Home
ಮೊಬೈಲ್

ಗೇಮಿಂಗ್ ಪ್ರಿಯರಿಗೆ ಸಿಹಿಸುದ್ದಿ: 6400mAh ಬ್ಯಾಟರಿ.. 6.78 ಇಂಚಿನ ಡಿಸ್ಪ್ಲೇ.. ಬಜೆಟ್ ಬೆಲೆ; ಯಾವ ಫೋನ್?

ಐಕ್ಯೂ ಗೇಮಿಂಗ್‌ ಪ್ರಿಯರಿಗಾಗಿ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದುವೇ, ಐಕ್ಯೂ Z9 ಟರ್ಬೊ ಲಾಂಗ್ ಬ್ಯಾಟರಿ ಲೈಫ್ ಆವೃತ್ತಿ (iQOO Z9 Turbo long battery life version) ಸ್ಮಾರ್ಟ್‌ಫೋನ್ ಆಗಿದೆ. ಹೌದು, ಐಕ್ಯೂ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಈ ಮೊಬೈಲ್‌ ಪರಿಚಯಿಸುತ್ತಿದೆ. ಸದ್ಯ ಈ ಐಕ್ಯೂ ಆವೃತ್ತಿಯ ಬ್ಯಾಟರಿ ಸಾಮರ್ಥ್ಯ, ಪ್ರೊಸೆಸರ್ ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಇದು ಫ್ಲೈಯಿಂಗ್ ಬ್ಲೂ ಎಂಬ ಬಣ್ಣದಲ್ಲಿ ಬರುತ್ತದೆ. ಇದು ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ? ಬಿಡುಗಡೆ ಯಾವಾಗ? ಬೆಲೆ ಎಷ್ಟು? ತಿಳಿಯೋಣ ಬನ್ನಿ.

ಐಕ್ಯೂನ Z9 ಟರ್ಬೊ ಆವೃತ್ತಿಯು ಗೇಮಿಂಗ್ ಪ್ರಿಯರಿಗಾಗಿ ಪ್ರೀಮಿಯಂ ಡಿಸ್ಪ್ಲೇ ಮತ್ತು ಬ್ಯಾಟರಿ ಬ್ಯಾಕಪ್‌ ಹೊಂದಿರುತ್ತದೆ. ಜೊತೆಗೆ ಶಕ್ತಿಶಾಲಿ ಪ್ರೊಸೆಸರ್ ಒಳಗೊಂಡಿರುತ್ತದೆ. ಕ್ಯಾಮೆರಾ ಸೆಟಪ್‌ನಲ್ಲಿ ಸಹ ಉತ್ತಮ ಗುಣಮಟ್ಟದ ಸೆನ್ಸರ್‌ಗಳು ಲಭ್ಯವಿರುತ್ತದೆ. ಈ ಮೊಬೈಲ್ 6400mAh ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿದೆ. ಈಗಾಗಲೇ, ಮೊಬೈಲ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಫೀಚರ್ಸ್‌ ತಿಳಿಯಲು ಮುಂದೆ ಓದಿ.

iQOO: 6400mAh ಬ್ಯಾಟರಿ.. 6.78 ಇಂಚಿನ ಡಿಸ್ಪ್ಲೇ.. ಬಜೆಟ್ ಬೆಲೆ; ಯಾವ ಫೋನ್?

ಐಕ್ಯೂ Z9 ಟರ್ಬೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z9 ಟರ್ಬೊ ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 1260 x 2800 ಪಿಕ್ಸೆಲ್‌ ರೆಸಲ್ಯೂಶನ್, 144Hz ರಿಫ್ರೆಶ್ ದರ, 3840Hz PWM ಡಿಮ್ಮಿಂಗ್ ಮತ್ತು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಐಕ್ಯೂ Z9 ಟರ್ಬೊ ಮೊಬೈಲ್ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 735 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 15 ಆಧಾರಿತ OriginOS 5 ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಐಕ್ಯೂ Z9 ಟರ್ಬೊ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 4K ವಿಡಿಯೋ ರೆಕಾರ್ಡಿಂಗ್ ಬೆಂಬಲ ಸಹ ಹೊಂದಿದೆ.

iQOO: 6400mAh ಬ್ಯಾಟರಿ.. 6.78 ಇಂಚಿನ ಡಿಸ್ಪ್ಲೇ.. ಬಜೆಟ್ ಬೆಲೆ; ಯಾವ ಫೋನ್?

ಬ್ಯಾಟರಿ ಮತ್ತು ಚಾರ್ಜಿಂಗ್

ಐಕ್ಯೂ Z9 ಟರ್ಬೊ ಮೊಬೈಲ್ 6400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ Z9 ಟರ್ಬೊ ಫೋನ್ ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿರಲಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಗೇಮಿಂಗ್ ಆವೃತ್ತಿಯಾಗಿರುವುದರಿಂದ, ಸ್ಟಿರಿಯೊ ಸ್ಪೀಕರ್‌ಗಳು ಲಭ್ಯವಿದೆ. ಇದು ಟೈಪ್ ಸಿ ಆಡಿಯೋ ಮತ್ತು 5G SA/NSA ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಐಕ್ಯೂ Z9 ಟರ್ಬೊ ಬೆಲೆ ಎಷ್ಟು?

ಐಕ್ಯೂ Z9 ಟರ್ಬೊ ಮೊಬೈಲ್ 23,000 ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದೆ. ಹಾಗಾಗಿ, ಮುಂಬರುವ ಐಕ್ಯೂ Z9 ಟರ್ಬೊ ಲಾಂಗ್ ಬ್ಯಾಟರಿ ಲೈಫ್ ಆವೃತ್ತಿಯನ್ನು 25,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ಐಕ್ಯೂ Z9 ಟರ್ಬೊ ಲಾಂಗ್ ಬ್ಯಾಟರಿ ಲೈಫ್ ಆವೃತ್ತಿಯು ಜನವರಿಯಲ್ಲಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಳಿಕ ಭಾರತ ಸೇರಿದಂತೆ ಇತರೆ ದೇಶಗಳಿಗೆ ಬರಲಿದೆ.

Best Mobiles in India

English summary
iQOO Z9 Turbo long battery life version with 6400mAh battery to launched in january 2025: check price, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+