ಭಾರತದಲ್ಲಿ iQOO Z11x 5G ಲಾಂಚ್: ₹18,999 ರಿಂದ ಬೆಲೆ, ಮಾರ್ಚ್ 16ರಿಂದ ಸೇಲ್!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ iQOO ಭಾರತದಲ್ಲಿ ಇಂದು (ಮಾರ್ಚ್ 12) ತನ್ನ ಬಹುನಿರೀಕ್ಷಿತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 'iQOO Z11x 5G' ಅನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಿದೆ. iQOO Z ಸರಣಿಯ ಹೊಸ ಸೇರ್ಪಡೆಯಾದ ಈ ಹೊಸ iQOO Z11x 5 ಫೋನ್ ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ವೇಗವಾದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಈ ಹೊಸ iQOO Z11x 5G ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
iQOO Z11x 5G: ಬೆಲೆ ಮತ್ತು ಮಾರಾಟ ವಿವರ
ಭಾರತದಲ್ಲಿ iQOO Z11x 5G ಸ್ಮಾರ್ಟ್‌ಫೋನ್‌ನ ಪ್ರಾರಂಭಿಕ ಬೆಲೆ ₹18,999 ಆಗಿದೆ. ಈ ಬೆಲೆಯಲ್ಲಿ 6GB RAM + 128GB ಸ್ಟೋರೇಜ್ ಮಾದರಿ ಲಭ್ಯವಿದೆ. 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹20,999 ಆಗಿದ್ದು, 8GB RAM + 256GB ಸ್ಟೋರೇಜ್ ಹೊಂದಿದ ಟಾಪ್ ವೇರಿಯಂಟ್ ₹22,999 ಕ್ಕೆ ದೊರೆಯಲಿದೆ. ಆದರೆ, ಆರಂಭಿಕ ಕೊಡುಗೆಯ ಭಾಗವಾಗಿ ಫೋನ್ ಮೇಲೆ ಆಕ್ಸಿಸ್ ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ₹2,000 ವರೆಗೆ ತಕ್ಷಣದ ರಿಯಾಯಿತಿ ನೀಡಲಾಗುತ್ತಿದೆ. ಲಭ್ಯತೆ ಕುರಿತು ನೋಡುವುದಾದರೆ. ಈ ಫೋನ್ ದೇಶದಲ್ಲಿ ಮಾರ್ಚ್ 16 ರಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ನಲ್ಲಿ ಮಾರಾಟಕ್ಕೆ ಬರಲಿದ್ದು, ಗ್ರಾಹಕರು ಇದನ್ನು Prismatic Green ಮತ್ತು Titan Black ಬಣ್ಣಗಳಲ್ಲಿ ಖರೀದಿಸಬಹುದು.

iQOO Z11x 5G: ಪ್ರಮುಖ ವೈಶಿಷ್ಟ್ಯಗಳು
ಹೊಸ iQOO Z11x 5G ಫೋನ್‌ನಲ್ಲಿ 6.76 ಇಂಚಿನ (1080 × 2344 ಪಿಕ್ಸೆಲ್) LCD ಡಿಸ್‌ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್, 382 ppi ಪಿಕ್ಸೆಲ್ ಡೆನ್ಸಿಟಿ, 1,200 ನಿಟ್ಸ್ ಪೀಕ್ ಬ್ರೈಟ್ನೆಸ್ ಹಾಗೂ 83% NTSC ಕಲರ್ ಗ್ಯಾಮಟ್ ಬೆಂಬಲ ನೀಡುತ್ತದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ ಈ ಹ್ಯಾಂಡ್‌ಸೆಟ್ IP68 ಮತ್ತು IP69+ ರೇಟಿಂಗ್ ಹೊಂದಿದೆ ಎಂದು ಕಂಪನಿ ಹೇಳಿದೆ. ಭದ್ರತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದೆ.
ಕಾರ್ಯಕ್ಷಮತೆಗಾಗಿ, iQOO Z11x 5G ಸ್ಮಾರ್ಟ್‌ಫೋನ್ 4nm ತಂತ್ರಜ್ಞಾನದಲ್ಲಿ ನಿರ್ಮಿತವಾದ MediaTek Dimensity 7400 Turbo ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಪ್ರೊಸೆಸರ್‌ನಲ್ಲಿ ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು 2.6GHz ಗರಿಷ್ಠ ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ. ಉಳಿದ ನಾಲ್ಕು ಎಫಿಷಿಯನ್ಸಿ ಕೋರ್‌ಗಳು 2.0GHz ಕ್ಲಾಕ್ ಸ್ಪೀಡ್ ಹೊಂದಿವೆ. ಫೋನ್‌ನಲ್ಲಿ 8GB ವರೆಗೆ LPDDR4x RAM ಮತ್ತು 256GB ವರೆಗೆ UFS 3.1 ಸ್ಟೋರೇಜ್ ಲಭ್ಯವಿದೆ.
ಫೋಟೋಗ್ರಫಿಗಾಗಿ iQOO Z11x 5G ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಆಗಿದ್ದು, f/2.45 ಅಪರ್ಚರ್ ಹೊಂದಿದೆ. ಇದಕ್ಕೆ ಜೊತೆಯಾಗಿ 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಫೋನ್‌ನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆ ಅದರ 7,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಗಿದೆ. ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 16-ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿದೆ. ಕಂಪನಿ ಈ ಫೋನ್‌ಗೆ ಎರಡು ವರ್ಷಗಳ OS ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಸುರಕ್ಷತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಹೇಳಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, Bluetooth 5.4, USB Type-C ಪೋರ್ಟ್ ಸೇರಿವೆ. ಜೊತೆಗೆ GPS, BeiDou, GLONASS, Galileo ಮತ್ತು QZSS ನ್ಯಾವಿಗೇಶನ್ ವ್ಯವಸ್ಥೆಗಳಿಗೂ ಬೆಂಬಲವಿದೆ. ಫೋನ್‌ನಲ್ಲಿ ಆಕ್ಸೆಲರೋಮೀಟರ್, ಅಂಬಿಯಂಟ್ ಲೈಟ್ ಸೆನ್ಸರ್, ಇ-ಕಂಪಾಸ್, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಜೈರೋಸ್ಕೋಪ್ ಸೇರಿದಂತೆ ಹಲವು ಸೆನ್ಸರ್‌ಗಳು ಸೇರಿವೆ. ಒಟ್ಟಾರೆಯಾಗಿ, ದೊಡ್ಡ ಬ್ಯಾಟರಿ, ಉತ್ತಮ ಕಾರ್ಯಕ್ಷಮತೆ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಈ ಸ್ಮಾರ್ಟ್‌ಫೋನ್ ಮಧ್ಯಮ ಬೆಲೆಯ ವಿಭಾಗದಲ್ಲಿ ಗಮನ ಸೆಳೆಯುವ ಸಾಧನವಾಗುವ ಸಾಧ್ಯತೆ ಇದೆ.


Click it and Unblock the Notifications








