Home
ಮೊಬೈಲ್

ಮಾ.11ಕ್ಕೆ ಗ್ರ್ಯಾಂಡ್ ಎಂಟ್ರಿ! 6400mAh ಬ್ಯಾಟರಿ.. 256GB ಸ್ಟೋರೇಜ್‌.. ಬಜೆಟ್ ಬೆಲೆ.. ಯಾವ ಫೋನ್?

ಐಕ್ಯೂ ಫೋನ್‌ಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಂಪನಿಯು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಅದರಂತೆ, ಇದೀಗ ಐಕ್ಯೂ ನಿಯೋ 10R (iQOO Neo 10R) ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಈಗಾಗಲೇ ಐಕ್ಯೂ ನಿಯೋ 10R (iQOO Neo 10R) ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಮೊಬೈಲ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ಮಾರಾಟವಾಗಲಿದೆ. ಇದು 1.7 ಮಿಲಿಯನ್ ಅಂತುಟು ಸ್ಕೋರ್ ಹೊಂದಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ ನಿಯೋ 10R ಮೊಬೈಲ್ ಭಾರತದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಇರುತ್ತದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಈ ಮೊಬೈಲ್ 6,400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುತ್ತದೆ. ಜೊತೆಗೆ 12GB + 256GB ಸ್ಟೋರೇಜ್, 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಮಾ.11ಕ್ಕೆ ಲಾಂಚ್! 6400mAh ಬ್ಯಾಟರಿ.. 256GB ಸ್ಟೋರೇಜ್‌.. ಯಾವ ಫೋನ್?

ಐಕ್ಯೂ ನಿಯೋ 10R ಬಿಡುಗಡೆ ಯಾವಾಗ?

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 11 ರಂದು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಫೋನಿನ ಟೀಸರ್ ಫೋಟೋ ಬಿಡುಗಡೆಯಾಗಿದೆ. ಕಂಪನಿಯು ಇದನ್ನು 'ರೇಜಿಂಗ್ ಬ್ಲೂ' ಎಂದು ಹೆಸರಿಸಿದೆ. ಈ ಮೊಬೈಲ್‌ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಈ ಫೋನಿನ ಹಿಂಭಾಗವು ನೀಲಿ ಬಣ್ಣವನ್ನು ಹೊಂದಿದೆ. ಎರಡು ಬದಿಗಳಲ್ಲಿ ಬಿಳಿ ಬಣ್ಣ ಕಾಣಬಹುದು. ಈ ಬಣ್ಣನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಪರಿಚಯಿಸಲಾಗುವುದು. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಐಕ್ಯೂ ನಿಯೋ 10R ಫೀಚರ್ಸ್‌

ಕ್ಯಾಮೆರಾ ಸೆಟಪ್

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ. ಐಕ್ಯೂ ನಿಯೋ 9 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ IMX920 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ.

ಪ್ರೊಸೆಸರ್ ಮತ್ತು ಸ್ಟೋರೇಜ್

ಐಕ್ಯೂ ನಿಯೋ 10R ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಈ ಫೋನ್ ಆಂಡ್ರಾಯ್ಡ್‌ 15 (Android 15) ಆಧಾರಿತ Funtouch ಓಸ್‌ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 8GB + 256GB ಮತ್ತು 12GB + 256GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು 8GB + 128GB ರೂಪಾಂತರದಲ್ಲೂ ಬರಬಹುದು ಎಂದು ಹೇಳಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ ನಿಯೋ 10R ಫೋನ್ 6400mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದು ಬೃಹತ್ ಬ್ಯಾಟರಿ ಹೊಂದಿರುವ ಫೋನ್‌ಗಳಲ್ಲಿ ಒಂದಾಗಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇನ್ನೂ ಐಕ್ಯೂ ನಿಯೋ 9 ಪ್ರೊ ಫೋನ್ 5,160mAh ಬ್ಯಾಟರಿ ಹೊಂದಿದೆ.

ಡಿಸ್ಪ್ಲೇ ವಿವರ

ಐಕ್ಯೂ ನಿಯೋ 10R ಮೊಬೈಲ್ 6.78 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು 144Hz ರಿಫ್ರೆಶ್ ದರದ ಬೆಂಬಲ ಪಡೆದಿರುವ ನಿರೀಕ್ಷೆಯಿದೆ.

ಐಕ್ಯೂ ನಿಯೋ 10R ಬೆಲೆ

ಐಕ್ಯೂ ನಿಯೋ 10R ಮೊನೈಲ್‌ನ ಬೆಲೆ ಬಹಿರಂಗಪಡಿಸಿಲ್ಲ. ಆದರೆ, ಟೀಸರ್‌ನಲ್ಲಿ ಬೆಲೆ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮೊಬೈಲ್ 30,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್ 35,999 ರೂ.ಗೆ ಮಾರುಕಟ್ಟೆಗೆ ಬಂದಿತ್ತು. ಇನ್ನು ಐಕ್ಯೂ ನಿಯೋ 10R ಫೋನ್ ನೀವು ನೀಲಿ ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
iQOO Neo 10R with 50mp camera to launch march 11, sale from amazon: price, specifications and what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+