Home
ಮೊಬೈಲ್

iQOO Z10: 2 ಸೊಗಸಾದ ಮಾರುಕಟ್ಟೆಗೆ ಎಂಟ್ರಿ; 7620mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ ಇಷ್ಟು!

ಐಕ್ಯೂ ಸದ್ದಿಲ್ಲದೆ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಐಕ್ಯೂ Z10 ಟರ್ಬೊ ಸರಣಿಯ (iQOO Z10 Turbo Series) ಅಡಿಯಲ್ಲಿ ಪರಿಚಯಿಸಲಾಗಿದೆ. ಹೌದು, ಬಹುನಿರೀಕ್ಷಿತ ಐಕ್ಯೂ Z10 ಟರ್ಬೊ (iQOO Z10 Turbo) ಮತ್ತು ಐಕ್ಯೂ Z10 ಟರ್ಬೊ ಪ್ರೊ (iQOO Z10 Turbo Pro) ಮೊಬೈಲ್‌ಗಳು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಎರಡೂ ಫೋನ್‌ಗಳು ಅದ್ಭುತ ಡಿಸ್ಪ್ಲೇ, ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಬನ್ನಿ, ಈ ಹೊಸ ಫೋನ್‌ಗಳ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ Z10 ಟರ್ಬೊ ಕಂಪನಿಯ ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋನ್ ಆಗಿದೆ. ಈ ಮೊಬೈಲ್ 7,620mAh ಬ್ಯಾಟರಿಯನ್ನು ಹೊಂದಿದೆ. ಈವರೆಗೆ ಯಾವುದೇ ಐಕ್ಯೂ ಫೋನಿನಲ್ಲಿ ಇಷ್ಟು ದೊಡ್ಡ ಬ್ಯಾಟರಿಯನ್ನು ಒದಗಿಸಲಾಗಿಲ್ಲ. ಈ ಫೋನಿನ ಆರಂಭಿಕ ಬೆಲೆ 20,990 ರೂ. ಆಗಿದೆ. ಐಕ್ಯೂ Z10 ಟರ್ಬೊ ಪ್ರೊ ಫೋನ್ 7000mAh ಬ್ಯಾಟರಿಯನ್ನು ಹೊಂದಿದೆ. ಇದು 120W ಸೂಪರ್ ಫಾಸ್ಟ್ ಫ್ಲ್ಯಾಶ್ ಚಾರ್ಜಿಂಗ್‌ ಸೌಲಭ್ಯದೊಂದಿಗೆ ಬರುತ್ತದೆ. ಈ ಫೋನಿನ ಆರಂಭಿಕ ಬೆಲೆ 23,330 ರೂ. ಆಗಿದೆ. ಎರಡೂ ಮೊಬೈಲ್‌ಗಳು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

