iQOO Z10: ಹೊಸ ಮೈಲಿಗಲ್ಲು.. ಅತಿದೊಡ್ಡ ಬ್ಯಾಟರಿ 5G ಫೋನ್ ಲಾಂಚ್; 7300mAh ಬ್ಯಾಟರಿ.. ಬೆಲೆ ಎಷ್ಟು ಗೊತ್ತಾ?
ಭಾರತದಲ್ಲಿ ದೊಡ್ಡ ಬ್ಯಾಟರಿಗಳೊಂದಿಗೆ ಬಿಡುಗಡೆಯಾಗುತ್ತಿರುವ ಫೋನ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಮೊದಲು 5,000mAh ಬ್ಯಾಟರಿ ಹೊಂದಿರುವ ಮೊಬೈಲ್‌ಗಳು ಬಂದರೆ ಹೆಚ್ಚಿತ್ತು. ಪ್ರಸ್ತುತ, 6000mAh ಬ್ಯಾಟರಿ ಸಾಮಾನ್ಯವಾಗುತ್ತಿದೆ. ಇಂದು ಟೆಕ್ ದೈತ್ಯ ಐಕ್ಯೂ ಭಾರತದಲ್ಲಿ ಐಕ್ಯೂ Z10 5G (iQOO Z10 5G) ಫೋನನ್ನು ಬಿಡುಗಡೆ ಮಾಡಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಗೆ ಹೊಸ ನೋಟವನ್ನು ನೀಡಿದೆ. ಈ ಮೊಬೈಲ್ 7,300mAh ಬಿಗ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು ಭಾರತೀಯ ಮಾರುಕಟ್ಟೆಯಲ್ಲಿರುವ ಅತಿದೊಡ್ಡ ಬ್ಯಾಟರಿ ಫೋನ್ ಆಗಿದೆ. ಈ ಹೊಸ ಫೋನಿನ ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಐಕ್ಯೂ Z10 5G ಮೊಬೈಲ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 12GB RAM + 256GB ಸ್ಟೋರೇಜ್, ಮಿಲಿಟರಿ ದರ್ಜೆಯ ಬಾಳಿಕೆ, IP65 ರೇಟಿಂಗ್ ಸೇರಿದಂತೆ ಮುಂತಾದ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಅತಿ ದೊಡ್ಡ ಬ್ಯಾಟರಿ ಫೋನ್
ಐಕ್ಯೂ Z10 ಭಾರತದಲ್ಲಿ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಫೋನ್ ಆಗಿದೆ. ಇದು ಫೋನಿನ ಅತಿ ದೊಡ್ಡ ವಿಶೇಷತೆಯಾಗಿದೆ. ಈ 5G ಫೋನ್ 7,300mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಬ್ಯಾಟರಿ ಹೊಂದಿರುವ ಮೊಬೈಲ್ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈವರೆಗೆ ಇಷ್ಟೊಂದು ಶಕ್ತಿಶಾಲಿ ಬ್ಯಾಟರಿ ಟ್ಯಾಬ್ಲೆಟ್‌ಗಳಲ್ಲಿ ಮಾತ್ರ ಇತ್ತು. ಈ ಮೊಬೈಲ್ ಬ್ಯಾಟರಿಯಲ್ಲಿ ಸಿಲಿಕಾನ್ ಕಾರ್ಬನ್ ಆನೋಡ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 90W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಫೋನ್ ಕೇವಲ 42 ನಿಮಿಷಗಳಲ್ಲಿ ಶೇ.20 ರಿಂದ ಶೇ.100 ರಷ್ಟು ಸಂಪೂರ್ಣವಾಗಿ ಚಾರ್ಜ್ ಆಗಲಿದೆ.
ಡಿಸ್ಪ್ಲೇ ವಿವರ
ಐಕ್ಯೂ Z10 5G ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2,392 × 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನ್ ಡಿಸ್ಪ್ಲೇ 120Hz ರಿಫ್ರೆಶ್ ದರ ಮತ್ತು 5000 ನಿಟ್ಸ್ ಗರಿಷ್ಠ ಬ್ರೈಟ್‌ನೆಟ್ ಹೊಂದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಒಳಗೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ
ಐಕ್ಯೂ Z10 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಚಿಪ್‌ಸೆಟ್ ಅನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಐಕ್ಯೂ ಫೋನ್ ಅಡ್ರಿನೊ 720 ಜಿಪಿಯು ಸಹ ಹೊಂದಿದೆ.
RAM ಮತ್ತು ಸ್ಟೋರೇಜ್
ಐಕ್ಯೂ Z10 5G ಸ್ಮಾರ್ಟ್‌ಫೋನ್ 8GB RAM ಮತ್ತು 12GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಎರಡೂ ರೂಪಾಂತರಗಳು ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಹೊಂದಿವೆ. ಇದು 16GB RAM ನ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ, 12GB ಭೌತಿಕ RAMಗೆ 12GB ವರ್ಚುವಲ್ RAM ಸೇರಿಸುವ ಮೂಲಕ 24GB RAM ಶಕ್ತಿಯನ್ನು ಪಡೆಯಬಹುದು. ಇದು 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಐಕ್ಯೂ Z10 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಐಕ್ಯೂ 5G ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಐಕ್ಯೂ Z10 5G ಬೆಲೆ ಮತ್ತು ಲಭ್ಯತೆ
8GB RAM + 128GB ಸ್ಟೋರೇಜ್ ಬೆಲೆ = 21,999 ರೂ.
8GB RAM + 256GB ಸ್ಟೋರೇಜ್ ಬೆಲೆ = 23,999 ರೂ.
12GB RAM + 256GB ಸ್ಟೋರೇಜ್ ಬೆಲೆ = 25,999 ರೂ.
ಐಕ್ಯೂ Z10 5G ಫೋನಿನ ಬೆಲೆ 21,999 ರೂ.ನಿಂದ ಪ್ರಾರಂಭವಾಗುತ್ತದೆ. ಇದು 8GB RAM + 128GB ಹೊಂದಿರುವ ಫೋನಿನ ದರವಾಗಿದೆ. ಈ ಫೋನ್ ಮಾರಾಟ ಏಪ್ರಿಲ್ 16 ರಿಂದ ಪ್ರಾರಂಭವಾಗಲಿದೆ. ಕಂಪನಿಯು ಆರಂಭಿಕ ಮಾರಾಟದಲ್ಲಿ 2,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡುತ್ತದೆ. ಈ ಫೋನ್ ಗ್ಲೇಸಿಯರ್ ಸಿಲ್ವರ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








