7,200mAh ಬ್ಯಾಟರಿಯ iQOO Z11x 5G ಮೊದಲ ಸೇಲ್ ಇಂದಿನಿಂದ ಆರಂಭ!
ಭಾರತೀಯ ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿರುವ ಬಹುನಿರೀಕ್ಷಿತ iQOO Z11x 5G ಸ್ಮಾರ್ಟ್‌ಫೋನ್ ಇಂದು ಮೊದಲ ಬಾರಿಗೆ ಖರೀದಿಗೆ ಲಭ್ಯವಾಗುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ನಲ್ಲಿಎಸ್‌ಕ್ಲೂಸಿಬ್ ಆಗಿ ಫೋನ್ ಮಾರಾಟಕ್ಕೆ ಬರಲಿದ್ದು, ಗ್ರಾಹಕರು ₹2,000 ವರೆಗೆ ತಕ್ಷಣದ ರಿಯಾಯಿತಿ ಮತ್ತು 6 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಗಳಲ್ಲಿ ಫೋನ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಕಳೆದ ವಾರವಷ್ಟೇ (ಮಾರ್ಚ್ 12) ಭಾರತದಲ್ಲಿ ಅನಾವರಣಗೊಂಡ ಈ ಫೋನ್, ತನ್ನ ವಿಭಾಗದಲ್ಲೇ ಅತ್ಯಂತ ವೇಗವಾದ ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿಕೊಂಡಿದ್ದು, 7,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, ಸ್ಮೂತ್ ಡಿಸ್ಪ್ಲೇ ಮತ್ತು ಹಲವು AI ಆಧಾರಿತ ಕ್ಯಾಮೆರಾ ಹಾಗೂ ಸಾಫ್ಟ್‌ವೇರ್ ಸುಧಾರಣೆಗಳೊಂದಿಗೆ ಈ ಸಾಧನವನ್ನು ಪರಿಚಯಿಸಲಾಗಿದೆ.
iQOO Z11x 5G: ಬೆಲೆ ಮತ್ತು ಕೊಡುಗೆಯ ವಿವರಗಳು
ಭಾರತದಲ್ಲಿ iQOO Z11x 5G ಸ್ಮಾರ್ಟ್‌ಫೋನ್‌ನ ಪ್ರಾರಂಭಿಕ ಬೆಲೆ ₹18,999 ಆಗಿದೆ. ಈ ಬೆಲೆಯಲ್ಲಿ 6GB RAM + 128GB ಸ್ಟೋರೇಜ್ ಮಾದರಿ ಲಭ್ಯವಿದೆ. 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ ₹20,999 ಆಗಿದ್ದು, 8GB RAM + 256GB ಸ್ಟೋರೇಜ್ ಹೊಂದಿದ ಟಾಪ್ ವೇರಿಯಂಟ್ ₹22,999 ಕ್ಕೆ ದೊರೆಯಲಿದೆ. ಆದರೆ, ಆರಂಭಿಕ ಕೊಡುಗೆಯ ಭಾಗವಾಗಿ ಫೋನ್ ಮೇಲೆ ಆಕ್ಸಿಸ್ ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ₹2,000 ವರೆಗೆ ತಕ್ಷಣದ ರಿಯಾಯಿತಿ ನೀಡಲಾಗುತ್ತಿದೆ. ಇದರ ಜೊತೆಗೆ 6 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಯನ್ನೂ ನೀಡಲಾಗಿದೆ. ಇನ್ನುಈ ಫೋನ್ ಅಮೆಜಾನ್, ಕಂಪೆನಿಯ ಅಧಿಕೃತ ವೆಬ್‌ಸೈಟ್, ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಹಾಗೂ ದೇಶದ ವಿವಿಧ ಮೊಬೈಲ್ ರಿಟೇಲ್ ಅಂಗಡಿಗಳಲ್ಲಿ Prismatic Green ಮತ್ತು Titan Black ಬಣ್ಣಗಳಲ್ಲಿ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.