iQOO: 2 ಹೊಸ ಫೋನ್ ಲಾಂಚ್; 7620mAh ಬ್ಯಾಟರಿ, 512GB ಸ್ಟೋರೇಜ್.. ಬೆಲೆ ನೋಡಿ

ಐಕ್ಯೂ Z10 ಟರ್ಬೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z10 ಟರ್ಬೊ ಸ್ಮಾರ್ಟ್‌ಫೋನ್‌ 6.78 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 2,800 × 1,200 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 4340Hz PWM ಡಿಮ್ಮಿಂಗ್ ಮತ್ತು 2000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ (5500 ನಿಟ್‌ ಬ್ರೈಟ್‌ನೆಸ್) ಬೆಂಬಲ ಹೊಂದಿದೆ. ಈ ಫೋನ್ ಸ್ಕಾಟ್ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ Z10 ಟರ್ಬೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಒರಿಜಿನ್ ಓಎಸ್ 5 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗೇಮಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಇದು Q1 ಗೇಮಿಂಗ್ ಚಿಪ್ ಸಹ ಹೊಂದಿದೆ. ಈ ಮೊಬೈಲ್ 16GB RAM + 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಐಕ್ಯೂ Z10 ಟರ್ಬೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z10 ಟರ್ಬೊ ಸ್ಮಾರ್ಟ್‌ಫೋನ್‌ 7,620mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 90W ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ಇದು ದೀರ್ಘಾವಧಿಯ ಬಳಕೆಯ ಭರವಸೆ ನೀಡುತ್ತದೆ. ಇದರ ತೂಕ 212 ಗ್ರಾಂ ಮತ್ತು ದಪ್ಪ 8.09 ಮಿಮೀ ಇದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ Z10 ಟರ್ಬೊ ಫೋನ್ ಭದ್ರತೆಗಾಗಿ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP65 ರೇಟಿಂಗ್ ಸಹ ಹೊಂದಿದೆ. ಹಾಗೆಯೇ ಡ್ಯುಯಲ್ 1611B ಸ್ಪೀಕರ್‌ಗಳು, X-ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು 7000mm² ಐಸ್ ಡೋಮ್ VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ವೈ-ಫೈ 7, ಬ್ಲೂಟೂತ್ 6.0, ಎನ್‌ಎಫ್‌ಸಿ, ಐಆರ್ ಬ್ಲಾಸ್ಟರ್, ಡ್ಯುಯಲ್ ಫ್ರೀಕ್ವೆನ್ಸಿ ಜಿಪಿಎಸ್ ಮತ್ತು ಟ್ರಿಪಲ್ ಫ್ರೀಕ್ವೆನ್ಸಿ BeiDou ಹೊಂದಿದೆ.

iQOO: 2 ಹೊಸ ಫೋನ್ ಲಾಂಚ್; 7620mAh ಬ್ಯಾಟರಿ, 512GB ಸ್ಟೋರೇಜ್.. ಬೆಲೆ ನೋಡಿ

ಐಕ್ಯೂ Z10 ಟರ್ಬೊ ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z10 ಟರ್ಬೊ ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ OLED LTPS ಹುವಾಕ್ಸಿಂಗ್ C9+ ಡಿಸ್ಪ್ಲೇ ಹೊಂದಿದೆ. ಇದು 1.5K (2,800 × 1,200 ಪಿಕ್ಸೆಲ್‌ಗಳ) ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 4340Hz PWM ಡಿಮ್ಮಿಂಗ್ ಮತ್ತು 5500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನ್ ಶಾಟ್ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ Z10 ಟರ್ಬೊ ಪ್ರೊ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 4 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಒರಿಜಿನ್ ಓಎಸ್ 5 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದು Q1 ಗೇಮಿಂಗ್ ಚಿಪ್ ಸಹ ಹೊಂದಿದೆ. ಇದು ಗೇಮಿಂಗ್ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ. ಈ ಮೊಬೈಲ್ 16GB RAM + 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಐಕ್ಯೂ Z10 ಟರ್ಬೊ ಪ್ರೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z10 ಟರ್ಬೊ ಪ್ರೊ ಸ್ಮಾರ್ಟ್‌ಫೋನ್‌ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 120W ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ನೀವು ಕೆಲವೇ ನಿಮಿಷಗಳಲ್ಲಿ ಫೋನನ್ನು ಚಾರ್ಜ್ ಮಾಡಬಹುದು. ಈ ಫೋನಿನ ತೂಕ 209 ಗ್ರಾಂ ಮತ್ತು ದಪ್ಪ 8.09 ಮಿಮೀ ಆಗಿದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ Z10 ಟರ್ಬೊ ಪ್ರೊ ಫೋನ್ ಭದ್ರತೆಗಾಗಿ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP65 ರೇಟಿಂಗ್ ಸಹ ಹೊಂದಿದೆ. ಹಾಗೆಯೇ ಡ್ಯುಯಲ್ 1611B ಸ್ಪೀಕರ್‌ಗಳು, X-ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು 7000mm² ಐಸ್ ಡೋಮ್ VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ವೈ-ಫೈ 7, ಬ್ಲೂಟೂತ್ 6.0, ಎನ್‌ಎಫ್‌ಸಿ, ಐಆರ್ ಬ್ಲಾಸ್ಟರ್, ಡ್ಯುಯಲ್ ಫ್ರೀಕ್ವೆನ್ಸಿ ಜಿಪಿಎಸ್ ಮತ್ತು ಟ್ರಿಪಲ್ ಫ್ರೀಕ್ವೆನ್ಸಿ BeiDou ಹೊಂದಿದೆ.

