Home
ಮೊಬೈಲ್

iQoo: ಜುಲೈ 15ಕ್ಕೆ ಬರುತ್ತೆ ಈ ಹೊಸ ಫೋನ್: ಹಿಂದೆಂದೂ ಕಂಡಿರದ ಮಸ್ತ್ ಫೀಚರ್: ಬೆಲೆಯೂ ಅಗ್ಗ!

ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ಬೇಡಿಕೆಯ ಹಿನ್ನಲೆಯಲ್ಲಿ ಮೊಬೈಲ್‌ಗಳು ಒಂದರ ಹಿಂದೆ ಒಂದರಂತೆ ಲಾಂಚ್ ಆಗುತ್ತಿವೆ. ಜೂನ್‌ ತಿಂಗಳಲ್ಲಿ ಕೂಡ ಅನೇಕ ಸ್ಮಾರ್ಟ್‌ಫೋನ್‌​ಗಳು ಬಿಡುಗಡೆ ಆಗಿದ್ದವು. ಸ್ಯಾಮ್​ಸಂಗ್, ಒನ್​ಪ್ಲಸ್, ಒಪ್ಪೋ, ರಿಯಲ್‌ಮಿ, ರೆಡ್ಮಿ, ಇನ್ಫಿನಿಕ್ಸ್ ಸೇರಿದಂತೆ ವಿವಿಧ ಕಂಪನಿಗಳು ಆಕರ್ಷಕ ಫೋನ್​ಗಳನ್ನು ಪರಿಚಯಿಸಿದ್ದವು. ಜುಲೈನಲ್ಲಿ ಕೂಡ ಮಾರುಕಟ್ಟೆಗೆ ಕೆಲ ಫೋನ್‌ಗಳು ಅಪ್ಪಳಿಸಲಿವೆ. ಈ ಪಟ್ಟಿಗೆ iQOOನ ಹೆಸರು ಸಹ ಸೇರ್ಪಡೆಯಾಗಿದೆ. ನೀವು ಹೊಸ ಮೊಬೈಲ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಈ ಮೊಬೈಲ್‌ ಅನ್ನು ಕೂಡ ಪರಿಗಣಿಸಬಹುದು. ಹಾಗಿದ್ರೆ, iQOOನ ಹೊಸ ಫೋನ್‌ ಯಾವುದು? ಬಿಡುಗಡೆ ಯಾವಾಗ? ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು? ಅನ್ನೋದನ್ನು ತಿಳಿಯೋಣ ಬನ್ನಿ.

ಜುಲೈ ತಿಂಗಳಲ್ಲಿ ಅನೇಕ ಎಲೆಕ್ಟ್ರಾನಿಕ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. iQOO ಕಂಪನಿಯು ಭಾರತದಲ್ಲಿ iQOO Z9 Lite 5G ಮೊಬೈಲ್‌ ಅನ್ನು ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ನ ಲಾಂಚ್‌ ಈವೆಂಟ್‌ ಆನ್‌ಲೈನ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಸಹ ನೇರಪ್ರಸಾರ ಆಗಲಿದೆ. ಕಂಪನಿಯು ಜುಲೈ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ iQOO Z9 Lite 5G ಅನ್ನು ಬಿಡುಗಡೆ ಮಾಡಲಿದೆ.

iQoo: ಜುಲೈ 15ಕ್ಕೆ ಬರುತ್ತೆ ಈ ಹೊಸ ಫೋನ್: ಮಸ್ತ್ ಫೀಚರ್.. ಬೆಲೆಯೂ ಅಗ್ಗ!

iQoo Z9 ಲೈನಪ್‌ ಭಾಗವೆಂದು ಹೇಳಲಾಗಿರುವ iQoo Z9 Lite ಬಜೆಟ್ ಸ್ನೇಹಿ ಫೋನ್ ಆಗಿದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಇದು 5G ಸ್ಮಾರ್ಟ್‌ಫೋನ್‌ ಆಗಿರಲಿದೆ. ಇದು iQoo Z9 5G ಮತ್ತು iQoo Z9x 5G ಸಾಲಿಗೆ ಸೇರಲಿದೆ. Vivo T3 Lite 5Gನ ಮರುಬ್ರಾಂಡಿಂಗ್ ಫೋನ್ ಎಂದು ಹೇಳಲಾಗಿದೆ. ಈ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜುಲೈ 15 ರಂದು iQoo Z9 Lite ಪ್ರಾರಂಭವಾಗಲಿದೆ.

iQOO ಇಂಡಿಯಾ ಸಿಇಒ ಪೋಸ್ಟ್

iQOO ಇಂಡಿಯಾ ಸಿಇಒ ನಿಪುನ್ ಮೌರ್ಯ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಫೋನ್‌ನ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಈ ಫೋನ್‌ನ ಒಂದು ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ. ಈ ಫೋನ್ ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸಂವೇದಕದೊಂದಿಗೆ ಕಂಡುಬಂದಿದೆ. ಇನ್ನೂ, ಈ ಫೋನ್ ಅನ್ನು ಹಸಿರು ಬಣ್ಣದಲ್ಲಿ ನೋಡಬಹುದು. iQOO ಬಿಡುಗಡೆ ದಿನಾಂಕದೊಂದಿಗೆ ಫೋನ್‌ನ ಪ್ರೊಸೆಸರ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

iQOO Z9 Lite 5Gನ ವಿಶೇಷತೆಗಳು

ಕಂಪನಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ iQOO Z9 Lite 5G ಅನ್ನು ತರುತ್ತಿದೆ. ಕಂಪನಿಯು ಈ ಫೋನ್ ಅನ್ನು 6nm ಪ್ರೊಸೆಸರ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಿದೆ. ಈ ಫೋನ್‌ನ AnTuTu ಸ್ಕೋರ್ ಕುರಿತು ಹೇಳುವುದಾದರೆ, ಈ ಹೊಸ ಸ್ಮಾರ್ಟ್‌ಫೋನ್ 414K + ಸ್ಕೋರ್ ಅನ್ನು ಪಡೆದಿದೆ.

