50MP ಕ್ಯಾಮೆರಾ, 5500mAh ಬ್ಯಾಟರಿ: ಜುಲೈ 11ಕ್ಕೆ ಬರಲಿದೆ iQooನ ಹೊಸ ಫೋನ್
ಜುಲೈ ತಿಂಗಳಲ್ಲಿ ಹಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಈ ಪಟ್ಟಿಗೆ iQOOನ ಹೆಸರು ಸಹ ಸೇರ್ಪಡೆಯಾಗಿದೆ. ಕಂಪನಿಯು ಹೊಚ್ಚ ಹೊಸ ಫೋನ್ ಅನ್ನು ಲಾಂಚ್ ಮಾಡುವುದಾಗಿ ಅಧಿಕೃತ ಘೋಷಣೆ ಹೊರಡಿಸಿದೆ. ಹೌದು, ತನ್ನ ಇತ್ತೀಚಿನ ಪ್ರಮುಖ ಮೊಬೈಲ್ iQOO Neo9S Pro+ ಅನ್ನು ಅನಾವರಣಗೊಳಿಸಲು ಮುಹೂರ್ತ ಫಿಕ್ಸ್ ಮಾಡಿದೆ. iQOO Neo9S Pro+ ಫೋನ್ ಇದೇ ಜುಲೈ 11 ರಂದು ಚೀನಾದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಇದರ ಜೊತೆಗೆ iQOO Watch GT ಸ್ಮಾರ್ಟ್‌ವಾಚ್ ಮತ್ತು iQOO TWS 1i ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಲಿದೆ.
iQOO Neo9S Pro+ ಫೋನ್ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲೇನು ವಿಶೇಷತೆ ಎಂದರೆ ಬಜೆಟ್ ಬೆಲೆಗೆ ಗ್ರಾಹಕರಿಗೆ ಭರಪೂರ ಫೀಚರ್ಸ್ ಹೊಂದಿರಲಿದೆ. ಇದು Snapdragon 8 Gen 3 ಪ್ರೊಸೆಸರ್, 6.78-ಇಂಚಿನ ಡಿಸ್ಲ್ಪೇ ಹೊಂದಿರಲಿದೆ. 50MP ಅದ್ಭುತ ಕ್ಯಾಮೆರಾ ಒಳಗೊಂಡಿರುತ್ತದೆ. 5500mAh ಡ್ಯುಯಲ್-ಸೆಲ್ ಬ್ಯಾಟರಿ, 120W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್ ಪಡೆದಿದೆ. ಇನ್ನುಳಿದಂತೆ, iQOO Neo9S Pro+ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ? ಬೆಲೆ ಎಷ್ಟು? ಅನ್ನೋದನ್ನು ತಿಳಿಯೋಣ ಬನ್ನಿ.

iQOO Neo9S Pro+ನ ಡಿಸೈನ್ ಮತ್ತು ಡಿಸ್ಲ್ಪೇ
iQOO Neo9S Pro+ ಫೋನ್ 6.78-ಇಂಚಿನ 1.5K LTPO AMOLED ಫ್ಲಾಟ್ ಡಿಸ್ಲ್ಪೇಯನ್ನು ಹೊಂದಿದೆ. ಇದು 1-144Hz ರಿಫ್ರೆಶ್ ದರ ಮತ್ತು HDR10+ ಬೆಂಬಲವನ್ನು ಪಡೆದಿದೆ. ಇದು vivoನ ಸ್ವಾಮ್ಯದ TOL ರಬ್ಬಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ರಚಿಸಲಾದ ಬಿಳಿ ಚರ್ಮದ ಮೇಲ್ಮೈಯನ್ನು ಹೊಂದಿದೆ. ಈ ಪ್ರಕ್ರಿಯೆಯು ಸಾಧನದ ವಿನ್ಯಾಸವನ್ನು ಹೆಚ್ಚಿಸುವುದಲ್ಲದೆ ಸ್ಯಾಟಿನ್ ತರಹದ ಅನುಭವವನ್ನು ನೀಡುತ್ತದೆ. ಈ ಸೌಂದರ್ಯಕ್ಕೆ ಪೂರಕವಾಗಿ ಲಿಚಿ-ಧಾನ್ಯದ ಲೆದರ್ ಫಿನಿಶ್ ಆಗಿದ್ದು, ಸಾಧನದ ಪ್ರೀಮಿಯಂ ಲುಕ್ ಮತ್ತು ಫೀಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಫೋನ್‌ನ ಪ್ರೊಸೆಸರ್ ಏನು?
