iQOO Z11x 5G : ಮಾರ್ಚ್ 12 ಕ್ಕೆ ಲಾಂಚ್, 7,200mAh ಬ್ಯಾಟರಿ!
ಭಾರತದ ಮಧ್ಯಮ ಬೆಲೆಯ ಮಾರುಕಟ್ಟೆಗೆ ಮತ್ತೊಂದು ಜನಪ್ರಿಯ ಸ್ಮಾರ್ಟ್‌ಫೋನ್ ಆಗಮನಕ್ಕೆ ವೇದಿಕೆ ಸಿದ್ಧವಾಗಿದೆ. iQOO ಕಂಪನಿಯ ಹೊಸ iQOO Z11x 5G ಫೋನ್ ಇದೇ ತಿಂಗಳು ಬಿಡುಗಡೆಯಾಗುವುದು ಅಧಿಕೃತವಾಗಿದ್ದು, 7,200mAh ಬ್ಯಾಟರಿ, ಹೊಸ ತಲೆಮಾರಿನ ಚಿಪ್‌ಸೆಟ್ ಮತ್ತು ಆಧುನಿಕ ಸಾಫ್ಟ್‌ವೇರ್ ಅಪ್‌ಡೇಟ್‌ಗಳೊಂದಿಗೆ ಈ ಫೋನ್ ಬಿಡುಗಡೆಯಾಗುತ್ತಿದೆ.! ಹಾಗಾದರೆ, ಹೊಸ iQOO Z11x 5G ಸ್ಮಾರ್ಟ್‌ಪೋನ್ ಬಿಡುಗಡೆ ಯಾವಾಗ?, ನಿರೀಕ್ಷಿತ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.
iQOO Z11x 5G: ಬಿಡುಗಡೆ ಮತ್ತು ಲಭ್ಯತೆ
iQOO Z11x 5G ಫೋನ್ ಅನ್ನು ಮಾರ್ಚ್ 12ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ಬಳಿಕ ಇದು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ. ಟೀಸರ್ ಚಿತ್ರಗಳಿಂದ ತಿಳಿದುಬರುವಂತೆ, iQOO Z11x 5G ಫೋನ್ ಕಪ್ಪು ಮತ್ತು ಮಿಂಟ್ ಹಸಿರು ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಮೊಡ್ಯೂಲ್ ನೀಡಲಾಗಿದ್ದು, ಎರಡು ಸೆನ್ಸರ್‌ಗಳು, LED ಫ್ಲ್ಯಾಶ್ ಹಾಗೂ ರಿಂಗ್-ಲೈಟ್ ವಿನ್ಯಾಸ ಇದರಲ್ಲಿ ಕಾಣಿಸುತ್ತದೆ. ವಿನ್ಯಾಸವು ಪ್ರೀಮಿಯಂ ಲುಕ್ ನೀಡುವಂತೆ ರೂಪಿಸಲಾಗಿದೆ.
ಈ ಫೋನ್‌ನ ಅತ್ಯಂತ ದೊಡ್ಡ ಆಕರ್ಷಣೆ 7,200mAh ಸಾಮರ್ಥ್ಯದ ಬ್ಯಾಟರಿ. ಒಂದು ಬಾರಿ ಚಾರ್ಜ್ ಮಾಡಿದರೆ 40 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್, 93 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಸಮಯ, 15.4 ಗಂಟೆಗಳವರೆಗೆ ಗೇಮಿಂಗ್ ಸಮಯ ಮತ್ತು 18.7 ಗಂಟೆಗಳವರೆಗೆ ಸಾಮಾಜಿಕ ಮಾಧ್ಯಮ ಬಳಕೆ ಸಾಧ್ಯ ಎಂದು ಕಂಪೆನಿಯು ಹೇಳಿಕೊಂಡಿದೆ. ಜೊತೆಗೆ ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ ಮತ್ತು ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇದೆ, ಅಂದರೆ ಬೇರೆ ಸಾಧನಗಳನ್ನು ಕೂಡ ಈ ಫೋನ್ ಮೂಲಕ ಚಾರ್ಜ್ ಮಾಡಬಹುದು.