iQOO Z11x 5G: ಪ್ರಮುಖ ವೈಶಿಷ್ಟ್ಯಗಳು
ಹೊಸ iQOO Z11x 5G ಫೋನ್‌ನಲ್ಲಿ 6.76 ಇಂಚಿನ (1080 × 2344 ಪಿಕ್ಸೆಲ್) LCD ಡಿಸ್‌ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್, 382 ppi ಪಿಕ್ಸೆಲ್ ಡೆನ್ಸಿಟಿ, 1,200 ನಿಟ್ಸ್ ಪೀಕ್ ಬ್ರೈಟ್ನೆಸ್ ಹಾಗೂ 83% NTSC ಕಲರ್ ಗ್ಯಾಮಟ್ ಬೆಂಬಲ ನೀಡುತ್ತದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ ಈ ಹ್ಯಾಂಡ್‌ಸೆಟ್ IP68 ಮತ್ತು IP69+ ರೇಟಿಂಗ್ ಹೊಂದಿದೆ ಎಂದು ಕಂಪನಿ ಹೇಳಿದೆ. ಭದ್ರತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದೆ.
ಕಾರ್ಯಕ್ಷಮತೆಗಾಗಿ, iQOO Z11x 5G ಸ್ಮಾರ್ಟ್‌ಫೋನ್ 4nm ತಂತ್ರಜ್ಞಾನದಲ್ಲಿ ನಿರ್ಮಿತವಾದ MediaTek Dimensity 7400 Turbo ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಪ್ರೊಸೆಸರ್‌ನಲ್ಲಿ ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು 2.6GHz ಗರಿಷ್ಠ ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ. ಉಳಿದ ನಾಲ್ಕು ಎಫಿಷಿಯನ್ಸಿ ಕೋರ್‌ಗಳು 2.0GHz ಕ್ಲಾಕ್ ಸ್ಪೀಡ್ ಹೊಂದಿವೆ. ಫೋನ್‌ನಲ್ಲಿ 8GB ವರೆಗೆ LPDDR4x RAM ಮತ್ತು 256GB ವರೆಗೆ UFS 3.1 ಸ್ಟೋರೇಜ್ ಲಭ್ಯವಿದೆ.
ಫೋಟೋಗ್ರಫಿಗಾಗಿ iQOO Z11x 5G ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಆಗಿದ್ದು, f/2.45 ಅಪರ್ಚರ್ ಹೊಂದಿದೆ. ಇದಕ್ಕೆ ಜೊತೆಯಾಗಿ 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ ಫೋನ್‌ನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆ ಅದರ 7,200mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಗಿದೆ. ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಸಾಫ್‌ವೇರ್ ವಿಭಾಗದಲ್ಲಿ, ಈ ಫೋನ್ ಆಂಡ್ರಾಯ್ಡ್ 16-ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿದೆ. ಕಂಪನಿ ಈ ಫೋನ್‌ಗೆ ಎರಡು ವರ್ಷಗಳ OS ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಸುರಕ್ಷತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಹೇಳಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, Bluetooth 5.4, USB Type-C ಪೋರ್ಟ್ ಸೇರಿವೆ. ಜೊತೆಗೆ GPS, BeiDou, GLONASS, Galileo ಮತ್ತು QZSS ನ್ಯಾವಿಗೇಶನ್ ವ್ಯವಸ್ಥೆಗಳಿಗೂ ಬೆಂಬಲವಿದೆ. ಫೋನ್‌ನಲ್ಲಿ ಆಕ್ಸೆಲರೋಮೀಟರ್, ಅಂಬಿಯಂಟ್ ಲೈಟ್ ಸೆನ್ಸರ್, ಇ-ಕಂಪಾಸ್, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಜೈರೋಸ್ಕೋಪ್ ಸೇರಿದಂತೆ ಹಲವು ಸೆನ್ಸರ್‌ಗಳು ಸೇರಿವೆ.


Click it and Unblock the Notifications








