iQOO: 2 ಸೊಗಸಾದ ಫೋನ್ ಲಾಂಚ್; ಯಾವ ಮೊಬೈಲ್ ಬೆಸ್ಟ್? ನಿಮ್ಮ ಆಯ್ಕೆ ಯಾವುದು? ಇಲ್ಲಿವೆ ಫೀಚರ್ಸ್
ಐಕ್ಯೂ ಸದ್ದಿಲ್ಲದೆ ಎರಡು ಹೊಚ್ಚ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಹೌದು, ಐಕ್ಯೂ (iQOO) ಸಂಸ್ಥೆಯು ತನ್ನ ಐಕ್ಯೂ ನಿಯೋ 10 ಸರಣಿಯನ್ನು (iQOO Neo 10 Series) ಅನಾವರಣಗೊಳಿಸಿದೆ. ಇದರಲ್ಲಿ ಐಕ್ಯೂ ನಿಯೋ 10 (iQOO Neo 10) ಮತ್ತು ಐಕ್ಯೂ ನಿಯೋ 10 ಪ್ರೊ (iQOO Neo 10 Pro) ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬನ್ನಿ, ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್? ಬೆಲೆ ಮತ್ತು ವಿಶೇಷತೆಗಳೇನು? ತಿಳಿಯೋಣ.
ಐಕ್ಯೂ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಅದರಂತೆ, ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ, ಎರಡು ಸೊಗಸಾದ ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಫೋನ್‌ಗಳು 6.78 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 1TB ಸ್ಟೋರೇಜ್, 6100mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.

ಐಕ್ಯೂ ನಿಯೋ 10 ಮತ್ತು ನಿಯೋ 10 ಪ್ರೊ ಬೆಲೆ
ಕಂಪನಿಯು ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಮೊಬೈಲ್‌ಗಳನ್ನು ಐದು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಐಕ್ಯೂ ನಿಯೋ 10 ಫೋನಿನ 12GB + 256GB ಸ್ಟೊರೇಜ್ ರೂಪಾಂತರವನ್ನು 28,000 ರೂ.ಗೆ ಬಿಡುಗಡೆ ಮಾಡಲಾಗಿದೆ. 16GB+256GB ಸ್ಟೊರೇಜ್ ಬೆಲೆ 32,600 ರೂ. ಆಗಿದೆ. 12GB+512GB ಸ್ಟೊರೇಜ್ ಬೆಲೆ 30,300 ರೂ. ಇದೆ. 16GB+512GB ಸ್ಟೊರೇಜ್ ಆಯ್ಕೆಯು 36,100 ರೂ.ಗೆ ಲಭ್ಯವಿದೆ. 16GB+1TB ಸ್ಟೊರೇಜ್ ವೇರಿಯಂಟ್ 42,030 ರೂ.ಗೆ ಬಿಡಗಡೆಯಾಗಿದೆ.
ಐಕ್ಯೂ ನಿಯೋ 10 ಪ್ರೊ ಫೋನಿನ 12GB + 256GB ಸ್ಟೊರೇಜ್ ರೂಪಾಂತರವು 37,300 ರೂ.ಗೆ ಬಿಡುಗಡೆಯಾಗಿದೆ. 12GB + 512GB ಸ್ಟೊರೇಜ್ ಬೆಲೆ 40,800 ರೂ. ಇದೆ. 16GB + 256GB ಸ್ಟೊರೇಜ್ ರೂಪಾಂತರದ ಬೆಲೆ 39,600 ರೂ. ಆಗಿದೆ. 16GB + 512GB ಸ್ಟೊರೇಜ್ ಸ್ಟೊರೇಜ್ ಆಯ್ಕೆಯು 44,300 ರೂ.ಗೆ ಲಭ್ಯವಿದೆ. 16GB + 1TB ಸ್ಟೊರೇಜ್ ರೂಪಾಂತರವನ್ನು 50,200 ರೂ.ಗೆ ಬಿಡುಗಡೆ ಮಾಡಲಾಗಿದೆ.
ಐಕ್ಯೂ ನಿಯೋ 10 ಮತ್ತು ನಿಯೋ 10 ಪ್ರೊ: ಟಾಪ್ 5 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಮೊಬೈಲ್‌ಗಳು 6.78 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿವೆ. ಇದು 144Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ ನಿಯೋ 10 ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಐಕ್ಯೂ ನಿಯೋ 10 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಎರಡೂ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ Origin ಓಎಸ್ 5 ನೊಂದಿಗೆ ಕೆಲಸ ಮಾಡುತ್ತವೆ.
ಸ್ಟೋರೇಜ್ ಆಯ್ಕೆ
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಸ್ಮಾರ್ಟ್‌ಫೋನ್ 16GB RAM ಮತ್ತು 1TB ಆಂತರಿಕ ಸ್ಟೋರೇಜ್ ಹೊಂದಿದೆ. ಈ ಫೋನಿನಲ್ಲಿ ವರ್ಚುವಲ್ RAM ಸೌಲಭ್ಯ ಸಹ ಲಭ್ಯವಿದೆ.

ಕ್ಯಾಮೆರಾ ಸೆಟಪ್
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಎರಡೂ ಮೊಬೈಲ್‌ಗಳು 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಹೊಂದಿವೆ. ಐಕ್ಯೂ ನಿಯೋ 10 ಫೋನಿನಲ್ಲಿ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಐಕ್ಯೂ ನಿಯೋ 10 ಪ್ರೊ ಫೋನ್ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಎರಡೂ ಮೊಬೈಲ್‌ಗಳು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ ನಿಯೋ 10 ಮತ್ತು ಐಕ್ಯೂ ನಿಯೋ 10 ಪ್ರೊ ಎರಡೂ ಫೋನ್‌ಗಳು 6100mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿವೆ. ಇದು ಸಿಲಿಕಾನ್ ಕಾರ್ಬನ್ ಬ್ಯಾಟರಿಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು, ಕೇವಲ 15 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಇತರೆ ವೈಶಿಷ್ಟ್ಯಗಳು
ಎರಡೂ ಸ್ಮಾರ್ಟ್‌ಫೋನ್‌ಗಳು 3D ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿವೆ. ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಹೈ-ಫೈ ಆಡಿಯೊ ಸಪೋರ್ಟ್ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇವು 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಈ ಎರಡು ಮೊಬೈಲ್‌ಗಳು ಪ್ರಸ್ತುತ ಚೀನಾದಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








