Home
ಮೊಬೈಲ್

ಇದೇ ಮಾರ್ಚ್ 11 ರಂದು 'iQOO Neo 10R' ಬಿಡುಗಡೆ!..ಫೀಚರ್ಸ್ ವಿವರಗಳು ಬಹಿರಂಗ!

ಯುವ ಗೇಮಿಂಗ್ ಪ್ರಿಯರು ಬಹು ನಿರೀಕ್ಷೆಯಿಂದ ಎದುರುನೋಡುತ್ತಿರುವ 'iQOO Neo 10R' ಸ್ಮಾರ್ಟ್‌ಫೋನ್ ಇದೇ ಮಾರ್ಚ್ 11 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ಬಹುಶಃ ನಿಮಗೂ ತಿಳಿದಿರಬಹುದು. ಇದೀಗ ಬಿಡುಗಡೆಗೆ ಮುನ್ನವೇ, ಕಂಪನಿಯು iQOO Neo 10R ಸ್ಮಾರ್ಟ್‌ಫೋನ್ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದೆ. "ವಿಭಾಗದಲ್ಲಿ ಅತ್ಯಂತ ವೇಗದ ಸ್ಮಾರ್ಟ್‌ಫೋನ್" ಎಂದು ಹೇಳಿಕೊಂಡಿರುವ ಕಂಪೆನಿಯು, iQOO Neo 10R ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ವೈಶಿಷ್ಟ್ಯಗಳ ಜೊತೆಗೆ ಗೇಮಿಂಗ್ ಸಾಮರ್ಥ್ಯದ ಕುರಿತಂತೆ ಬಿಡುಗಡೆಗೆ ಮುನ್ನವೇ ದೃಢಪಡಿಸಿದೆ.! ಹಾಗಾದರೆ, ಮುಂಬರುವ iQOO Neo 10R ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

iQOO Neo 10R ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು.

ಮುಂಬರುವ iQOO Neo 10R ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ 1/1.953-ಇಂಚಿನ ಸೋನಿ ಸೆನ್ಸರ್ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾದ 8-ಮೆಗಾಪಿಕ್ಸೆಲ್ ಸೆನ್ಸರ್ ಸೇರಿದಂತೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿರುತ್ತದೆ. ಹಾಗೂ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು 4K 60fps (ಸೆಕೆಂಡಿಗೆ ಫ್ರೇಮ್‌ಗಳು) ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಮಾರ್ಚ್ 11 ರಂದು 'iQOO Neo 10R' ಬಿಡುಗಡೆ!..ಫೀಚರ್ಸ್ ವಿವರಗಳು ಬಹಿರಂಗ!

ಕಂಪೆನಿಯ ಅಧಿಕೃತ ಮೈಕ್ರೋಸೈಟ್ ಪ್ರಕಾರ, iQOO Neo 10R 5 ಸ್ಮಾರ್ಟ್‌ಫೋನಿನಲ್ಲಿ 4,500nits ಬ್ರೈಟ್‌ನೆಸ್, 2,000Hz ಟಚ್ ಸ್ಲಾಪಿಂಗ್ ಮತ್ತು 3,840Hz PWM ಡಿಮ್ಮಿಂಗ್ ರೇಟ್ ಹೊಂದಿರುವ 1.5K ಡಿಸ್‌ಪ್ಲೇ ಹೊಂದಿರಲಿದೆ. 90fps ಗೇಮಿಂಗ್ ಅನುಭವ ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಇದಕ್ಕಾಗಿ ಹ್ಯಾಂಡ್‌ಸೆಟ್‌ನಲ್ಲಿ 6043mm² ಆವಿಯ ಕೂಲಿಂಗ್ ಚೇಂಬರ್ ಜೊತೆಗೆ ಗೇಮಿಂಗ್ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುವ ಮೀಸಲಾದ ಇ-ಸ್ಪೋರ್ಟ್ಸ್ ಮೋಡ್ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ ಎಂಬುದನ್ನು ಸಹ ಖಚಿತಪಡಿಸಲಾಗಿದೆ.

ಇದಿಷ್ಟೇ ಅಲ್ಲದೇ, ಹೊಸ iQOO Neo 10R ನಲ್ಲಿ iQOO ಕಂಪೆನಿಯು 6,400mAh ಬ್ಯಾಟರಿಯನ್ನು ಪ್ಯಾಕ್ ಮಾಡಿರುವುದಾಗಿ ಮತ್ತು ಈ ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿಯು ಮಾಹಿತಿ ನೀಡಿದ್ದು. ಇದು ಸ್ನಾಪ್‌ಡ್ರಾಗನ್ 8s Gen 3 SoC ನಿಂದ ಚಾಲಿತವಾಗಲಿದೆ ಮತ್ತು7.98mm ಪ್ರೊಫೈಲ್ ಅನ್ನು ಹೊಂದಿರುತ್ತದೆ. ಹಾಗೂ ಮೂನ್‌ನೈಟ್ ಟೈಟಾನಿಯಂ ಮತ್ತು ರೇಜಿಂಗ್ ಬ್ಲೂ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿದೆ.

iQOO Neo 10R ಸ್ಮಾರ್ಟ್‌ಫೋನಿನ ಬೆಲೆ ಎಷ್ಟು?

ಈ ಹಿಂದೆಯೇ, iQOO Neo 10R ಚಿಪ್‌ಸೆಟ್, ಚಾರ್ಜಿಂಗ್ ವೇಗ ಮತ್ತು ಹ್ಯಾಂಡ್‌ಸೆಟ್‌ನ ಸಂಭಾವ್ಯ ಬೆಲೆ ಆನ್‌ಲೈನಿನಲ್ಲಿ ಕಾಣಿಸಿಕೊಂಡಿತ್ತು. AnTuTu ಮಾನದಂಡದಲ್ಲಿ 1.7 ಮಿಲಿಯನ್‌ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದು ಹೇಳಲಾಗಿರುವ ಈ ಸ್ಮಾರ್ಟ್‌ಫೋನ್ 30,000 ಕ್ಕಿಂತ ಕಡಿಮೆ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನನ್ನು 12GB ವರೆಗೆ ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ನೀಡಲಾಗುವುದು ಎಂದು ವರದಿಯಾಗಿದೆ. ಹಾಗೆಯೇ, ಈ ಫೋನ್ 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ OLED ಪರದೆಯನ್ನು ಪಡೆಯುವ ಸಾಧ್ಯತೆಯಿದೆ. ಹಾಗೂ, ಅಮೆಜಾನ್ ಮತ್ತು iQOO ಇಂಡಿಯಾ ಇ-ಸ್ಟೋರ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
The iQOO Neo 10R will feature a triple rear camera setup, which includes a 50-megapixel Sony sensor measuring 1/1.953 inches and an 8-megapixel sensor equipped with an ultra-wide-angle lens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+