iQOO Z9s Pro ಮಾರಾಟಕ್ಕೆ ಸಿದ್ಧ; ಬಜೆಟ್ ಬೆಲೆ.. ಜೊತೆಗೆ ಭಾರೀ ಡಿಸ್ಕೌಂಟ್!
ಐಕ್ಯೂ ಕಂಪನಿಯು ಇತ್ತೀಚೆಗೆ ಹೊಸ ಐಕ್ಯೂ Z9s ಪ್ರೊ (iQOO Z9 pro) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಅನ್ನು ಐಕ್ಯೂ Z9s ಸರಣಿಯ (iQOO Z9s series) ಅಡಿಯಲ್ಲಿ ಪರಿಚಯಿಸಲಾಗಿದೆ. ಅಂದಹಾಗೆ, ಐಕ್ಯೂ Z9s ಪ್ರೊ ಸ್ಮಾರ್ಟ್‌ಫೋನ್ ಇಂದು (ಆಗಸ್ಟ್ 23) ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಕಂಪನಿಯು ಈ ಪೋನನ್ನು 24,999 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಐಕ್ಯೂ Z9s ಪ್ರೊ ಫೋನನ್ನು ಲಕ್ಸ್ ಮಾರ್ಬಲ್ ಮತ್ತು ಫ್ಲಾಂಬಾಯಿಂಟ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಮೊಬೈಲ್ Snapdragon 7 Gen 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ. 4500nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.77 ಇಂಚಿನ ಡಿಸ್ಪ್ಲೇ ಮತ್ತು 256GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಐಕ್ಯೂ Z9s ಪ್ರೊ ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಈ ಹೊಸ ಐಕ್ಯೂ ಫೋನನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಾಂಚ್ ಮಾಡಿದೆ. ಈ ಫೋನಿನ ಮೂಲ ರೂಪಾಂತರ 8GB RAM ಮತ್ತು 128GB ಬೆಲೆ 24,999 ರೂ.ಗೆ ಮಾರಾಟವಾಗಲಿದೆ. 8GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ 26,999 ರೂ. ಆಗಿದೆ. ಇನ್ನೂ, 12GB RAM ಮತ್ತು 256GB ಟಾಪ್ ರೂಪಾಂತರವು 28,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಮೊದಲ ದಿನವೇ ಭರ್ಜರಿ ಡಿಸ್ಕೌಂಟ್ ಲಭ್ಯ
ಐಕ್ಯೂ Z9s ಪ್ರೊ ಫೋನ್ ಇಂದು (ಆಗಸ್ಟ್ 23) ಮಧ್ಯಾಹ್ನ 12 ಗಂಟೆಯಿಂದ ಮಾರಾಟವಾಗಲಿದೆ. ನೀವು ಇದನ್ನು ಅಮೇಜಾನ್ ಮತ್ತು ಐಕ್ಯೂ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದು. ಕಂಪನಿಯು ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಪಾವತಿ ಮೇಲೆ 3,000 ರೂ.ಗಳ ರಿಯಾಯಿತಿಯನ್ನು ನೀಡುತ್ತದೆ. ಜೊತೆಗೆ, 3,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಹ ಪಡೆಯಬಹುದು.
ಐಕ್ಯೂ Z9s ಪ್ರೊ ಫೋನಿನ ಟಾಪ್ 5 ವೈಶಿಷ್ಟ್ಯಗಳು
ಕಂಪನಿಯು ಹೊಸ ಐಕ್ಯೂ Z9s ಪ್ರೊ ಸ್ಮಾರ್ಟ್‌ಫೋನಿನಲ್ಲಿ 6.77 ಇಂಚಿನ ಬಾಗಿದ ಡಿಸ್ಲ್ಪೇಯನ್ನು ಒದಗಿಸಿದೆ. ಈ ಡಿಸ್ಲ್ಪೇಯು 2392 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120 Hz ರಿಫ್ರೆಶ್ ದರ, 4500 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಪಡೆದಿದೆ. ಈ ಐಕ್ಯೂ Z9s ಪ್ರೊ ಸ್ಮಾರ್ಟ್‌ಫೋನ್ Qualcomm Snapdragon 7 Gen 3 ಪ್ರೊಸೆಸರ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ.

ಕಂಪನಿಯು 8GB RAM ಮತ್ತು 128GB, 8GB ಮತ್ತು 256GB ಹಾಗೂ 12GB ಮತ್ತು 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಈ ಫೋನನ್ನು ಪರಿಚಯಿಸಿದೆ. ಈ ಐಕ್ಯೂ Z9s ಪ್ರೊ ಫೋನ್ ಡುಯಲ್ ಕ್ಯಾಮೆರಾ ರಚೆನೆಯನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸಲ್ ಸೋನಿ IMX882 OIS ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ನೀಡಲಾಗಿದೆ. ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಾಗಿ 16 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
4 ವರ್ಷಗಳ ಕಾಲ ಬ್ಯಾಟರಿ ಬಾಳಿಕೆ
ಐಕ್ಯೂ Z9s ಪ್ರೊ ಮೊಬೈಲ್ 80 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 4 ವರ್ಷಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ಭರವಸೆ ನೀಡಿದೆ. 4 ವರ್ಷಗಳ ಕಾಲ ಪ್ರತಿದಿನ ಚಾರ್ಜ್ ಮಾಡಿದರೆ, ನಂತರ 80 ಪ್ರತಿಶತ ಬ್ಯಾಟರಿ ಅನಿರ್ದಿಷ್ಟವಾಗಿ ಲಭ್ಯವಿರುತ್ತದೆ. ಈ ಐಕ್ಯೂ Z9s ಪ್ರೊ ಫೋನ್ IP64 ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಅನ್ನು ಹೊಂದಿದೆ.
ಇನ್ನೂ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ, ವಿಸಿ ಲಿಕ್ವಿಡ್ ಕೂಲಿಂಗ್ ಸಿಸ್ಟಮ್, ಅಲ್ಟ್ರಾ ಗೇಮಿಂಗ್ ಮೋಡ್, 4D ಗೇಮ್ ವೈಬ್ರೇಶನ್, ಎಐ ಫೋಟೋ ವರ್ಧನೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ.


Click it and Unblock the Notifications








