Home
ಮೊಬೈಲ್

iQOO Neo 10R ಬಿಡುಗಡೆಗೆ ಮುಹೂರ್ತ ಫಿಕ್ಸ್; 30,000ಕ್ಕಿಂತ ಕಡಿಮೆ ಬೆಲೆ.. ಯಾರೂ ನಿರೀಕ್ಷಿಸದ ಫೀಚರ್ಸ್‌

ಐಕ್ಯೂ ಸಂಸ್ಥೆಯು ತನ್ನ ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೊಬೈಲ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಇದು ಭಾರತದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತದೆ. ಈಗಾಗಲೇ ಐಕ್ಯೂ ನಿಯೋ 10R ಡಿಸೈನ್ ಬಹಿರಂಗವಾಗಿದೆ. ನೀವು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಸಬಹುದು. ಬನ್ನಿ, ಹೊಸ ಐಕ್ಯೂ ನಿಯೋ 10R ಫೋನಿನ ಬಿಡುಗಡೆ ದಿನಾಂಕ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹೌದು, ಕಂಪನಿಯು ಐಕ್ಯೂ ನಿಯೋ 10R (iQOO Neo 10R) ಫೋನಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು 6.78 ಇಂಚಿನ 1.5K ಡಿಸ್ಪ್ಲೇ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಇರುತ್ತದೆ. ಈ ಮೊಬೈಲ್ 6,400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುತ್ತದೆ. ಹಾಗೆಯೇ 12GB + 256GB ಸ್ಟೋರೇಜ್, 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

iQOO Neo 10R ಬಿಡುಗಡೆ ದಿನಾಂಕ ಘೋಷಣೆ; 30,000ಕ್ಕಿಂತ ಕಡಿಮೆ.. ಹೀಗಿವೆ ಫೀಚರ್ಸ್

ಐಕ್ಯೂ ನಿಯೋ 10R ಬಿಡುಗಡೆ ದಿನಾಂಕ

ಭಾರತದಲ್ಲಿ ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಕಂಪನಿಯು ಫೋನಿನ ಟೀಸರ್ ಫೋಟೋ ಹಂಚಿಕೊಂಡಿದೆ. ಇದನ್ನು 'ರೇಜಿಂಗ್ ಬ್ಲೂ' ಎಂದು ಕರೆದಿದೆ. ಈ ಮೊಬೈಲ್‌ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಈ ಫೋನಿನ ಹಿಂಭಾಗವು ನೀಲಿ ಬಣ್ಣವನ್ನು ಹೊಂದಿದೆ. ಎರಡು ಬದಿಗಳಲ್ಲಿ ಬಿಳಿ ಬಣ್ಣ ಕಾಣಬಹುದು. ಈ ಬಣ್ಣನ್ನು ಭಾರತದಲ್ಲಿ ಮಾತ್ರ ಬಿಡುಗಡೆ ಮಾಡಲಾಗುವುದ. ಇತರೆ ಮಾರುಕಟ್ಟೆಗಳಲ್ಲಿ ಇದು ಲಭ್ಯವಿರುವುದಿಲ್ಲ.

ಐಕ್ಯೂ ನಿಯೋ 10R ಬೆಲೆ

ಕಂಪನಿಯು ಐಕ್ಯೂ ನಿಯೋ 10R ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಟೀಸರ್‌ನಲ್ಲಿ ಐಕ್ಯೂ ನಿಯೋ 10R ಫೋನಿನ ಬೆಲೆ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತದಲ್ಲಿ ಈ ಮೊಬೈಲ್ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. iQOO Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿಯನ್ನು ಚೀನಾದಲ್ಲಿ 23,000 ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇನ್ನೂ ಕಳೆದ ವರ್ಷ ಐಕ್ಯೂ ನಿಯೋ 9 ಪ್ರೊ ಫೋನನ್ನು 35,999 ರೂ.ಗೆ ಪರಿಚಯಿಸಲಾಗಿತ್ತು.

ಐಕ್ಯೂ ನಿಯೋ 10R ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ ನಿಯೋ 10R ಫೋನ್ 6.78 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 144Hz ರಿಫ್ರೆಶ್ ದರದ ಬೆಂಬಲ ಪಡೆದಿರುವ ನಿರೀಕ್ಷೆಯಿದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿರುತ್ತದೆ. ಕಂಪನಿಯು ಈಗಾಗಲೇ ದೃಢಪಡಿಸಿದೆ. ಈ ಫೋನ್ ಆಂಡ್ರಾಯ್ಡ್‌ 15 (Android 15) ಆಧಾರಿತ Funtouch ಓಸ್‌ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 8GB + 256GB ಮತ್ತು 12GB + 256GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು 8GB + 128GB ರೂಪಾಂತರದಲ್ಲೂ ಬರಬಹುದು ಎಂದು ಹೇಳಲಾಗಿದೆ.

ಕ್ಯಾಮೆರಾ ಸೆಟಪ್

ಐಕ್ಯೂ ನಿಯೋ 10R ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಐಕ್ಯೂ ನಿಯೋ 9 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ IMX920 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 6400mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಬೃಹತ್ ಬ್ಯಾಟರಿ ಹೊಂದಿರುವ ಫೋನ್‌ಗಳಲ್ಲಿ ಒಂದಾಗಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇನ್ನೂ ಐಕ್ಯೂ ನಿಯೋ 9 ಪ್ರೊ ಫೋನ್ 5,160mAh ಬ್ಯಾಟರಿ ಹೊಂದಿದೆ.

Best Mobiles in India

English summary
iQOO Neo 10R India launch date officially confirmed; to go on sale via Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+