Home
ಮೊಬೈಲ್

ಇಂದು ಭಾರತದಲ್ಲಿ iQOO Neo 10R ಬಿಡುಗಡೆ; ಬಜೆಟ್ ಬೆಲೆ.. ವಿಶೇಷತೆಗಳೇನು ಗೊತ್ತಾ?

ಬಹುನಿರೀಕ್ಷಿತ ಐಕ್ಯೂ ನಿಯೋ 10R (iQOO Neo 10R) ಮೊಬೈಲ್ ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ಕಂಪನಿಯು ಈ ಫೋನನ್ನು 30,000 ರೂ. ಬಜೆಟ್‌ ಒಳಗೆ ಮಾರುಕಟ್ಟೆಗೆ ಪರಿಚಯಿಸಲಿದೆ. ಹೌದು, ಗೇಮಿಂಗ್ ಪ್ರಿಯರು ಈ ಹೊಸ ಫೋನಿನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸ್ಮಾರ್ಟ್‌ಫೋನ್ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಇದು ಭಾರೀ ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ. ಈ ಫೋನಿನ ಲಾಂಚ್ ಈವೆಂಟ್, ನಿರೀಕ್ಷಿತ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಅಮೆಜಾನ್‌ನಲ್ಲಿ ಈಗಾಗಲೇ ಐಕ್ಯೂ ನಿಯೋ 10R ಮೈಕ್ರೋ ಸೈಟ್ ಲೈವ್ ಆಗಿದೆ. ಈ ಮೂಲಕ ಪ್ರಮುಖ ವೈಶೀಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.78 ಇಂಚಿನ 1.5K ಐ ಕೇರ್ ಅಮೋಲೆಡ್‌ ಡಿಸ್ಪ್ಲೇ ಹೊಂದಿರುತ್ತದೆ. ಜೊತೆಗೆ 12GB RAM + 256GB ಸ್ಟೋರೇಜ್, 6400mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಇಂದು iQOO Neo 10R ಬಿಡುಗಡೆ; ಬಜೆಟ್ ಬೆಲೆ.. ವಿಶೇಷತೆಗಳೇನು ಗೊತ್ತಾ?

ಐಕ್ಯೂ ನಿಯೋ 10R ಬೆಲೆ (ನಿರೀಕ್ಷಿತ)

ಐಕ್ಯೂ ನಿಯೋ 10R ಮೊಬೈಲ್ ಮಧ್ಯಮ ಬಜೆಟ್‌ನಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಈ ಮೊಬೈಲ್ ಅನ್ನು 12GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಪರಿಚಯಿಸಲಿದೆ. ವರದಿಯ ಪ್ರಕಾರ, ಈ ಸ್ಮಾರ್ಟ್‌ಫೋನ್‌ 30 ಸಾವಿರ ರೂ.ಗಳ ವಿಭಾಗದಲ್ಲಿ ಮಾರಾಟ ಮಾಡಲಾಗುವುದು. ಬ್ಯಾಂಕ್ ಆಫರ್ ಮತ್ತು ರಿಯಾಯಿತಿಗಳೊಂದಿಗೆ 30,000 ರೂ.ಗಿಂತ ಕಡಿಮೆ ಬೆಲೆಗೆ ಈ ಮೊಬೈಲ್ ಲಭ್ಯವಾಗಲಿದೆ.

ಐಕ್ಯೂ ನಿಯೋ 10R ಬಿಡುಗಡೆ ವಿವರ

ಐಕ್ಯೂ ನಿಯೋ 10R 5G ಫೋನ್ ಇಂದು (ಮಾರ್ಚ್ 11) ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಲಾಂಚ್ ಈವೆಂಟ್‌ ಅನ್ನು ಕಂಪನಿಯು ಇಂದು ಸಂಜೆ 4 ಗಂಟೆಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಸಹ ಬಿಡುಗಡೆ ಸಮಾರಂಭವನ್ನು ವೀಕ್ಷಿಸಬಹುದು. ಈ ಮೂಲಕ ಐಕ್ಯೂ ನಿಯೋ 10R ಬೆಲೆ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಿದೆ. ಜೊತೆಗೆ ಮಾರಾಟ ದಿನಾಂಕ ಮತ್ತು ಆಫರ್ ಬಗ್ಗೆ ಮಾಹಿತಿ ನೀಡಲಿದೆ.

ಐಕ್ಯೂ ನಿಯೋ 10R ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯನ್ನು 'ಐ ಕೇರ್ ಡಿಸ್ಪ್ಲೇ' ಎಂದು ಹೆಸರಿಸಲಾಗಿದೆ. ಇದು 3840Hz PWM ಡಿಮ್ಮಿಂಗ್‌, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಮತ್ತು 144Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ ನಿಯೋ 10R ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ ಹೊಂದಿರುತ್ತದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ 12GB RAM ಹೊಂದಿದೆ. ಗೇಮಿಂಗ್‌ಗಾಗಿ, ಈ ಫೋನ್ 2000Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. ಜೊತೆಗೆ ಇನ್ ಬಿಲ್ಟ್ FPS ಮೀಟರ್ ಹೊಂದಿದೆ. ಇದು 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ.

ಇಂದು iQOO Neo 10R ಬಿಡುಗಡೆ; ಬಜೆಟ್ ಬೆಲೆ.. ವಿಶೇಷತೆಗಳೇನು ಗೊತ್ತಾ?

ಕ್ಯಾಮೆರಾ ಸೆಟಪ್

ಐಕ್ಯೂ ನಿಯೋ 10R ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ ನಿಯೋ 10R ಮೊಬೈಲ್ 6,400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಐಕ್ಯೂ ಇದನ್ನು ಭಾರತದ ಅತ್ಯಂತ ತೆಳ್ಳಗಿನ ಸ್ಮಾರ್ಟ್‌ಫೋನ್‌ ಎಂದು ಕರೆದಿದೆ.

Best Mobiles in India

English summary
iQOO Neo 10R Launching in India Today: Check expected price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+