Home
ಮೊಬೈಲ್

ಕೇವಲ 9,499 ರೂ.ಗೆ ಹೊಸ iQOO Z10 Lite 5G ಪೋನ್ ಬಿಡುಗಡೆ!

ವಿವೋದ ಉಪ-ಬ್ರಾಂಡ್ iQOO ಭಾರತದಲ್ಲಿ ತನ್ನ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ iQOO Z10 Lite 5G ಅನ್ನು ಇಂದು (ಜೂನ್ 18, ಬುಧವಾರ) ಭರ್ಜರಿಯಾಗಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ, 10,000 ಬೆಲೆಯ ವಿಭಾಗದಲ್ಲಿ 6,000mAh ಬ್ಯಾಟರಿಯನ್ನು ಹೊಂದಿರುವ ದೇಶದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ iQOO Z10 Lite 5G ಪಾತ್ರವಾಗಿದ್ದು, 50-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು MediaTek Dimensity 6300 ಚಿಪ್‌ಸೆಟ್‌ನೊಂದಿಗೆ, ಈ ಫೋನ್ ಬಜೆಟ್ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

iQOO Z10 Lite 5G:ಬೆಲೆ, ಕೊಡುಗೆ ಮತ್ತು ಲಭ್ಯತೆ
iQOO Z10 Lite 5G ಯ ಬೆಲೆ ಭಾರತದಲ್ಲಿ 4GB RAM + 128GB ಶೇಖರಣಾ ಮಾದರಿಗೆ ರೂ. 9,999 ರಿಂದ ಪ್ರಾರಂಭವಾಗುತ್ತದೆ. 6GB RAM + 128GB ಆವೃತ್ತಿಯು ರೂ. 10,999 ಕ್ಕೆ ಲಭ್ಯವಿದ್ದರೆ, 8GB RAM + 256GB ಉನ್ನತ ಮಾದರಿಯ ಬೆಲೆ ರೂ. 12,999 ಆಗಿದೆ. ಪರಿಚಯಾತ್ಮಕ ಕೊಡುಗೆಯಾಗಿ, ಖರೀದಿದಾರರಿಗೆ ರೂ. 500 ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ ಎಂದು ಕಂಪೆನಿಯು ತಿಳಿಸಿದೆ. ಇದರಿಂದ ಫೋನ್ ಬೆಲೆಯು 9,499 ರೂ. ಗಳಿಂದ ಆರಂಭವಾಗಲಿದೆ. ಇನ್ನು ಈ ಫೋನ್ ಸೈಬರ್ ಗ್ರೀನ್ ಮತ್ತು ಟೈಟಾನಿಯಂ ಬ್ಲೂ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಇದೇ ಜೂನ್ 25 ರಿಂದ Amazon ಮತ್ತು iQOO ಇಂಡಿಯಾ ಇ-ಸ್ಟೋರ್ ಮೂಲಕ ಇದರ ಮಾರಾಟ ಪ್ರಾರಂಭವಾಗಲಿದೆ.

iQOO Z10 Lite 5G: ಪ್ರಮುಖ ವೈಶಿಷ್ಟ್ಯಗಳು,
ಹೊಸ iQOO Z10 Lite 5G ಸ್ಮಾರ್ಟ್‌ಫೋನ್ 6.74-ಇಂಚಿನ HD+ (720x1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ ಮತ್ತು 1,000 nits ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಕಾರ್ಯಕ್ಷಮತೆಗಾಗಿ, . ಇದು 8GB RAM ವರೆಗೆ ಜೋಡಿಯಾಗಿರುವ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಅನ್ನು ಹೊಂದಿದೆ, ಇದನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದು. ಈ ಹ್ಯಾಂಡ್‌ಸೆಟ್ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ.

ಕೇವಲ 9,499 ರೂ.ಗೆ ಹೊಸ iQOO Z10 Lite 5G ಪೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, iQOO Z10 Lite 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ Sony AI ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಸಂವೇದಕವನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ, ಈ AI ಎರೆಸ್, AI ಫೋಟೋ ಎನ್‌ಹಾನ್ಸ್ ಮತ್ತು AI ಡಾಕ್ಯುಮೆಂಟ್ ಮೋಡ್ ಸೇರಿದಂತೆ ವಿವಿಧ AI ಚಾಲಿತ ಇಮೇಜ್ ಎಡಿಟಿಂಗ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ.

ಈ iQOO Z10 Lite 5G ಫೋನ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬೃಹತ್ 6,000mAh ಬ್ಯಾಟರಿ, ಇದು 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. iQOO ಕಂಪೆನಿ ಪ್ರಕಾರ, ಈ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 70 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಸಮಯ ಮತ್ತು 37 ಗಂಟೆಗಳ ಕರೆ ಮಾಡುವ ಸಮಯವನ್ನು ನೀಡುತ್ತದೆ. ಇದಲ್ಲದೆ, 1,600 ಚಾರ್ಜಿಂಗ್ ಸೈಕಲ್‌ಗಳ ನಂತರವೂ ಬ್ಯಾಟರಿಯು ಶೇಕಡಾ 80 ರಷ್ಟು ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ ಎಂದು iQOO ಹೇಳಿಕೊಂಡಿದೆ

ಬಾಳಿಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದ, iQOO Z10 Lite 5G ಅನ್ನು IP64 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು SGS ಫೈವ್-ಸ್ಟಾರ್ ಆಂಟಿ-ಫಾಲ್ ಪ್ರಮಾಣೀಕರಣ ಮತ್ತು MIL-STD-810H-ಪ್ರಮಾಣೀಕೃತ ಬಿಲ್ಡ್ ಅನ್ನು ಹೊಂದಿದೆಸಂಪರ್ಕ ಆಯ್ಕೆಗಳಲ್ಲಿ 5G, Bluetooth 5.4, Wi-Fi 5, GPS, GLONASS, GALILEO, BeiDou, GNSS, QZSS ಮತ್ತು USB Type-C ಪೋರ್ಟ್ ವೈಶಿಷ್ಟ್ಯಗಳಿವೆ.

iQOO Z10 Lite 5G ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಸಾಫ್‌ವೇರ್ ವಿಭಾಗವು ಕೂಡ ಒಂದಾಗಿದೆ. ಇದು ಡ್ಯುಯಲ್-ಸಿಮ್ (ನ್ಯಾನೋ) ಬೆಂಬಲಿಸುತ್ತದೆ ಮತ್ತು Android 15-ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ವರ್ಷಗಳ Android ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುವ ಭರವಸೆಯನ್ನು ನೀಡುತ್ತದೆ. ಮೇಲಿನ ಎಲ್ಲಾ ವೈಶಿಷ್ಟ್ಯಗಳಿಂದ ಈ ಫೋನ್ ಬಜೆಟ್ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

Best Mobiles in India

English summary
iQOO Z10 Lite 5G is equipped with a dual rear camera system that includes a 50-megapixel Sony AI camera and a 2-megapixel bokeh lens. For selfies, it has a 5-megapixel front camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+