Home
ಮೊಬೈಲ್

ಭಾರತಕ್ಕೆ iQOO Z10R ಆಗಮನ ಶೀಘ್ರ: 20,000 ಕ್ಕಿಂತ ಕಡಿಮೆ ಬೆಲೆ?

ಭಾರತದ ಮಾರುಕಟ್ಟೆಗೆ iQOO Z10R ಸ್ಮಾರ್ಟ್‌ಫೋನನ್ನು ಪರಿಚಯಿಸುವುದಾಗಿ iQOO ಕಂಪೆನಿಯು ಇತ್ತೀಚಿಗಷ್ಟೇ ತಿಳಿಸಿತ್ತು. ಇದೀಗ ಕಂಪೆನಿಯು ಮೊದಲ ಬಾರಿಗೆ iQOO Z10R ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಿರಂಗಪಡಿಸಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಈ ಫೋನ್‌ಗಾಗಿ ಲ್ಯಾಂಡಿಂಗ್ ಪುಟ ಲೈವ್ ಆಗಿದ್ದು, "ಶೀಘ್ರದಲ್ಲೇ ಬರಲಿದೆ" ಎಂಬ ಟ್ಯಾಗ್‌ಲೈನ್ ಜೊತೆಗೆ ಸ್ಮಾರ್ಟ್‌ಫೋನ್ ಪ್ರಸ್ತುತವಾಗಿದೆ. ಇದರಲ್ಲಿ ಈ ಪುಟದಲ್ಲಿ ಫೋನ್‌ನ ವಿನ್ಯಾಸ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಟೀಸ್ ಮಾಡಲಾಗಿದೆ.

ಈ ಹೊಸ iQOO Z10R ಸ್ಮಾರ್ಟ್‌ಫೋನ್ ಈಗಾಗಲೇ ಬಿಡುಗಡೆಯಾಗಿರುವ iQOO Z10 ಶ್ರೇಣಿಯ ಭಾಗವಾಗಿರುವ ನಿರೀಕ್ಷೆ ಇದೆ. ಈ ಶ್ರೇಣಿಯಲ್ಲಿ iQOO Z10, Z10x ಮತ್ತು Z10 ಲೈಟ್ ಫೋನ್‌ಗಳ ಜೊತೆಗೆ iQOO Z10R ಸ್ಮಾರ್ಟ್‌ಫೋನ್ ಕೂಡ ಸೇರಿಕೊಳ್ಳಲಿದ್ದು, ಇದು ದೇಶದಲ್ಲಿ Vivo ಫೋನ್‌ಗಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ iQOO Z10R ಸ್ಮಾರ್ಟ್‌ಫೋನ್ ವಿನ್ಯಾಸವು Vivo V50e ನಂತೆಯೇ ಕಾಣುತ್ತಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಇದೀಗ ಬಹಿರಂಗವಾಗಿರುವ ಅಧಿಕೃತ ಚಿತ್ರದಲ್ಲಿ, iQOO Z10R ಫೋನ್‌ನ ಹಿಂಭಾಗದಲ್ಲಿ ಮಾತ್ರೆ-ಆಕಾರದ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಎರಡು ಕ್ಯಾಮೆರಾ ಸೆನ್ಸರ್‌ಗಳು ಮತ್ತು ಔರಾ ಲೈಟ್ ವೈಶಿಷ್ಟ್ಯಗಳು ಕಾಣಿಸುತ್ತವೆ. ಈ ವಿನ್ಯಾಸವು ಹಿಂದಿನ Vivo V50e ಮಾದರಿಯಂತೆಯೇ ಇದೆ. ಆದರೆ iQOO Z10R ಇತರ Vivo ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ 4K ವ್ಲಾಗಿಂಗ್ ಬೆಂಬಲ ಹಾಗೂ ಪ್ರೀಮಿಯಂ ವಿನ್ಯಾಸ ಈ ಫೋನ್‌ನ ಆಕರ್ಷಣೆಯ ಪ್ರಮುಖ ಅಂಶಗಳಾಗಿವೆ.

ಭಾರತಕ್ಕೆ iQOO Z10R ಆಗಮನ ಶೀಘ್ರ: 20,000 ಕ್ಕಿಂತ ಕಡಿಮೆ ಬೆಲೆ?

