ಮಾರ್ಚ್ 12ಕ್ಕೆ iQOO Z11x ಲಾಂಚ್?..₹20K ಒಳಗೆ ಪವರ್‌ಫುಲ್ 5G ಫೋನ್?
ನೀವು ಬಜೆಟ್ ಬೆಲೆಯಲ್ಲಿ ಒಂದು ಅತ್ಯುತ್ತಮ 5G ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಯೋಚಿಸುತ್ತಿದ್ದೀರಾ?..ಹಾಗಾದರೆ, iQOO ಶೀಘ್ರದಲ್ಲೇ ಪರಿಚಯಿಸಲಿರುವ iQOO Z11x ಸ್ಮಾರ್ಟ್‌ಫೋನಿನ ಆಗಮನಕ್ಕಾಗಿ ಕಾಯಬಹುದು. ಏಕೆಂದರೆ, ಈ ಫೋನ್ 7,200mAh ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಅತ್ಯುತ್ತಮ ನೀರು-ಧೂಳು ರಕ್ಷಣೆಂತಹ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳನ್ನು ಬಜೆಟ್ ಬೆಲೆಯಲ್ಲಿ ಹೊತ್ತು ಬರುತ್ತಿದೆ ಎನ್ನಲಾಗಿದೆ. ಜನಪ್ರಿಯ ಟಿಪ್‌ಸ್ಟಾರ್ ಓರ್ವರು ಈ ಫೋನ್ ಬಿಡುಗಡೆಯಾಗಲಿರುವ ದಿನಾಂಕವನ್ನು ಸಹ ಸೋರಿಕೆ ಮಾಡಿದ್ದಾರೆ.
ಹೌದು, ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ ಪ್ರಕಾರ, ಭಾರತದಲ್ಲಿ iQOO Z11x ಬಿಡುಗಡೆ ದಿನಾಂಕವನ್ನು ಮಾರ್ಚ್ 12 ರಂದು ಮಧ್ಯಾಹ್ನ 12 ಗಂಟೆಗೆ (IST) ನಿಗದಿಪಡಿಸಲಾಗಿದೆ. ಬಿಡುಗಡೆಯಾದ ನಂತರ iQOO Z11x ಭಾರತದಲ್ಲಿ ಅಮೆಜಾನ್ ಮತ್ತು iQOO.com ಮೂಲಕ ಮಾರಾಟಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಇತ್ತ Amazon ವೇದಿಕೆಯಲ್ಲಿ ಈಗಾಗಲೇ iQOO Z11x ಕುರಿತ ಟೀಸರ್ ಪುಟ ಲೈವ್ ಆಗಿರುವುದು ಲಾಂಚ್ ಸಮೀಪಿಸುತ್ತಿರುವುದಕ್ಕೆ ಸಹ ಸೂಚನೆ ನೀಡುತ್ತದೆ. ಆದರೆ ಕಂಪನಿ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.
iQOO Z11x ಬಗ್ಗೆ ಬೆಲೆಯ ಬಗ್ಗೆ ಮಾಹಿತಿ ಇನ್ನೂ ಲಭ್ಯವಿಲ್ಲ, ಆದರೂ ಕಳೆದ ವರ್ಷದ iQOO Z10x ರೂ. 13,499 ರ ಆರಂಭಿಕ ಬೆಲೆಯನ್ನು ಪಡೆದುಕೊಂಡಿತು. ದೇಶದಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಬೆಲೆ ಏರಿಕೆಗಳನ್ನು ಪರಿಗಣಿಸಿ, ಭಾರತದಲ್ಲಿ iQOO Z11x ಬೆಲೆ ರೂ. 20,000 ಕ್ಕಿಂತ ಕಡಿಮೆ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ತ್ತೀಚಿನ ದರ ಏರಿಕೆಗಳ ನಡುವೆಯೂ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾದರೆ, ಇದು ಮಧ್ಯಮ ಬಜೆಟ್ 5G ಫೋನ್ ಹುಡುಕುತ್ತಿರುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಬಹುದು ಎಂಬುದು ನಮ್ಮ ಅಭಿಪ್ರಾಯ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ iQOO Z11x ಫೋನ್ MediaTek Dimensity 7400 Turbo ಪ್ರೊಸೆಸರ್‌ನೊಂದಿಗೆ ಬರಲಿದೆ ಎನ್ನಲಾಗಿದೆ. 8GB RAM ಮತ್ತು 256GB UFS 3.1 ಸಂಗ್ರಹಣೆಯ ಸಂಯೋಜನೆ ದಿನನಿತ್ಯ ಬಳಕೆ, ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್‌ಗೆ ಉತ್ತಮ ಕಾರ್ಯಕ್ಷಮತೆ ನೀಡುವ ಸಾಧ್ಯತೆ ಇದೆ. ಬ್ಯಾಟರಿ ವಿಭಾಗದಲ್ಲಿ, iQOO Z11x ದೊಡ್ಡ 7,200mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇರಬಹುದು. ಜೊತೆಗೆ ಇದು 44W ವೇಗದ ಚಾರ್ಜಿಂಗ್ ಬೆಂಬಲ ಹೊಂದಿರಬಹುದು ಎಂದು ಹೇಳಲಾಗಿದೆ.
ಡಿಸ್ಪ್ಲೇ ವಿಭಾಗದಲ್ಲಿ, 6. iQOO Z11x ನಲ್ಲಿ76 ಇಂಚಿನ IPS LCD ಪರದೆ ಮತ್ತು 120Hz ರಿಫ್ರೆಶ್ ರೇಟ್ ನೀಡಲಾಗಬಹುದು.ಕ್ಯಾಮೆರಾ ವಿಭಾಗದಲ್ಲಿ 50MP Sony ಮುಖ್ಯ ಸೆನ್ಸರ್ ಜೊತೆಗೆ ಇನ್ನೊಂದು ಸಹಾಯಕ ಲೆನ್ಸ್ ಇರಬಹುದು. ಸೆಲ್ಫಿ ಪ್ರಿಯರಿಗೆ 32MP ಮುಂಭಾಗದ ಕ್ಯಾಮೆರಾ ನೀಡುವ ಸಾಧ್ಯತೆ ಇದೆ. ಈ ಫೋನ್‌ನ ಇನ್ನೊಂದು ಪ್ರಮುಖ ಅಂಶವೆಂದರೆ IP68/IP69 ರೇಟಿಂಗ್. ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ ಈ ವೈಶಿಷ್ಟ್ಯ ಬಜೆಟ್ ವಿಭಾಗದಲ್ಲಿ ಅಪರೂಪ. ಸಾಫ್ಟ್‌ವೇರ್ ದೃಷ್ಟಿಯಿಂದ, ಫೋನ್ Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆಯಾಗಿ, ದೊಡ್ಡ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್, 5G ಬೆಂಬಲ ಮತ್ತು ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ iQOO Z11x ಭಾರತದಲ್ಲಿ ಮೌಲ್ಯಾಧಾರಿತ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಅಧಿಕೃತ ಲಾಂಚ್ ಮತ್ತು ಬೆಲೆ ಘೋಷಣೆ ನಂತರ ಈ ಫೋನ್ ಬಜೆಟ್ 5G ವಿಭಾಗದಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟವಾಗಲಿದೆ. . 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸ್ಪರ್ಧಾತ್ಮಕವಾಗಿ ಇದ್ದರೆ, ಇದು ಕೈಗೆಟುಕುವ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಗಳಲ್ಲಿ ಒಂದಾಗಬಹುದು. ಏನಂತಿರಾ?


Click it and Unblock the Notifications