ಜಸ್ಟ್ 9,999 ಸ್ವಾಮಿ! ಇದು ಐಕ್ಯೂ ತಾಕತ್ತು.. iQOO Z9 Lite 5G ಎಂಟ್ರಿಗೆ ಎಲ್ಲವೂ ಉಡೀಸ್
ಜಸ್ಟ್ 9,999 ರೂಪಾಯಿ ಸ್ವಾಮಿ..! ಇದು ಐಕ್ಯೂ ತಾಕತ್ತು.. ಈ ಹೊಸ ಫೋನ್ ಎಂಟ್ರಿಗೆ ಎಲ್ಲವೂ ಉಡೀಸ್..! ಐಕ್ಯೂಗೆ ಅಗ್ರಸ್ಥಾನ. ಹೌದು, ದೇಶದ ಪ್ರಮುಖ ಸ್ಮಾರ್ಟ್ಪೋನ್ ಬ್ರಾಂಡ್ ಐಕ್ಯೂ (iQOO) ತನ್ನ ಬಹುನಿರೀಕ್ಷಿತ iQOO Z9 Lite 5G ಸ್ಮಾರ್ಟ್ಪೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. 10,000 ರೂ.ಗಳ ಒಳಗೆ ಹೊಸ 5G ಮೊಬೈಲ್ ಖರೀದಿಸಲು ಬಯಸುವವರಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಿದೆ. ಇದು 6.56 ಇಂಚಿನ HD+ LCD ಡಿಸ್ಲ್ಪೇ, 50MP ಮತ್ತು 2MP ಡ್ಯುಯಲ್ ಕ್ಯಾಮೆರಾ, 5000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಹೌದು, ಕೊನೆಗೂ iQOO Z9 Lite 5G ಬೆಲೆ, ಮಾರಾಟದ ದಿನಾಂಕ ಮತ್ತು ವಿಶೇಷತೆಗಳು ಬಹಿರಂಗವಾಗಿದೆ. ಇದು iQOO ನಿಂದ ಹೊಸ ಬಜೆಟ್ 5G ಫೋನ್ ಆಗಿದ್ದು, iQOO Z9x ಕೆಳಗೆ ಸ್ಲಾಟ್‌ಗಳನ್ನು ಹೊಂದಿದೆ. iQOO Z9 Lite 5G ಸ್ಮಾರ್ಟ್‌ಫೋನ್ Vivo T3 Lite 5Gನ ಮರುಬ್ರಾಂಡ್ ಆಗಿದೆ. ಇದು ಅದೇ ಫೀಚರ್ಸ್ ಮತ್ತು ಬೆಲೆ ಟ್ಯಾಗ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ MediaTek Dimensity 6300 SoC ಪ್ರೊಸೆಸರ್, 6GB RAMನೊಂದಿಗೆ ಬರುತ್ತದೆ.

iQOO Z9 Lite 5G ಬೆಲೆ ಎಷ್ಟು?
iQOO Z9 Lite 5G ಆಕ್ವಾ ಫ್ಲೋ ಮತ್ತು ಮೋಚಾ ಬ್ರೌನ್ ಬಣ್ಣಗಳಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇದರ 4GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 10,499 ರೂ. ಇದೆ. 6GB + 128GB ಸ್ಟೋರೇಜ್ ಮಾದರಿಯ ಬೆಲೆ 11,499 ರೂ. ಹೊಂದಿದೆ. ಇದು Amazon.in ಮತ್ತು iQOO ಇಂಡಿಯಾ ಇ-ಸ್ಟೋರ್ ಮೂಲಕ ಜುಲೈ 20 ರಿಂದ ಮಾರಾಟವಾಗಲಿದೆ.
ಮೊದಲ ದಿನವೇ ಬಂಪರ್ ಆಫರ್
ಕಂಪನಿಯು iQOO Z9 Lite 5G ಫೋನ್ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತದೆ. ನೀವು ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ ಮತ್ತು ಇಎಂಐ ವಹಿವಾಟುಗಳ ಮೇಲೆ 500 ರೂ. ಡಿಸ್ಕೌಂಟ್ ಪಡೆಯಬಹುದು. iQOO.com ನಲ್ಲಿ ಜುಲೈ 31 ರವರೆಗೆ ಕೇವಲ 399 ರೂ.ಗೆ 549 ರೂಪಾಯಿ ಮೌಲ್ಯದ vivo ಕಲರ್ ಇಯರ್‌ಫೋನ್‌ಗಳನ್ನು ಪಡೆಯಬಹುದು.
iQOO Z9 Lite 5Gನ ವಿಶೇಷತೆಗಳು?
ಡಿಸ್ಲ್ಪೇ: ಈ ಫೋನ್ 6.56 ಇಂಚಿನ (1612 × 720 ಪಿಕ್ಸೆಲ್‌ಗಳು) HD+ (HD+ 20:9 LCD) ಡಿಸ್ಲ್ಪೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್, ಜೊತೆಗೆ 840 nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm (MediaTek Dimensity 6300 SoC) ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ, ಮಾಲಿ G57 MC2 GPU ನೊಂದಿಗೆ ಬರುತ್ತದೆ.
ಸ್ಟೋರೇಜ್ ಆಯ್ಕೆ: ಇದು 4GB ಮತ್ತು 6GB LPDDR4x RAM ಜೊತೆಗೆ 128GB eMMC 5.1 ಸ್ಟೋರೇಜ್ ಹೊಂದಿದೆ. ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ ಈ ಫೋನ್ ಒಳಗೊಂಡಿದೆ.

ಕ್ಯಾಮೆರಾ ಸೆಟಪ್: ಈ ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೋನಿ ಸಂವೇದಕದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. LED ಫ್ಲಾಶ್, f/2.4 ಅಪರ್ಚರ್‌ನೊಂದಿಗೆ 2MP ಕ್ಯಾಮೆರಾ, f/2.0 ಅಪರ್ಚರ್‌ನೊಂದಿಗೆ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಸಾಫ್ಟ್‌ವೇರ್: ಈ ಫೋನ್ Funtouch OS 14 ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ OS 2 ವರ್ಷಗಳ Android ಅಪ್ಡೇಟ್‌ಗಳ ಗ್ಯಾರಂಟಿ ಮತ್ತು 3 ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳೊಂದಿಗೆ ಬರುತ್ತದೆ.
ಬ್ಯಾಟರಿ ಬ್ಯಾಕಪ್: iQOO Z9 Lite 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 15W ವೇಗದ ವೇಗದ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರುತ್ತದೆ. ಈ ಮೊಬೈಲ್ 163.63 × 75.58 × 8.53mm / 8.39 cm ಅಳತೆ ಮತ್ತು 185 ಗ್ರಾಂ ತೂಕ ಹೊಂದಿದೆ.
ಕನೆಕ್ಟಿವಿಟಿ ಆಯ್ಕೆಗಳು: 5G, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.4, GPS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಪಡೆದಿದೆ.
ಇತರೆ ಫೀಚರ್ಸ್: ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5 ಎಂಎಂ ಆಡಿಯೊ ಜಾಕ್ ಹೊಂದಿದೆ. IP64 ರೇಟಿಂಗ್‌ನೊಂದಿಗೆ ಧೂಳು ಮತ್ತು ಸ್ಪ್ಲಾಶ್ ನಿರೋಧಕ ರಕ್ಷಣೆ ಪಡೆದಿದೆ.


Click it and Unblock the Notifications