iQOO: 2 ಹೊಸ ಫೋನ್ ಲಾಂಚ್; 7620mAh ಬ್ಯಾಟರಿ, 512GB ಸ್ಟೋರೇಜ್.. ಬೆಲೆ ನೋಡಿ

ಐಕ್ಯೂ Z10 ಟರ್ಬೊ ಬೆಲೆ

ಐಕ್ಯೂ Z10 ಟರ್ಬೊ ಫೋನಿನ ಮೂಲ ರೂಪಾಂತರ 12GB RAM + 256GB ಸ್ಟೋರೇಜ್ ಬೆಲೆ 20,990 ರೂ. ಆಗಿದೆ. 16GB RAM + 256GB ಸ್ಟೋರೇಜ್ ವೇರಿಯಂಟ್ 23,330 ರೂ.ಗೆ ಬಿಡುಗಡೆಯಾಗಿದೆ. ಹಾಗೆಯೇ 12GB RAM + 512GB ಸ್ಟೋರೇಜ್ ಮಾದರಿಯನ್ನು 25,670 ರೂ.ಗೆ ಪರಿಚಯಿಸಲಾಗಿದೆ. ಇನ್ನು ಟಾಪ್ ವೇರಿಯಂಟ್ 16GB RAM + 512GB ಸ್ಟೋರೇಜ್ ಬೆಲೆ 28,000 ರೂ.ಗೆ ಮಾರಾಟವಾಗಲಿದೆ.

ಐಕ್ಯೂ Z10 ಟರ್ಬೊ ಪ್ರೊ ಬೆಲೆ

ಕ್ಯೂ Z10 ಟರ್ಬೊ ಪ್ರೊ ಮೂಲ ರೂಪಾಂತರ 12GB RAM + 256GB ಸ್ಟೋರೇಜ್ ಬೆಲೆ 23,330 ರೂ. ಆಗಿದೆ. 16GB RAM + 256GB ಸ್ಟೋರೇಜ್ ವೇರಿಯಂಟ್ 25,670 ರೂ.ಗೆ ಬಿಡುಗಡೆಯಾಗಿದೆ. ಹಾಗೆಯೇ 12GB RAM + 512GB ಸ್ಟೋರೇಜ್ ಮಾದರಿಯನ್ನು 28,000 ರೂ.ಗೆ ಪರಿಚಯಿಸಲಾಗಿದೆ. ಇನ್ನು ಟಾಪ್ ವೇರಿಯಂಟ್ 16GB RAM + 512GB ಸ್ಟೋರೇಜ್ ಬೆಲೆ 30,340 ರೂ.ಗೆ ಮಾರಾಟವಾಗಲಿದೆ.

ಭಾರತದಲ್ಲಿ ಬಿಡುಗಡೆ ಯಾವಾಗ?

ಐಕ್ಯೂ Z10 ಟರ್ಬೊ ಮತ್ತು ಐಕ್ಯೂ Z10 ಟರ್ಬೊ ಪ್ರೊ ಎರಡೂ ಫೋನ್‌ಗಳು ನಾಲ್ಕು ಅದ್ಭುತ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. ಇವು ಬರ್ನ್ಟ್ ಆರೆಂಜ್, ಡೆಸರ್ಟ್, ಕ್ಲೌಡ್ ವೈಟ್ ಮತ್ತು ಸ್ಟಾರಿ ಸ್ಕೈ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗಲಿವೆ. ಪ್ರಸ್ತುತ ಈ ಮೊಬೈಲ್‌ಗಳು ಚೀನಾ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತವೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿವೆ. ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ತಿಂಗಳು ಭಾರತದಲ್ಲಿಯೂ ಬಿಡುಗಡೆಯಾಗುವ ಸಾಧ್ಯತೆಯಿದೆ.

Best Mobiles in India

English summary
iQOO Z10 Turbo and iQOO Z10 Turbo Pro Launched in china: when can it come to India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+