ಈ Neo9S Pro+ ಸ್ಮಾರ್ಟ್‌ಫೋನ್ ಶಕ್ತಿಯುತ Snapdragon 8 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಅತ್ಯಾಧುನಿಕ 4nm ಪ್ರಕ್ರಿಯೆಯಲ್ಲಿ ತಯಾರಿಸಲ್ಪಟ್ಟಿದೆ. ಈ ಚಿಪ್‌ಸೆಟ್, Adreno 750 GPU ಜೊತೆಗೆ, ಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ. ಬಳಕೆದಾರರು 16GB LPDDR5X RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ಅನ್ನು ನೀಡುವ ವೇರಿಯಂಟ್‌ಗಳಲ್ಲಿ ಈ ಫೋನ್ ಆಯ್ಕೆ ಮಾಡಬಹುದು.
ಅದ್ಭುತ ಕ್ಯಾಮೆರಾ, ಸೂಪರ್ ಬ್ಯಾಟರಿ
ಈ ಫೋನ್‌ನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, iQOO ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರಲಿದೆ. ಇದು ಬಹುಶಃ ಮುಖ್ಯ 50MP ಸಂವೇದಕ ಮತ್ತು 50MP ಅಲ್ಟ್ರಾ-ವೈಡ್ ಸಂವೇದಕವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಪಡೆದಿದೆ. ಇದು 5500mAh ಡ್ಯುಯಲ್-ಸೆಲ್ ಬ್ಯಾಟರಿ ಹೊಂದಿದೆ. ತ್ವರಿತ ಮತ್ತು ಅನುಕೂಲಕರ ರೀಚಾರ್ಜ್‌ಗಳಿಗಾಗಿ 120W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಕನೆಕ್ಟಿವಿಟಿ ಆಯ್ಕೆಗಳು
ಈ ಮೊಬೈಲ್ Android 14 ಅನ್ನು ಆಧರಿಸಿ OriginOS 4.0 ನಲ್ಲಿ ರನ್ ಆಗುತ್ತದೆ. ಇದು ಮೃದುವಾದ ಮತ್ತು ಗ್ರಾಹಕೀಯಗೊಳಿಸಬಹುದಾದ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ಭದ್ರತೆಗಾಗಿ ಅಲ್ಟ್ರಾಸಾನಿಕ್ ಅಂಡರ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಜೊತೆಗೆ IP65 ಧೂಳು ಮತ್ತು ವಿವಿಧ ಪರಿಸರದಲ್ಲಿ ಬಾಳಿಕೆಗಾಗಿ ನೀರಿನ ಪ್ರತಿರೋಧ ಪಡೆದಿದೆ. 5G SA/NSA, Wi-Fi 7, Bluetooth 5.4, ಮತ್ತು NFC ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿರಲಿದೆ.
ಸ್ಮಾರ್ಟ್‌ವಾಚ್ ಮತ್ತು ಇಯರ್‌ಬಡ್ ಸಹ ಲಾಂಚ್
iQOO Neo9S Pro+ ಸ್ಮಾರ್ಟ್‌ಫೋನ್ ಜೊತೆಗೆ ಗ್ರಾಹಕರಿಗೆ ಮತ್ತೆರಡು ಸಿಹಿ ಸುದ್ದಿಯನ್ನು ಕಂಪನಿ ನೀಡಿದೆ. iQOO Watch GT ಸ್ಮಾರ್ಟ್‌ವಾಚ್ ಮತ್ತು iQOO TWS 1i ಟ್ರು ವೈರ್‌ಲೆಸ್ ಇಯರ್‌ಬಡ್‌ಗಳನ್ನು ಸಹ ಬಿಡುಗಡೆ ಮಾಡಲಿದೆ. iQOOನ Watch GT ವಿನ್ಯಾಸವು ಮೇ ತಿಂಗಳಲ್ಲಿ ಲಾಂಚ್ ಆದ vivo Watch GTನಂತೆಯೇ ಕಾಣುತ್ತದೆ. ಆದ್ದರಿಂದ, ಇದೇ ರೀತಿಯ ಫೀಚರ್ಸ್‌ಗಳನ್ನು ನಾವು ನಿರೀಕ್ಷಿಸಬಹುದು.
