Home
ಮೊಬೈಲ್

9,999 ರೂ. ಮಾತ್ರ! ಜನ ಕಾಯುತ್ತಿರುವ ಫೋನ್.. ಇಂದು iQOO Z9 Lite 5G ಸೇಲ್ ಶುರು

iQOO Z9 Lite 5G Sale Start in India: ಭಾರತದಲ್ಲಿ ಬಜೆಟ್ ಫೋನ್‌ಗಳ ಹಾವಳಿ ಹೆಚ್ಚಾಗುತ್ತಿದೆ. ರೆಡ್ಮಿ, ಸ್ಯಾಮ್‌ಸಂಗ್‌ಗೆ ಸವಾಲೊಡ್ಡಲು ಇದೀಗ ಅನೇಕ ಕಂಪನಿಗಳು ಅತಿ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್​ನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ, ಐಕ್ಯೂ ಕಂಪನಿ ಬಜೆಟ್ ಬೆಲೆಗೆ ಹೊಸ ಐಕ್ಯೂ Z9 ಲೈಟ್ 5G (iQOO Z9 Lite 5G) ಅನ್ನು ಲಾಂಚ್ ಮಾಡಿದೆ. ಅಂದಹಾಗೆ, ಈ ಮೊಬೈಲ್‌ ಇಂದಿನಿಂದ (ಜುಲೈ 20) Amazonನಲ್ಲಿ ಮೊದಲ ಮಾರಾಟ ಪ್ರಾರಂಭಿಸಲಿದೆ. ಮೊದಲ ದಿನವೇ ಕಂಪನಿ ಭರ್ಜರಿ ಆಫರ್‌ ನೀಡುತ್ತಿದೆ. ಈ ಫೋನಿನ ಬೆಲೆ ಎಷ್ಟು? ಆಫರ್‌ಗಳೇನು? ತಿಳಿಯೋಣ ಬನ್ನಿ.

ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಐಕ್ಯೂ ಬ್ರ್ಯಾಂಡ್, ಇದೀಗ ನೂತನ ಫೋನ್‌ನೊಂದಿಗೆ ಪುನಃ ಬಂದಿದೆ. ಈ ಬಾರಿ ವಿಶೇಷವಾಗಿ ಬಜೆಟ್ ಪ್ರಿಯರನ್ನು ಗುರಿಯಾಗಿಸಿ ಅತಿ ಕಡಿಮೆ ಬೆಲೆಗೆ ಐಕ್ಯೂ Z9 ಲೈಟ್ 5G ಅನ್ನು ತನ್ನ 'Z' ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಇದು 6.56 ಇಂಚಿನ HD+ LCD ಡಿಸ್ಲ್ಪೇ, MediaTek Dimensity 6300 SoC ಪ್ರೊಸೆಸರ್, 50MP + 2MP ಡ್ಯುಯಲ್ ಕ್ಯಾಮೆರಾ, 5000mAh ಬ್ಯಾಟರಿ ಹೊಂದಿದೆ.

9,999 ರೂ. ಮಾತ್ರ! ಜನ ಕಾಯುತ್ತಿರುವ ಫೋನ್.. ಇಂದು iQOO Z9 Lite 5G ಸೇಲ್

iQOO Z9 Lite 5G ಬೆಲೆ ಮತ್ತು ಲಭ್ಯತೆ

iQOO Z9 Lite 5G ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬರುತ್ತದೆ. ಇದರ 4GB+128GB ಸ್ಟೋರೇಜ್‌ನ ಬೆಲೆ ಕೇವಲ 10,499 ರೂ. ಇದೆ. 6GB+128GB ಸ್ಟೋರೇಜ್‌ ಮಾದರಿಯು 11,499 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಕ್ವಾ ಫ್ಲೋ ಮತ್ತು ಮೋಚಾ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು Amazon.in (ಅಮೇಜಾನ್ 'ಪ್ರೈಮ್ ಡೇ ಸೇಲ್') ಮತ್ತು iQOO ಇಂಡಿಯಾ ಇ-ಸ್ಟೋರ್‌ ಮೂಲಕ ಇಂದಿನಿಂದ (ಜುಲೈ 20) ಮಾರಾಟವಾಗಲಿದೆ.

9,999 ರೂ.ಗೆ ಫೋನ್ ಪಡೆದುಕೊಳ್ಳಿ!