6GB RAM ಮತ್ತು 128GB ಸ್ಟೋರೇಜ್ ಆಯ್ಕೆ

AnTuTu ಸ್ಕೋರ್ ಕುರಿತು ಮಾಹಿತಿ ನೀಡುವುದರ ಜೊತೆಗೆ, ಈ ಫೋನ್‌ನ 6GB + 128GB ರೂಪಾಂತರವನ್ನು AnTuTu ಸ್ಕೋರ್‌ಗಾಗಿ ಪರೀಕ್ಷಿಸಲಾಗಿದೆ ಎಂದು ಕಂಪನಿಯು ದೃಢಪಡಿಸಿದೆ. ಇದಲ್ಲದೆ, ಈ ಫೋನ್‌ನ ಸ್ಟೋರೇಜ್‌ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ಕಂಪನಿಯು ಈ ಫೋನ್ ಅನ್ನು 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯೊಂದಿಗೆ ಗ್ರಾಹಕರಿಗೆ ತಲುಪಿಸುತ್ತದೆ.

  • ಡಿಸ್‌ಪ್ಲೇ: iQOO ಫೋನ್‌ನ ಡಿಸ್ಲ್ಪೇ 720×1612 ರೆಸಲ್ಯೂಶನ್ ಮತ್ತು 300 PPI ಪಿಕ್ಸೆಲ್ ಹೊಂದಿದೆ. ಇದು ಪಂಚ್-ಹೋಲ್ ಡಿಸ್ಪ್ಲೇ ಹೊಂದಿದೆ
  • ಕ್ಯಾಮೆರಾ: ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.
  • ಮೆಮೊರಿ: 4GB RAM ಹೊಂದಿರುವ ಸಾಧ್ಯತೆಯಿದೆ. ಇತರ ರೂಪಾಂತರಗಳೂ ಇರಬಹುದು.
  • ಸಾಫ್ಟ್‌ವೇರ್: ಈ ಫೋನ್ Android 14 ಅನ್ನು ರನ್ ಮಾಡುತ್ತದೆ. ಇದು ಎರಡು ವರ್ಷಗಳ Android OS ಅಪ್‌ಗ್ರೇಡ್‌ಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಹೊಂದಿದೆ. ಜೊತೆಯಲ್ಲಿರುವ GPU ಆರ್ಮ್ ಮಾಲಿ-G57 MC3 ಜೊತೆಗೆ 748MHz ಆಗಿದೆ.
  • ಪ್ರೊಸೆಸರ್: ಇದು MediaTek ಡೈಮೆನ್ಸಿಟಿ 800U ಪ್ರೊಸೆಸರ್ ಹೊಂದಿರಲಿದೆ. 2.0GHzನಲ್ಲಿ ಎರಡು ಕಾರ್ಟೆಕ್ಸ್ A76 ಕಾರ್ಯಕ್ಷಮತೆಯ ಕೋರ್‌ಗಳನ್ನು ಹೊಂದಿದೆ. ಮತ್ತು 2.0GHz ನಲ್ಲಿ ಆರು ಕಾರ್ಟೆಕ್ಸ್ A55 ದಕ್ಷತೆಯ ಕೋರ್‌ಗಳನ್ನು ಹೊಂದಿದೆ. Realme X7, Realme Narzo 30 Pro 5G, Vivo V21, ಮತ್ತು OPPO A94 5G ನಂತಹ ಇತರ ಡೈಮೆನ್ಸಿಟಿ 800U ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಇಲ್ಲಿನ ಕಾರ್ಯಕ್ಷಮತೆಯ ಕೋರ್‌ಗಳನ್ನು ಕಡಿಮೆ ಮಾಡಲಾಗಿದೆ.
  • ಬ್ಯಾಟರಿ: ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಮತ್ತು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆ ಆಗಲಿದೆ.

ಒಟ್ಟಾರೆ, ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿ iQoo ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಭಾರೀ ಸದ್ದು ಮಾಡುತ್ತಿವೆ. ಕಂಪನಿಯು, ಬಜೆಟ್‌ ಸ್ನೇಹಿ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಮೊಬೈಲ್‌ಗಳನ್ನು ಪರಿಚಯಿಸುವ ಮೂಲಕ ಅನೇಕ ದೊಡ್ಡ ದೊಡ್ಡ ಕಂಪನಿಗಳಿಗೆ ಸಖತ್ ಪೈಪೋಟಿ ನೀಡುತ್ತಿದೆ. ಆಗಾಗ್ಗೆ, ವಿನೂತನ ಫೀಚರ್ಸ್‌ನ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿಯೂ ಈ ಸಂಸ್ಥೆ ಯಶಸ್ವಿಯಾಗಿದೆ. ಇದೀಗ ಸದ್ದಿಲ್ಲದೆ ನೂತನ 5G ಮೊಬೈಲ್‌ ಬಿಡುಗಡೆ ಮಾಡಲು ಸಿದ್ದವಾಗಿದೆ.

Best Mobiles in India

English summary
iQOO Z9 Lite 5G Confirmed to Launch on July 15 in India. iQOO Z9 Lite 5G is expected to launch soon as the brand’s entry-level 5G phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+