iQOO Neo9S Pro+ ಸಂಪೂರ್ಣ ಫೀಚರ್ಸ್‌ಗಳು
- ಡಿಸ್ಲ್ಪೇ: HDR10+ ಜೊತೆಗೆ 6.78-ಇಂಚಿನ (2800×1260 ಪಿಕ್ಸೆಲ್‌ಗಳು) 1.5K AMOLED ಡಿಸ್ಲ್ಪೇ.
- ರಿಫ್ರೆಶ್ ರೇಟ್: 1-144Hz ರಿಫ್ರೆಶ್ ದರ, 1400 nits ಬ್ರೈಟ್‌ನೆಸ್.
- ಪ್ರೊಸೆಸರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 750 GPU.
- ಸ್ಟೋರೇಜ್: 12GB / 16GB LPDDR5X RAM ಜೊತೆಗೆ 256GB/512GB/1TB (UFS 4.0) ಸ್ಟೋರೇಜ್.
- OS: OriginOS 4.0 ಜೊತೆಗೆ Android 14
- ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
- ಕ್ಯಾಮೆರಾ: 50MP ಕ್ಯಾಮೆರಾ, f/1.88 ಅಪರ್ಚರ್, OIS, LED ಫ್ಲ್ಯಾಷ್, 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, f/2.0 ಅಪರ್ಚರ್.
- ಫ್ರಂಟ್ ಕ್ಯಾಮೆರಾ: 16MP ಫ್ರಂಟ್ (f/2.45 ಅಪರ್ಚರ್‌ನೊಂದಿಗೆ) ಕ್ಯಾಮೆರಾ, ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕ
- ಆಡಿಯೋ: USB ಟೈಪ್-ಸಿ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಹೈ-ಫೈ ಆಡಿಯೋ
- ಪ್ರೊಟೆಕ್ಷನ್: ಧೂಳು ಮತ್ತು ನೀರು ನಿರೋಧಕ (IP65)
- ಬ್ಯಾಟರಿ: 5500mAh ಬ್ಯಾಟರಿ ಬ್ಯಾಕಪ್
- ಚಾರ್ಜಿಂಗ್: 120W ಅಲ್ಟ್ರಾ-ಫಾಸ್ಟ್ ಫ್ಲ್ಯಾಷ್ ಚಾರ್ಜಿಂಗ್
- ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 7 802.11 be, Bluetooth 5.4, GPS: L1+L5, Beidou: B1C+B1I+B2a+B2b, GLONASS: G1, ಗೆಲಿಲಿಯೊ: E1+E5a+E51, QZSS: +L5, NavIC: L5, USB ಟೈಪ್-C, NFC
ಒಟ್ಟಾರೆ, ಜುಲೈ ತಿಂಗಳಲ್ಲಿ ವಿವಿಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿವೆ. ಜೂನ್ ತಿಂಗಳಲ್ಲಿ ಕೂಡ ಅನೇಕ ಮೊಬೈಲ್‌ಗಳು ಲಾಂಚ್ ಆಗಿದ್ದವು. ಸ್ಯಾಮ್ಸಂಗ್, ಒನ್ಪ್ಲಸ್, ಒಪ್ಪೋ, ರಿಯಲ್‌ಮಿ, ರೆಡ್ಮಿ, ಇನ್ಫಿನಿಕ್ಸ್


Click it and Unblock the Notifications








