10,000 ಕ್ಕಿಂತ ಕಡಿಮೆ..! ರಾಶಿ ರಾಶಿ ಫೀಚರ್ಸ್.. ಇಂದೇ iQOO Z9 Lite 5G ಲಾಂಚ್
ದೇಶದ ಪ್ರಮುಖ ಸ್ಮಾರ್ಟ್ಪೋನ್ ಬ್ರಾಂಡ್ ಐಕ್ಯೂ (iQOO) ಇಂದು (ಜುಲೈ 15) ತನ್ನ ನೂತನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ iQOO Z9 Lite 5G ಆಗಿರುತ್ತದೆ. ಹೌದು, iQOO Z9 Lite 5G ಭಾರತದಲ್ಲಿ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ. ಈ ಫೋನ್ ಎಂಟ್ರಿ ಲೆವೆಲ್ ಫೋನ್ ಆಗಿರಲಿದೆ. ಇದಕ್ಕಾಗಿ, ಮೈಕ್ರೋಸೈಟ್ ಅನ್ನು ಅಮೆಜಾನ್‌ನಲ್ಲಿ ಲೈವ್ ಮಾಡಲಾಗಿದೆ. ಈ ಮೈಕ್ರೋಸೈಟ್‌ನಲ್ಲಿ ಫೋನ್‌ನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ, ಕಂಪನಿಯು ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಮುಂಬರುವ iQOO Z9 Lite 5G ಬ್ರ್ಯಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು 10,000 ರೂ. ಗಿಂತಲೂ ಕಡಿಮೆ ವಿಭಾಗದಲ್ಲಿ ಬಿಡುಗಡೆಯಾಗಲಿದೆ. iQOO ಮುಂಬರುವ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಲಾಂಚ್ ಮಾಡುತ್ತಿದೆ. ಮುಂಬರುವ ಸ್ಮಾರ್ಟ್‌ಫೋನ್ ಮೋಚಾ ಬ್ರೌನ್ ಮತ್ತು ಆಕ್ವಾ ಫ್ಲೋ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು iQOO ದೃಢಪಡಿಸಿದೆ. ಈ ಫೋನ್‌ನ ಬೆಲೆ ಎಷ್ಟು? ಫೀಚರ್ಸ್ ಏನು? ತಿಳಿಯೋಣ ಬನ್ನಿ.

10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಾಂಚ್!
ಕಂಪನಿಯು ಈ ಫೋನ್‌ನ ಬೆಲೆಯನ್ನು ದೃಢಪಡಿಸಿಲ್ಲ. ಆದರೆ, ಇದು ಇಲ್ಲಿಯವರೆಗಿನ ಬ್ರ್ಯಾಂಡ್‌ನ ಅಗ್ಗವಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಟೀಸರ್ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡಿದೆ. ಕಂಪನಿಯು ಫೋನ್‌ನ ಬೆಲೆಯನ್ನು ರೂ. 9XXX ನಲ್ಲಿ ಪ್ರದರ್ಶಿಸಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫೋನ್ ಬಿಡುಗಡೆಯಾಗಲಿದೆ. iQOO Z9 Lite 5G ಅನ್ನು 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಅನಾವರಣವಾಗಲಿದೆ.
iQOO Z9 Lite 5Gನ ವಿಶೇಷತೆಗಳೇನು?
Z9 Lite 5G ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 50MP + 2MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಮತ್ತು LED ಫ್ಲ್ಯಾಷ್ ಅನ್ನು ಹೊಂದಿರುತ್ತದೆ. ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಸಾಧನದ ಬಲಭಾಗದಲ್ಲಿ ಇರುತ್ತದೆ. ಇದು iQoo Z9 5G ಮತ್ತು iQoo Z9x 5G ಸಾಲಿಗೆ ಸೇರಲಿದೆ. Vivo T3 Lite 5Gನ ಮರುಬ್ರಾಂಡಿಂಗ್ ಫೋನ್ ಎಂದು ಹೇಳಲಾಗಿದೆ.
iQOO Z9 Lite 5G ಫೋನ್ 6.56 ಇಂಚಿನ LCD ಪ್ಯಾನೆಲ್ ಅನ್ನು ಹೊಂದಿರುತ್ತದೆ. ಡಿಸ್ಲ್ಪೇ 720×1612 ರೆಸಲ್ಯೂಶನ್, 300 PPI ಪಿಕ್ಸೆಲ್ ಮತ್ತು ಇದು ಪಂಚ್-ಹೋಲ್ ಡಿಸ್ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಇದು ವಾಟರ್ ಡ್ರಾಪ್ ಶೈಲಿಯ ನಾಚ್ ಅನ್ನು ಹೊಂದಿರುತ್ತದೆ. ಡಿಸ್ಲ್ಪೇಯು 840 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ.
50MP ಕ್ಯಾಮೆರಾ, 5000mAh ಬ್ಯಾಟರಿ ಪಕ್ಕಾ!
ಇದು 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿರುತ್ತದೆ. ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಸೆಕೆಂಡರಿ ಲೆನ್ಸ್ ಅನ್ನು ಹೊಂದಿರುತ್ತದೆ. ಕಂಪನಿಯು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಒದಗಿಸಬಹುದು. ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ ಬರಲಿದೆ. ಕಂಪನಿಯು ಈ ವಿಶೇಷತೆಗಳನ್ನು ದೃಢಪಡಿಸಿದೆ.
ಇತರ ವೈಶಿಷ್ಟ್ಯಗಳು: ನೀರು ಮತ್ತು ಧೂಳಿನಿಂದ ರಕ್ಷಿಸಲು ಈ ಫೋನ್ ಅನ್ನು IP64 ರೇಟಿಂಗ್‌ನೊಂದಿಗೆ ತರಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಮೋಚಾ ಬ್ರೌನ್ ಮತ್ತು ಆಕ್ವಾ ಫ್ಲೋ ಕಲರ್‌ನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








