50MP ಕ್ಯಾಮೆರಾ, 5500mAh ಬ್ಯಾಟರಿ: ಇಂದೇ ಬರುತ್ತೆ ಐಕ್ಯೂನ ಹೊಸ ಫೋನ್
ದೇಶದ ಪ್ರಮುಖ ಸ್ಮಾರ್ಟ್ಪೋನ್ ಬ್ರಾಂಡ್ ಐಕ್ಯೂ (iQOO) ಇಂದು (ಜುಲೈ 11) ತನ್ನ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಹೌದು, iQOO Neo 9S Pro Plus ಚೀನಾದಲ್ಲಿ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ. ಇದರ ಜೊತೆಗೆ iQOO Watch GT ಸ್ಮಾರ್ಟ್‌ವಾಚ್ ಮತ್ತು iQOO TWS 1i ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ಲಾಂಚ್ ಮಾಡಲಾಗುತ್ತದೆ. iQOO Neo9S Pro+ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಬೆಲೆ ಎಷ್ಟು? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಜುಲೈ ತಿಂಗಳಲ್ಲಿ ಹಲವು ಮೊಬೈಲ್ ತಯಾರಿಕಾ ಕಂಪನಿಗಳು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಪಟ್ಟಿಗೆ iQOOನ ಹೆಸರು ಸಹ ಸೇರ್ಪಡೆಯಾಗಿದೆ. ತನ್ನ ಇತ್ತೀಚಿನ ಪ್ರಮುಖ ಮೊಬೈಲ್ iQOO Neo9S Pro Plus ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. iQOO Neo9S Plus ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲೇನು ವಿಶೇಷತೆ ಎಂದರೆ ಅತ್ಯಾಕರ್ಷಕ ಫೀಚರ್ಸ್‌ನೊಂದಿಗೆ ಬಜೆಟ್ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

iQOO Neo 9S Pro Plus ವಿಶೇಷತೆಗಳೇನು?
iQOO Neo 9S Pro Plus ಫೋನ್ Snapdragon 8 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 6.78-ಇಂಚಿನ ಡಿಸ್ಲ್ಪೇ ಹೊಂದಿರಲಿದೆ. 50MP ಮುಖ್ಯ ಕ್ಯಾಮೆರಾವನ್ನು ಪಡೆದಿದೆ. ಇದು 5500mAh ಡ್ಯುಯಲ್-ಸೆಲ್ ಬ್ಯಾಟರಿ, 120W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಹೊಂದಿರಲಿದೆ. iQOO Neo9S Pro Plusನ ಇನ್ನುಳಿದ ಫೀಚರ್ಸ್ ತಿಳಿಯಲು ಮುಂದೆ ಓದಿ.
ಈ ಸ್ಮಾರ್ಟ್‌ಫೋನ್ 6.78-ಇಂಚಿನ 1.5K LTPO AMOLED ಫ್ಲಾಟ್ ಡಿಸ್ಲ್ಪೇಯನ್ನು ಹೊಂದಿದೆ. ಇದು 1-144Hz ರಿಫ್ರೆಶ್ ದರ ಮತ್ತು HDR10+ ಸಪೋರ್ಟ್ ಅನ್ನು ಪಡೆದಿದೆ. Snapdragon 8 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಅತ್ಯಾಧುನಿಕ 4nm ಪ್ರಕ್ರಿಯೆಯಲ್ಲಿ ತಯಾರಿಸಲ್ಪಟ್ಟಿದೆ. Adreno 750 GPU ಜೊತೆಗೆ, ಉತ್ತಮ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ. ನೀವು 16GB LPDDR5X RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಈ ಫೋನ್ ಆಯ್ಕೆ ಮಾಡಬಹುದು.
ಕ್ಯಾಮೆರಾ ಸೆಟಪ್ ಮತ್ತು ಬ್ಯಾಟರಿ ಹೇಗಿರಲಿದೆ?
ಈ ನೂತನ ಐಕ್ಯೂ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಘಟಕವನ್ನು ಹೊಂದಿರಲಿದೆ. ಇದು ಬಹುಶಃ 50MP ಮುಖ್ಯ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಸಂವೇದಕವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಪಡೆಯಲಿದೆ. ಇದು 5500mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿ ಹೊಂದಿದೆ. 120W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ.
ಈ ಸ್ಮಾರ್ಟ್‌ಫೋನ್ Android 14 ಅನ್ನು ಆಧರಿಸಿ OriginOS 4.0ನಲ್ಲಿ ರನ್ ಆಗುತ್ತದೆ. ಇದು ಮೃದುವಾದ ಮತ್ತು ಗ್ರಾಹಕೀಯಗೊಳಿಸಬಹುದಾದ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಭದ್ರತೆಗಾಗಿ ಅಲ್ಟ್ರಾಸಾನಿಕ್ ಅಂಡರ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಜೊತೆಗೆ IP65 ಧೂಳು ಮತ್ತು ನೀರಿನ ಪ್ರತಿರೋಧ ಪಡೆದಿದೆ. 5G SA/NSA, Wi-Fi 7, Bluetooth 5.4, ಮತ್ತು NFC ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿರಲಿದೆ.
ಇಂದೇ ಸ್ಮಾರ್ಟ್‌ವಾಚ್ ಮತ್ತು ಇಯರ್‌ಬಡ್ ಲಾಂಚ್
iQOO Neo 9S Pro Plus ಸ್ಮಾರ್ಟ್‌ಫೋನ್ ಜೊತೆಗೆ ಗ್ರಾಹಕರಿಗೆ ಮತ್ತೆರಡು ಸಿಹಿ ಸುದ್ದಿಯನ್ನು ಕಂಪನಿ ನೀಡಿದೆ. iQOO Watch GT ಸ್ಮಾರ್ಟ್‌ವಾಚ್ ಮತ್ತು iQOO TWS 1i ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ಇಂದು ಬಿಡುಗಡೆ ಮಾಡಲಾಗುವುದು. iQOOನ Watch GT ವಿನ್ಯಾಸವು ಮೇ ತಿಂಗಳಲ್ಲಿ ಲಾಂಚ್ ಆದ vivo Watch GTನಂತೆಯೇ ಕಾಣುತ್ತದೆ. ಆದ್ದರಿಂದ, ಇದೇ ರೀತಿಯ ಫೀಚರ್ಸ್‌ಗಳನ್ನು ನಾವು ನಿರೀಕ್ಷಿಸಬಹುದು.


Click it and Unblock the Notifications