ಈ iQOO Z10R ಫೋನ್ ಗೀಕ್‌ಬೆಂಚ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ vivo I2410 ಎಂಬ ಮಾದರಿ ಸಂಖ್ಯೆಯೊಂದಿಗೆ ಗುರುತಿಸಲಾಗಿದೆ. ಕೆಲವು ಸೋರಿಕೆ ಮಾಹಿತಿಗಳ ಪ್ರಕಾರ, ಇದು MediaTek Dimensity 7400 ಚಿಪ್‌ಸೆಟ್‌ನೊಂದಿಗೆ ಬರಲಿದೆ. ಇದು Vivo V50e ನಲ್ಲಿ ಬಳಸಿದ Dimensity 7300 SoC ಗಿಂತ ಸ್ವಲ್ಪ ಶಕ್ತಿಶಾಲಿಯಾಗಿರುತ್ತದೆ. ಇನ್ನು ಫೋನ್‌ನಲ್ಲಿ 12GB RAM ಇರಬಹುದು ಮತ್ತು Android 15 ಆಧಾರಿತ Funtouch OS 15 ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಪ್ರಸಿದ್ಧ ಟೆಕ್ ಟಿಪ್‌ಸ್ಟರ್ ಡೆಬಯಾನ್ ರಾಯ್ (@Gadgetsdata) ಈ iQOO Z10R ಸ್ಮಾರ್ಟ್‌ಫೋನ್ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, iQOO Z10R ಫೋನ್ ಇದೇ ಜುಲೈ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆ ರೂ. 20,000ಕ್ಕಿಂತ ಕಡಿಮೆಯಿರಬಹುದು ಎಂದಿದ್ದಾರೆ. ಇನ್ನು ಈ ಫೋನ್ 120Hz ರಿಫ್ರೆಶ್ ದರದ 6.77-ಇಂಚಿನ ಫುಲ್ HD+ ಕ್ವಾಡ್-ಕರ್ವ್ಡ್ OLED ಡಿಸ್ಪ್ಲೇ ಹೊಂದಿರುತ್ತದೆ. ಇದು ಉತ್ತಮ ವೀಕ್ಷಣಾ ಅನುಭವಕ್ಕಾಗಿ ವಿಶೇಷವಾಗಿರುವುದಾಗಿ ಊಹಿಸಿದ್ದಾರೆ.

ಸೋರಿಕೆಯಂತೆ, iQOO Z10R ಫೋನ್ ಕ್ಯಾಮೆರಾ ವಿಭಾಗಕ್ಕೂ ಸಾಕಷ್ಟು ಗಮನ ಕೊಡಲಾಗಿದೆ. ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಇರಬಹುದು, ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೆಷನ್) ಬೆಂಬಲ ಹೊಂದಿರುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇರಬಹುದು. ಬ್ಯಾಟರಿ ಭಾಗದಲ್ಲೂ iQOO Z10R ಫೋನ್ ಹೆಚ್ಚು ಸಾಮರ್ಥ್ಯ ಹೊಂದಿರಲಿದ್ದು, ಇದು 5,600mAh ಅಥವಾ 6,000mAh ಬ್ಯಾಟರಿ ಹಾಗೂ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರಬಹುದು ಎಂದು ಪ್ರಮುಖ ವರದಿಗಳು ಹೇಳಿವೆ.

ಟಿಪ್‌ಸ್ಟರ್ ಡೆಬಯಾನ್ ರಾಯ್ ಹಂಚಿಕೊಂಡಿರುವ ಲೈವ್ ಚಿತ್ರಗಳಲ್ಲಿ, iQOO Z10R ಸ್ಮಾರ್ಟ್‌ಫೋನ್ ಬ್ಲೂ ಮತ್ತು ಗೋಲ್ಡ್ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವುದನ್ನು ತೋರಿಸುತ್ತವೆ. ಶಕ್ತಿಶಾಲಿ ಚಿಪ್‌ಸೆಟ್, ಆಧುನಿಕ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯೊಂದಿಗೆ iQOO Z10R ಯುವ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವುದಾಗಿ ಕಾಣಿಸುತ್ತಿದೆ. ಒಂದು ವೇಳೆ ಈ ನಿರೀಕ್ಷಿತ ಬೆಲೆಯಲ್ಲಿ ಬಿಡುಗಡೆಯಾದರೆ, ಈ ಎಲ್ಲಾ ವೈಶಿಷ್ಟ್ಯಗಳು Z10R ಅನ್ನು ತನ್ನ ದರ ಶ್ರೇಣಿಯಲ್ಲಿ ಸ್ಪರ್ಧಾತ್ಮಕ ಆಯ್ಕೆಯನ್ನಾಗಿ ಮಾಡುತ್ತವೆ.

Best Mobiles in India

English summary
The iQOO India website now features a live landing page for the iQOO Z10R, adorned with a "coming soon" label.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+