Home
ಮೊಬೈಲ್

ಭಾರತಕ್ಕೆ iQOO Z10x ಗ್ರ್ಯಾಂಡ್ ಎಂಟ್ರಿ; 6500mAh ಬ್ಯಾಟರಿ.. 50MP ಕ್ಯಾಮೆರಾ.. 12,500ಕ್ಕಿಂತ ಕಡಿಮೆ ಬೆಲೆ!

ಐಕ್ಯೂ ಇಂದು ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್‌ಗಳನ್ನು ತನ್ನ Z ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಹೌದು, ಬಹುನಿರೀಕ್ಷಿತ ಐಕ್ಯೂ Z10 5G (iQOO Z10 5G) ಮತ್ತು ಐಕ್ಯೂ Z10x 5G (iQOO Z10x 5G ) ಫೋನ್‌ಗಳು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಪೈಕಿ ಐಕ್ಯೂ Z10x ಈ ವಿಭಾಗದಲ್ಲಿ ಅತ್ಯಂತ ವೇಗದ ಸ್ಮಾರ್ಟ್‌ಫೋನ್ ಆಗಿದೆ. ನೂತನ ಐಕ್ಯೂ Z10x ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಐಕ್ಯೂ Z10x 5G ಬಜೆಟ್ ಸ್ನೇಹಿ ಮತ್ತು ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.72 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 6500mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ನೂತನ ಫೋನಿನ ಮಾರಾಟದ ದಿನಾಂಕ ಮತ್ತು ಆಫರ್ ಬಗ್ಗೆ ತಿಳಿಯಲು ಮುಂದೆ ಓದಿ.

ಭಾರತದಲ್ಲಿ iQOO Z10x ಲಾಂಚ್; 6500mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಐಕ್ಯೂ Z10x 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z10x ಸ್ಮಾರ್ಟ್‌ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 2408 × 1080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಮತ್ತು 1050 nits ವರೆಗೆ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ Z10x ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G615 MC2 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 6GB ಮತ್ತು RAM ಹೊಂದಿದೆ. ಇದರೊಂದಿಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಐಕ್ಯೂ Z10x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ (ಮ್ಯಾಕ್ರೋ ಸೆನ್ಸರ್) ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಐಕ್ಯೂ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z10x ಈ ಸ್ಮಾರ್ಟ್‌ಫೋನಿನ ವಿಶೇಷತೆಯೆಂದರೆ, ಇದರಲ್ಲಿರುವ ದೊಡ್ಡ ಬ್ಯಾಟರಿ. ಈ ಮೊಬೈಲ್ 6,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಫೋನ್ ಬಜೆಟ್‌ ವಿಭಾಗದದಲ್ಲಿ ಶಕ್ತಿಯುತ ಕಾರ್ಯಕ್ಷಮತೆ, ದೊಡ್ಡ ಡಿಸ್ಪ್ಲೇ ಮತ್ತು ಉತ್ತಮ ಬ್ಯಾಟರಿ ಬಾಳಿಕೆಯನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಭಾರತದಲ್ಲಿ iQOO Z10x ಲಾಂಚ್; 6500mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಐಕ್ಯೂ Z10x ಬೆಲೆ ಮತ್ತು ಲಭ್ಯತೆ

ಐಕ್ಯೂ Z10x 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು 13,499 ರೂ.ಗೆ ಬಿಡುಗಡೆ ಮಾಡಲಾಗಿದೆ. 8GB RAM + 128GB ಸ್ಟೋರೇಜ್ ಬೆಲೆ 14,999 ರೂ. ಆಗಿದೆ. ಇನ್ನು 8GB RAM + 256GB ಸ್ಟೋರೇಜ್ ವೇರಿಯಂಟ್ 16,499 ರೂ.ಗೆ ಮಾರಾಟವಾಗಲಿದೆ. ಈ ಫೋನಿನ ಖರೀದಿಯ ಮೇಲೆ, ನೀವು ಆಯ್ದ ಐಸಿಐಸಿಐ ಮತ್ತು ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳೊಂದಿಗೆ 1000 ರೂ. ತ್ವರಿತ ರಿಯಾಯಿತಿ ಪಡೆಯಬಹುದು.

ರಿಯಾಯಿತಿ ಬಳಿಕ ಈ ಮೊಬೈಲ್‌ ಅನ್ನು ಕ್ರಮವಾಗಿ 12,499 ರೂ., 13,999 ರೂ. ಮತ್ತು 15,499 ರೂ.ಗೆ ಮಾರಾಟ ಮಾಡಲಾಗುತ್ತದೆ. ಇದೇ ಏಪ್ರಿಲ್ 22 ರಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ (Amazon.in) ಮತ್ತು ಐಕ್ಯೂ ಇ-ಸ್ಟೋರ್‌ ಮೂಲಕ ಈ ಫೋನ್ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಟೈಟಾನಿಯಂ ಮತ್ತು ಅಲ್ಟ್ರಾಮರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
iQOO Z10x with 6500mAh battery and MediaTek Dimensity 7300 launched in India: check price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+