Home
ಮೊಬೈಲ್

22,320 ಸಾಕು! 6400mAh ಬ್ಯಾಟರಿ.. 512GB ಸ್ಟೋರೇಜ್‌.. ಹೊಸ iQOO ಫೋನ್ ಲಾಂಚ್

ಮತ್ತೊಂದು ಹೊಸ ಐಕ್ಯೂ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದನ್ನು ಐಕ್ಯೂ Z9 (iQOO Z9) ಸರಣಿಯಲ್ಲಿ ಪರಿಚಯಿಸಲಾಗಿದೆ. ಹೌದು, ಕಂಪನಿಯು ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ (iQOO Z9 Turbo Endurance Edition) ಫೋನನ್ನು ಅಧಿಕೃತವಾಗಿದೆ ಬಿಡುಗಡೆ ಮಾಡಿದೆ. ಇದನ್ನು 22 ಸಾವಿರ ರೂ. ಬಜೆಟ್‌ ಒಳಗಡೆ ರಿಲೀಸ್ ಮಾಡಿದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ವೈಶಿಷ್ಟ್ಯಗಳು ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ ಮೊಬೈಲ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಹಾಗೆಯೇ, 16GB RAM + 512GB ಸ್ಟೋರೇಜ್‌, 6400mAh ಬ್ಯಾಟರಿ ಮತ್ತು 80W ಸ್ಪೀಡ್‌ ಚಾರ್ಜಿಂಗ್ ಒಳಗೊಂಡಿದೆ. ಇದು ನಾಲ್ಕು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೊನಿನ ಬೆಲೆ ತಿಳಿಯಲು ಮುಂದೆ ಓದಿ.

22,320 ಸಾಕು! 6400mAh ಬ್ಯಾಟರಿ.. 512GB ಸ್ಟೋರೇಜ್‌.. ಹೊಸ iQOO ಫೋನ್ ಲಾಂಚ್

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹೊಸ ಐಕ್ಯೂ ಸ್ಮಾರ್ಟ್‌ಫೋನ್ 6.78 ಇಂಚಿನ 1.5K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 2800 × 1260 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಂದ 144Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಐಕ್ಯೂ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8S ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 735 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ Origin ಓಎಸ್‌ 4 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್‌ ಆಯ್ಕೆ

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ ಫೋನ್ 12GB RAM ಮತ್ತು 16GB RAM ಹೊಂದಿದೆ. ಈ ಮೊಬೈಲ್‌ನಲ್ಲಿ 256GB ಮತ್ತು 512GB ಸ್ಟೋರೇಜ್‌ ಲಭ್ಯವಿದೆ.

ಕ್ಯಾಮೆರಾ ಸೆಟಪ್

ನೂತನ ಐಕ್ಯೂ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

22,320 ಸಾಕು! 6400mAh ಬ್ಯಾಟರಿ.. 512GB ಸ್ಟೋರೇಜ್‌.. ಹೊಸ iQOO ಫೋನ್ ಲಾಂಚ್

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ ಮೊಬೈಲ್ 6400mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ 7.5W ರಿವರ್ಸ್ ಫ್ಲ್ಯಾಷ್ ಚಾರ್ಜಿಂಗ್ ಸಹ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP64 ರೇಟಿಂಗ್‌ ಪಡೆದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಇನ್‌ಫ್ರಾರೆಡ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿ ಬೆಲೆ

ಐಕ್ಯೂ Z9 ಟರ್ಬೊ ಎಂಡ್ಯೂರೆನ್ಸ್ ಆವೃತ್ತಿಯ ಮೊಬೈಲ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. 12GB RAM + 256GB ಸ್ಟೊರೇಜ್‌ ವೇರಿಯಂಟ್ ಬೆಲೆ 22,300 ರೂ. ಆಗಿದೆ. 12GB RAM + 512GB ಸ್ಟೋರೇಜ್ ಆಯ್ಕೆಯು 25,840 ರೂ.ಗೆ ಬಿಡುಗಡೆಯಾಗಿದೆ. 16GB RAM + 256GB ಸ್ಟೋರೇಜ್‌ ಆಯ್ಕೆಯ ಬೆಲೆ 24,660 ರೂ. ಇದೆ.

ಹಾಗೆಯೇ ಫೋನಿನ 16GB RAM + 512GB ಸ್ಟೋರೇಜ್‌ ರೂಪಾಂತರವನ್ನು 28,190 ರೂ.ಗೆ ಪರಿಚಯಿಸಲಾಗಿದೆ. ಪ್ರಸ್ತುತ, ಇದು ಚೀನಾದಲ್ಲಿ ಮಾತ್ರ ಮಾರಾಟವಾಗುತ್ತಿದೆ. ನೀವು, ಮಿಡ್‌ನೈಟ್ ಬ್ಲಾಕ್, ಸ್ಟಾರ್‌ಲೈಟ್ ವೈಟ್ ಮತ್ತು ವಾಯೇಜ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
iQOO Z9 Turbo Endurance Edition launched with Snapdragon 8s Gen 3 and 6400mAh battery: know price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+