ಹೊಸ ಗೇಮಿಂಗ್ ಫೋನ್ ಬಿಡುಗಡೆ; 6400mAh ಬ್ಯಾಟರಿ.. 50MP + 32MP ಕ್ಯಾಮೆರಾ.. ಇಷ್ಟು ಕಡಿಮೆನಾ?
ಅಂತೂ ಇಂತೂ ಹೊಚ್ಚ ಹೊಸ ಗೇಮಿಂಗ್ ಫೋನ್ ಬಿಡುಗಡೆಯಾಗಿದೆ. ಈ ಮೂಲಕ ಐಕ್ಯೂ ಸಂಸ್ಥೆಯು ಗೇಮಿಂಗ್ ಪ್ರಿಯರ ಕಾಯುವಿಕೆಯನ್ನು ಕೊನೆಗೊಳಿಸಿದೆ. ಹೌದು, ಬಹುನಿರೀಕ್ಷಿತ ಐಕ್ಯೂ ನಿಯೋ 10R (iQOO Neo 10R) ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಇದು ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ. ಇದನ್ನು 30,000 ರೂ.ಗಳ ಬಜೆಟ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.
ನೀವು ಮೊಬೈಲ್‌ನಲ್ಲಿ ಗೇಮಿಂಗ್ ಆಡಲು ಅಥವಾ ಬೃಹತ್ ಸ್ಟೋರೇಜ್ ಇಷ್ಟಪಡುವವರಿಗೆ, ಹೊಸ ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ, 256GB ಸ್ಟೋರೇಜ್, 6400mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಐಕ್ಯೂ ನಿಯೋ 10R ಬೆಲೆ ಮತ್ತು ಲಭ್ಯತೆ
8GB RAM + 128GB ಸ್ಟೋರೇಜ್ ಬೆಲೆ = 26,999 ರೂ.
8GB RAM + 256GB ಸ್ಟೋರೇಜ್ ಬೆಲೆ = 28,999 ರೂ.
12GB RAM + 256GB ಸ್ಟೋರೇಜ್ ಬೆಲೆ = 30,999 ರೂ.
ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಮೂನ್‌ನೈಟ್ ಟೈಟಾನಿಯಂ ಮತ್ತು ರೇಜಿಂಗ್ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ಆರಂಭಿಕ ಬೆಲೆ 26,999 ರೂ. ಆಗಿದೆ. ಇದು ಮಾರ್ಚ್ 19 ರಿಂದ ಅಮೆಜಾನ್ (Amazon.in) ಮತ್ತು ಐಕ್ಯೂ ಆನ್‌ಲೈನ್ ಸ್ಟೋರ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಮಾರ್ಚ್ 11 ರಿಂದ ಮುಂಗಡ ಬುಕಿಂಗ್ ಪ್ರಾರಂಭವಾಗಲಿದ್ದು, ಮಾರ್ಚ್ 18 ರಿಂದ ಮುಂಗಡ ಬುಕಿಂಗ್ ಮಾಡಿರುವ ಗ್ರಾಹಕರು ಈ ಫೋನ್ ಖರೀದಿಸಬಹುದು.
ಐಕ್ಯೂ ನಿಯೋ 10R ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2800 × 1260 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು HDR10+, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ ನಿಯೋ 10R ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್ 15 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಈ ಸ್ಮಾರ್ಟ್‌ಫೋನ್, ಅಡ್ರಿನೊ 735 ಜಿಪಿಯು ಸಹ ಹೊಂದಿದೆ.
ಗೇಮಿಂಗ್ ಕಾರ್ಯಕ್ಷಮತೆ
ಐಕ್ಯೂ ಕಂಪನಿಯು ಮೊಬೈಲ್ ಗೇಮಿಂಗ್‌ಗಾಗಿ ಈ ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಗೊಳಿಸಿದೆ. ಈ ಫೋನ್ 2000Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಇನ್ ಬಿಲ್ಟ್ FPS ಮೀಟರ್ ಹೊಂದಿದೆ. ದೀರ್ಘಕಾಲದ ಭಾರೀ ಗೇಮಿಂಗ್ ಬಳಿಕ ಫೋನ್ ಬಿಸಿಯಾಗದಂತೆ ನೋಡಿಕೊಳ್ಳುತ್ತದೆ. ಇದಕ್ಕಾಗಿ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಐಕ್ಯೂ ನಿಯೋ 10R ಫೋನಿನಲ್ಲಿ ವಿಶೇಷ ಮಾನ್ಸ್ಟರ್ ಮೋಡ್ ಅಳವಡಿಸಲಾಗಿದೆ. ಇದರೊಂದಿಗೆ ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.

ಸ್ಟೋರೇಜ್ ಆಯ್ಕೆ
ಐಕ್ಯೂ ನಿಯೋ 10R ಫೋನ್ 8GB RAM ಮತ್ತು 12GB RAM ಹೊಂದಿದೆ. ಈ ಫೋನ್ ವಿಸ್ತೃತ RAM ತಂತ್ರಜ್ಞಾನ ಹೊಂದಿದೆ. ನೀವು 12GB ವರ್ಚುವಲ್ RAM ಬಳಸಬಹುದು. ಇದು 24GB RAM (12GB+12GB) ಶಕ್ತಿಯನ್ನು ನೀಡುತ್ತದೆ. ಈ ಫೋನಿನಲ್ಲಿ 128GB ಸ್ಟೋರೇಜ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ ನಿಯೋ 10R ಮೊಬೈಲ್ 6400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಭಾರತದ ಅತ್ಯಂತ ತೆಳ್ಳಗಿನ ಮೊಬೈಲ್ ಫೋನ್ ಇದಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.


Click it and Unblock the Notifications