ಕಾರ್ಯಕ್ಷಮತೆಯ ವಿಭಾಗದಲ್ಲಿ, iQOO Z11x 5G ನಲ್ಲಿ MediaTek Dimensity 7400 Turbo ಚಿಪ್‌ಸೆಟ್ ನೀಡಲಾಗಿದೆ. ಇದು ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್‌ಗೆ ಸೂಕ್ತವಾದ ಕಾರ್ಯಕ್ಷಮತೆ ನೀಡುವ ನಿರೀಕ್ಷೆಯಿದೆ. ಏಕೆಂದರೆ, AnTuTu ಪರೀಕ್ಷೆಯಲ್ಲಿ ಈ ಫೋನ್ 10 ಲಕ್ಷಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದು ಹೇಳಲಾಗಿದೆ. ಸಾಫ್‌ವೇರ್ ವಿಭಾಗದಲ್ಲಿ, iQOO Z11x 5G Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತಿಳಿಸಲಾಗಿದೆ. ಇದಿರಂದ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಅನುಭವ ದೊರೆಯಲಿದೆ.
iQOO Z11x 5G: ನಿರೀಕ್ಷಿತ ಬೆಲೆ!
ಹಿಂದಿನ ವರ್ಷ ಬಿಡುಗಡೆಯಾದ iQOO Z10x ಮಾದರಿಯೊಂದಿಗೆ ಹೋಲಿಸಿದರೆ, ಹೊಸ Z11x ನಲ್ಲಿ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲಾಗಿದೆ ಮತ್ತು ಪ್ರೊಸೆಸರ್ ಅಪ್‌ಗ್ರೇಡ್ ಮಾಡಲಾಗಿದೆ. ಇದರಿಂದ ಬೆಲೆಯು ಸ್ವಲ್ಪ ಹೆಚ್ಚಾಗುವ ನಿರೀಕ್ಷೆ ಇದೆ. ಇತ್ತೀಚಿನ ಸೋರಿಕೆಗಳ ಪ್ರಕಾರ, ಭಾರತದಲ್ಲಿ iQOO Z11x 5G ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ ಸುಮಾರು ₹23,000ರೊಳಗೆ ಬೆಲೆ ಹೊಂದಿರಬಹುದು ಎಂಬ ನಿರೀಕ್ಷೆ ಇದೆ. ಈ ಬೆಲೆಯಲ್ಲಿ ದೊಡ್ಡ ಬ್ಯಾಟರಿ ಮತ್ತು ಶಕ್ತಿಶಾಲಿ ಚಿಪ್‌ಸೆಟ್ ನೀಡುತ್ತಿರುವುದು ಮಧ್ಯಮ ಶ್ರೇಣಿಯ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿ ಪರಿಣಮಿಸಬಹುದು.
ಒಟ್ಟಾರೆಯಾಗಿ, iQOO Z11x 5G ಫೋನ ದೀರ್ಘಕಾಲ ಬ್ಯಾಟರಿ, ಉತ್ತಮ ಕಾರ್ಯಕ್ಷಮತೆ ಮತ್ತು ಸ್ಪರ್ಧಾತ್ಮಕ ದರದ ಸಂಯೋಜನೆಯೊಂದಿಗೆ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಸಾಧ್ಯತೆ ಇದೆ. ಅಧಿಕೃತ ಬಿಡುಗಡೆ ಬಳಿಕ ಸಂಪೂರ್ಣ ವಿವರಗಳು ಮತ್ತು ಪ್ರಾರಂಭಿಕ ಆಫರ್‌ಗಳು ತಿಳಿಯಲಿದ್ದು, ಮಧ್ಯಮ ದರದ 5G ಫೋನ್ ಹುಡುಕುತ್ತಿರುವವರಿಗೆ ಇದು ಪರಿಗಣಿಸಬಹುದಾದ ಹೊಸ ಆಯ್ಕೆಯಾಗಬಹುದು. ಇದಕ್ಕಾಗಿ ನಾವು ಮಾರ್ಚ್ 12ರ ವರೆಗೆ ನಾವು ಕಾಯಬೇಕು.!


Click it and Unblock the Notifications