಿಡುಗಡೆಯಾಗಿದ್ದರೆ, ಇದರ 8GB RAM/256GB ಸಂಗ್ರಹಣೆ ಆಯ್ಕೆಯು ₹33,999, 12GB RAM/256GB ಸಂಗ್ರಹಣೆ ಮಾದರಿಯು ₹35,999, ಮತ್ತು ಉನ್ನತ ಶ್ರೇಣಿಯ 16GB RAM/512GB ಸಂಗ್ರಹಣೆ ಮಾದರಿಯು ₹40,999 ಬೆಲೆಯಲ್ಲಿ ಪರಿಚಯಗೊಂಡಿವೆ. ಬಿಡುಗಡೆ ಕೊಡುಗೆಯಾಗಿ ಆಯ್ದ ಕಾರ್ಡ್‌ಗಳಿಗೆ ₹2,000 ರಿಯಾಯಿತಿ ಲಭ್ಯವಿದ್ದು, ಇದರಿಂದ ಬೆಲೆಗಳು ಕ್ರಮವಾಗಿ ₹29,999, ₹31,999, ₹33,999 ಮತ್ತು ₹38,999 ಗೆ ಇಳಿಯುತ್ತವೆ ಎಂದು ಕಂಪನಿಯು ತಿಳಿಸಿದೆ. iQOO Neo 10 ಸ್ಮಾರ್ಟ್‌ಫೋನ್ ಜೂನ್ 3 ರಿಂದ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಮತ್ತು ಐಕ್ಯೂನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
iQOO Neo 10 ವೈಶಿಷ್ಟ್ಯಗಳು,
iQOO Neo 10 ಸ್ಮಾರ್ಟ್‌ಫೋನ್ 6.78-ಇಂಚಿನ 144Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 5,500 ನಿಟ್ಸ್ ಗರಿಷ್ಠ ಹೊಳಪನ್ನು (ಹೆಚ್ಚಿನ ಹೊಳಪು ಮೋಡ್‌ನಲ್ಲಿ 2,000 ನಿಟ್ಸ್) ಮತ್ತು 4,320Hz PWM ಡಿಮ್ಮಿಂಗ್ ವೈಶಿಷ್ಟ್ಯವನ್ನು ನೀಡುತ್ತದೆ. ಫೋನ್ IP65 ಧೂಳು ಮತ್ತು ನೀರಿನ ಪ್ರತಿರೋಧ ರಕ್ಷಣೆಯನ್ನು ಹೊಂದಿದ್ದು, ಇದು ಲಘು ಮಳೆ ಮತ್ತು ಸ್ಪ್ಲಾಶ್‌ಗಳನ್ನು ತಡೆಯುತ್ತದೆ. ಪ್ರೊಸೆಸರ್ ವಿಭಾಗದಲ್ಲಿ, ಮೊದಲೇ ಹೇಳಿದಂತೆ, ಈ ಸ್ಮಾರ್ಟ್‌ಫೋನ್ ಅಡ್ರಿನೊ 825 GPU ಜೊತೆಗೆ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು LPDDR5X RAM ಮತ್ತು UFS 4.1 ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ, ಹಾಗೂ 8GB RAM/128GB ಯಿಂದ 16GB RAM/512GB ಸಂಗ್ರಹಣೆ ಮಾದರಿ ವರೆಗೂ ಆಯ್ಕೆಗಳಿವೆ. ಈ ಪ್ರೊಸೆಸರ್ iQOO Neo 10 ಸ್ಮಾರ್ಟ್‌ಫೋನಿನ ಉತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ
ಕ್ಯಾಮೆರಾ ವಿಭಾಗದಲ್ಲಿ, QOO Neo 10 ಸ್ಮಾರ್ಟ್‌ಫೋನಿನಲ್ಲಿ OIS ನೊಂದಿಗೆ 50MP ಸೋನಿ IMX882 ಪ್ರಾಥಮಿಕ ಶೂಟರ್ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ನೀಡಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 32MP ಮುಂಭಾಗದ ಕ್ಯಾಮೆರಾ ಇದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ವಿವೋದ ಫನ್‌ಟಚ್ OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಐಕ್ಯೂ ಮೂರು ವರ್ಷಗಳ OS ನವೀಕರಣಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.ಬ್ಯಾಟರಿ ವಿಭಾಗದಲ್ಲಿ, iQOO Neo 10 ಸ್ಮಾರ್ಟ್‌ಫೋನ್ 7,000mAh ಬ್ಯಾಟರಿಯನ್ನು ಹೊಂದಿದೆ, ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಸಂಪರ್ಕದ ವಿಷಯದಲ್ಲಿ, iQOO Neo 10 ಸ್ಮಾರ್ಟ್‌ಫೋನ್ 16 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ, ಜೊತೆಗೆ IR ಬ್ಲಾಸ್ಟರ್, NFC, ಬ್ಲೂಟೂತ್ 5.4, ಮತ್ತು Wi-Fi 7 ವೈಶಿಷ್ಟ್ಯಗಳನ್ನು ಹೊಂದಿದೆ.

ಗಮನಿಸುವುದಾದರೆ, ಭಾರತದಲ್ಲಿ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತಿರುವ ಮೊದಲ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿಪ್‌ಸೆಟ್ ಕಳೆದ ವರ್ಷದ 8s Gen 3 SoC ಯ ಉತ್ತರಾಧಿಕಾರಿಯಾಗಿದೆ. 8s Gen 3 SoC ಚಿಪ್‌ಸೆಟ್ Poco F6, Realme GT 6, ಮತ್ತು iQOO ನಿಯೋ 10R ನಂತಹ ಹಲವು ಫೋನ್‌ಗಳಿಗೆ ಶಕ್ತಿ ತುಂಬಿತ್ತು. ಇದೀಗ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 4 ಚಿಪ್‌ಸೆಟ್ ಕಾರ್ಯನಿರ್ವಹಣೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಮತ್ತೊಂದು ವಿಷಯವೆಂದರೆ, iQOO Neo 10 ಸ್ಮಾರ್ಟ್‌ಫೋನ್ 7,000mAh ಬ್ಯಾಟರಿಯನ್ನು ಹೊಂದಿದೆ, ಇದು 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಇದು iQOO 13 ರಲ್ಲಿ ಕಂಡುಬಂದ ವೈಶಿಷ್ಟ್ಯವಾಗಿದೆ. ಆದರೆ, ಈ ಫೋನ್‌ನಲ್ಲಿ ವೈರ್‌ಲೆಸ್ ಚಾರ್ಜಿಂಗ್‌ಗೆ ಯಾವುದೇ ಬೆಂಬಲವಿಲ್ಲ ಎಂಬುದನ್ನು ಗಮನಿಸಬಹುದು.


Click it and Unblock the Notifications








