Home
ಮೊಬೈಲ್

iQOO Z9 Turbo+ ಗ್ರ್ಯಾಂಡ್ ಎಂಟ್ರಿ: ದೊಡ್ಡ ಬ್ಯಾಟರಿ, ಸೋನಿ ಕ್ಯಾಮೆರಾ.. ಬೆಲೆ ಎಷ್ಟು?

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿ ಐಕ್ಯೂ (iQOO) ತನ್ನ 'Z' ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ಐಕ್ಯೂ Z9 ಟರ್ಬೊ ಪ್ಲಸ್ (iQOO Z9 Turbo+) ಎಂಬ ಹೆಸರಿನೊಂದಿಗೆ ಚೀನಾ ಮಾಡುಕಟ್ಟೆಗೆ ಲಗ್ಗೆ ಇಟ್ಟಿದೆ. ಮುಂಬರುವ ದಿನಗಳಲ್ಲಿ ಈ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಕಂಪನಿಯು ಈ ಮೊಬೈಲ್ ಅನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸಿದೆ. ಬನ್ನಿ, ಈ ನೂತನ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಐಕ್ಯೂ Z9 ಟರ್ಬೊ ಪ್ಲಸ್ (QOO Z9 Turbo+) ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 9300 ಪ್ಲಸ್ ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ, 6.78 ಇಂಚಿನ ಡಿಸ್ಪ್ಲೇ ಮತ್ತು 16GB RAM ಒಳಗೊಂಡಿದೆ. ಇದಲ್ಲದೆ, ಈ ಫೋನ್‌ 6400mAh ಸಾಮರ್ಥ್ಯದ ಬ್ಯಾಟರಿ, 16MP ಸೆಲ್ಫಿ ಕ್ಯಾಮೆರಾ, 50MP ಡ್ಯೂಯಲ್ ರಿಯರ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

iQOO Z9 Turbo+ ಗ್ರ್ಯಾಂಡ್ ಎಂಟ್ರಿ: ದೊಡ್ಡ ಬ್ಯಾಟರಿ, ಸೋನಿ ಕ್ಯಾಮೆರಾ.. ಬೆಲೆ?

ಐಕ್ಯೂ Z9 ಟರ್ಬೊ ಪ್ಲಸ್ ಫೋನಿನ ಬೆಲೆ

ಹೊಸ ಐಕ್ಯೂ ಫೋನ್ ನಾಲ್ಕು ಸ್ಟೋರೇಜ್‌ಗಳಲ್ಲಿ ಬಿಡುಗಡೆಯಾಗಿದೆ. ಇದು ಮೂನ್ ಶ್ಯಾಡೋ ಟೈಟಾನಿಯಂ, ಸ್ಟಾರ್ ಲೈಟ್ ವೈಟ್ ಮತ್ತು ಮಿಡ್ ನೈಟ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ. ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಲಾಂಚ್ ಆಗುತ್ತದೆ ಎಂಬುವುದನ್ನು ಕಂಪನಿ ಹೇಳಿಲ್ಲ.

12GB + 256GB ಸ್ಟೋರೇಜ್ ವೆರಿಯಂಟ್ ಬೆಲೆ 27,300 ರೂ. ಇದೆ. 16GB+256GB ಸ್ಟೋರೇಜ್ ವೆರಿಯಂಟ್ ಬೆಲೆ 29,700 ರೂ. ಆಗಿದೆ. 12GB+512GB ಸ್ಟೋರೇಜ್ ವೆರಿಯಂಟ್ 32,000 ರೂ.ಗೆ ಬಿಡುಗಡೆಯಾಗಿದೆ. ಮತ್ತು 16GB+512GB ಸ್ಟೋರೇಜ್‌ ರೂಪಾಂತರವು 34,400 ರೂ.ಗೆ ಮಾರಾಟವಾಗಲಿದೆ.

ಐಕ್ಯೂ Z9 ಟರ್ಬೊ ಪ್ಲಸ್ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಹೊಸ ಐಕ್ಯೂ Z9 ಟರ್ಬೊ ಪ್ಲಸ್ ಮೊಬೈಲ್ 6.78 ಇಂಚಿನ OLED Huaxing C8 ಡಿಸ್ಪ್ಲೇ ಹೊಂದಿದೆ. ಇದು 2800 x1200 ಪಿಕ್ಸೆಲ್ ರೆಸಲ್ಯೂಶನ್, 144Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಒಳಗೊಂಡಿದೆ.

ಪ್ರೊಸೆಸರ್: ಕಂಪನಿಯು ಐಕ್ಯೂ Z9 ಟರ್ಬೊ ಪ್ಲಸ್ ಅನ್ನು MediaTek Dimensity 9300 Plus ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರೊಂದಿಗೆ, ಅತ್ಯುತ್ತಮ ಕಾರ್ಯಕ್ಷಮತೆಗಾಗಿ Q1 ಸೂಪರ್ಕಂಪ್ಯೂಟಿಂಗ್ ಚಿಪ್ ಅನ್ನು ಒದಗಿಸಲಾಗಿದೆ. ಗೇಮಿಂಗ್ ಸೇರಿದಂತೆ ಯಾವುದೇ ಕಾರ್ಯಾಚರಣೆಯಲ್ಲಿ ನೀವು ಸುಗಮ ಅನುಭವವನ್ನು ಪಡೆಯಬಹುದು. ಈ ಫೋನ್ 6043mm² VC ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ.

ಸ್ಟೋರೇಜ್: ಐಕ್ಯೂ Z9 ಟರ್ಬೊ ಪ್ಲಸ್ ಮೊಬೈಲ್ ನಾಲ್ಕು ಶೇಖರಣಾ ಆಯ್ಕೆಗಳಲ್ಲಿ ಬರುತ್ತದೆ. ಇದು 16GB ವರೆಗೆ LPDDR5X RAM ಮತ್ತು 512GB UFS4.0 ಆಮತರಿಕ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಫೋನ್ ಒರಿಜಿನ್ ಓಎಸ್ 4 ಆಧಾರಿತ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಐಕ್ಯೂ Z9 ಟರ್ಬೊ ಪ್ಲಸ್ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ, 8 ಮೆಗಾಪಿಕ್ಸೆಲ್ ಗ್ಯಾಲಕ್ಸಿ ಕೋರ್ CC08A3 ಕ್ಯಾಮೆರಾ ಇದೆ. ಸೆಲ್ಫಿ ಪ್ರಿಯರಿಗೆ ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ: ಕಂಪನಿಯು ಐಕ್ಯೂ Z9 ಟರ್ಬೊ ಪ್ಲಸ್ ಫೋನನ್ನು 6400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದು ತ್ವರಿತ ಚಾರ್ಜಿಂಗ್‌ಗಾಗಿ, 80W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ.

ಇತರೆ ವೈಶಿಷ್ಟ್ಯಗಳು: ಈ ಮೊಬೈಲ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್ ಸ್ಪೀಕರ್, ಎಕ್ಸ್ ಆಕ್ಸಿಸ್ ಲೀನಿಯರ್ ಮೋಟಾರ್, ಐಆರ್ ಬ್ಲಾಸ್ಟರ್, 5G, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಡ್ಯುಯಲ್ ಫ್ರೀಕ್ವೆನ್ಸಿ ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
iQOO Z9 Turbo+ Launched with MediaTek Dimensity 9300+ SoC, 6,400 mAh Battery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+