ಭಾರತದಲ್ಲಿ ಐಕ್ಯೂ Z9 ಲೈಟ್ 5G ಫೋನಿನ 4GB RAM ಮತ್ತು 128GB ಸ್ಟೋರೇಜ್​ನ ಮೂಲ ಮಾದರಿಗೆ ಕೇವಲ 10,499 ರೂಪಾಯಿ ಮಾತ್ರ ಇದೆ. ಅದೇ 6GB ಮೆಮೊರಿ ರೂಪಾಂತರಕ್ಕೆ 11,499 ರೂಪಾಯಿ ನಿಗದಿ ಮಾಡಲಾಗಿದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು HDFC ಬ್ಯಾಂಕ್ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ ರೂ. 500 ತ್ವರಿತ ರಿಯಾಯಿತಿ ಪಡೆಯಬಹುದು.

ಜುಲೈ 31 ರವರೆಗೆ ಬಂಪರ್ ಆಫರ್‌!

iQOO Z9 Lite 5G ಫೋನ್ ಖರೀದಿಯ ಮೇಲೆ ಕಂಪನಿಯು ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ನೀವು ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿದರೆ ಮತ್ತು ಇಎಂಐ ವಹಿವಾಟುಗಳ ಮೇಲೆ 500 ರೂ. ಡಿಸ್ಕೌಂಟ್‌ ಪಡೆಯಬಹುದು. iQOO.comನಲ್ಲಿ ಜುಲೈ 31 ರವರೆಗೆ 549 ರೂ. ಮೌಲ್ಯದ vivo ಕಲರ್ ಇಯರ್‌ಫೋನ್‌ಗಳನ್ನು ಕೇವಲ 399 ರೂ.ಗೆ ಖರೀದಿಸಬಹುದು.

iQOO Z9 Lite 5G ವಿಶೇಷತೆಗಳೇನು?

ಡಿಸ್ಲ್ಪೇ: ಇದು 6.56 ಇಂಚಿನ (1612 × 720 ಪಿಕ್ಸೆಲ್‌ಗಳು) HD+ (HD+ 20:9 LCD) ಡಿಸ್ಲ್ಪೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್, ಜೊತೆಗೆ 840nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್: ಕಂಪನಿಯು ಈ ಫೋನಿನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm (MediaTek Dimensity 6300 SoC) ಪ್ರೊಸೆಸರ್‌ ಅಳವಡಿಸಿದೆ. ಇದು ಮಾಲಿ G57 MC2 GPU ನೊಂದಿಗೆ ಬರುತ್ತದೆ.

9,999 ರೂ. ಮಾತ್ರ! ಜನ ಕಾಯುತ್ತಿರುವ ಫೋನ್.. ಇಂದು iQOO Z9 Lite 5G ಸೇಲ್

ಸ್ಟೋರೇಜ್‌: ಈ ಫೋನ್ 4GB ಮತ್ತು 6GB LPDDR4x RAM ಜೊತೆಗೆ 128GB eMMC 5.1 ಸ್ಟೋರೇಜ್‌ ಹೊಂದಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಒಳಗೊಂಡಿದೆ.

ಕ್ಯಾಮೆರಾ: ಇದು ಡುಯಲ್ ಕ್ಯಾಮೆರಾ ರಚನೆ ಹೊಂದಿದೆ. ಸೋನಿ ಸಂವೇದಕದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. LED ಫ್ಲಾಶ್, 2MP ಕ್ಯಾಮೆರಾ ಮತ್ತು ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ.

ಸಾಫ್ಟ್‌ವೇರ್: ಈ ಫೋನ್ Funtouch OS 14 ಜೊತೆಗೆ Android 14ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ OS 2 ವರ್ಷಗಳ Android ಅಪ್ಡೇಟ್‌ಗಳ ಗ್ಯಾರಂಟಿ ಮತ್ತು 3 ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳೊಂದಿಗೆ ಬರುತ್ತದೆ.

ಬ್ಯಾಟರಿ: ಇದು 163.63 × 75.58 × 8.53mm / 8.39cm ಅಳತೆ ಮತ್ತು 185 ಗ್ರಾಂ ತೂಕವಿದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. 15W ವೇಗದ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳು: 5G, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.4, GPS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಪಡೆದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5 ಎಂಎಂ ಆಡಿಯೊ ಜಾಕ್ ಹೊಂದಿದೆ. IP64 ರೇಟಿಂಗ್‌ನೊಂದಿಗೆ ಧೂಳು ಮತ್ತು ಸ್ಪ್ಲಾಶ್ ನಿರೋಧಕ ರಕ್ಷಣೆ ಪಡೆದಿದೆ.

Best Mobiles in India

English summary
iQOO Z9 Lite 5G goes on sale in india Today via Amazon: check offer, price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+