Home
ಮೊಬೈಲ್

iQOO: ಹೊಸ ಫೋನ್ ಲಾಂಚ್‌ಗೆ ಡೇಟ್ ಫಿಕ್ಸ್: ಒಂದಲ್ಲ, ಎರಡು ಫೋನ್.. ಸ್ವಲ್ಪ ಕಾಯಿರಿ!

ಕಾಯುವಿಕೆ ಮುಗಿದಿದೆ! ಮೊಬೈಲ್‌ ಪ್ರಿಯರಿಗೆ ಐಕ್ಯೂ ಡಬಲ್ ಸಿಹಿ ಸುದ್ದಿ ನೀಡಿದೆ. ಒಂದೇ ದಿನ ಎರಡು ಫೋನ್ ಲಾಂಚ್. ಹೌದು, iQOO Z9 ಸರಣಿಯ ಅದ್ಭುತ ಯಶಸ್ಸಿನ ನಂತರ, ಇದೀಗ ಕಂಪನಿಯು ಭಾರತದಲ್ಲಿ ಹೊಸ iQOO Z9s ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆಗಸ್ಟ್‌ನಲ್ಲಿ iQOO Z9S ಸರಣಿಯು ಲಾಂಚ್ ಆಗಲಿದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಈ ಸರಣಿಯ ಅಡಿಯಲ್ಲಿ ಎರಡು 5G ಮೊಬೈಲ್‌ಗಳನ್ನು ಲಾಂಚ್ ಮಾಡಲಾಗುತ್ತದೆ. ಇದು ಚೀನಾದಲ್ಲಿ ಬಿಡುಗಡೆಯಾದ iQOO Z9 Turbo ಪೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ. ಈ ಹೊಸ iQOO ಸರಣಿ ಮತ್ತು ಫೋನ್‌ಗಳ ವಿವರಗಳನ್ನು ತಿಳಿಯೋಣ ಬನ್ನಿ.

ದೇಶದ ಪ್ರಮುಖ ಸ್ಮಾರ್ಟ್​ಪೋನ್ ಬ್ರಾಂಡ್ ಐಕ್ಯೂ (iQOO) ಇತ್ತೀಚೆಗೆ ಭಾರತದಲ್ಲಿ iQOO Z9 Lite ಅನ್ನು ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಇದೀಗ iQOO Z9s ಎಂಬ ಮತ್ತೊಂದು ಸರಣಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಕಂಪನಿಯ ಸಿಇಒ ಪೋಸ್ಟ್ ಪ್ರಕಾರ, iQOO Z9s ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರ ವಿಶೇಷವೆಂದರೆ, ಉತ್ತಮ ಫೋಟೋಗ್ರಫಿಗಾಗಿ ಈ ಫೋನ್‌ಗಳ ಕ್ಯಾಮೆರಾ ಆಸ್ಫೆರಿಕಲ್ ಲೆನ್ಸ್ ಅನ್ನು ಹೊಂದಿರುತ್ತದೆ.

ಹೊಸ iQOO ಫೋನ್ ಲಾಂಚ್‌ಗೆ ಡೇಟ್ ಫಿಕ್ಸ್: ಒಂದಲ್ಲ, ಎರಡು ಫೋನ್.. ಸ್ವಲ್ಪ ಕಾಯಿರಿ!

iQOO Z9s ಸರಣಿ ಭಾರತದಲ್ಲಿ ಬಿಡುಗಡೆ: ಯಾವಾಗ?

ಐಕ್ಯೂ ಕಂಪನಿಯು ಹೊಸ Z9S ಸರಣಿಯನ್ನು ಭಾರತದಲ್ಲಿ ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಿದೆ. ಬ್ರ್ಯಾಂಡ್ ಇನ್ನೂ ಬಿಡುಗಡೆ ದಿನಾಂಕ ಅಥವಾ ಸರಣಿಯಲ್ಲಿ ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಸರಣಿಯ ಇತರ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು. ಪ್ರಸ್ತುತ, iQOO Z9s ಸ್ಮಾರ್ಟ್‌ಫೋನ್ ಕಡಿಮೆ ಬಜೆಟ್‌ನಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಐಕ್ಯೂನ ಸಿಇಒ ಪೋಸ್ಟ್‌ನಲ್ಲಿ ಏನಿದೆ?

ಐಕ್ಯೂನ ಸಿಇಒ ನಿಪುನ್ ಮರಿಯಾ ಇತ್ತೀಚೆಗೆ iQOO Z9s ಸರಣಿಯ ಅಧಿಕೃತ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಎಕ್ಸ್‌ ಖಾತೆಯಲ್ಲಿ ಅವರು, 'ಕಾಯುವಿಕೆ ಮುಗಿದಿದೆ! ಸಂಪೂರ್ಣವಾಗಿ ಲೋಡ್ ಆಗಿರುವ 'Z' ವೈಬ್‌ಗಾಗಿ ನಿಮ್ಮನ್ನು ಬ್ರೇಸ್ ಮಾಡಿ.' ಮುಂಬರುವ ಸ್ಮಾರ್ಟ್‌ಫೋನ್ 'ಮೆಗಾ ಟೇಸರ್‌ಗಳಿಗಾಗಿ ಸಂಪೂರ್ಣವಾಗಿ ಲೋಡ್ ಆಗುತ್ತದೆ' ಎಂದು ಪೋಸ್ಟ್‌ ಮಾಡಿದ್ದಾರೆ. ಇದು ಸುಧೀರ್ಘ ಕಾರ್ಯಕ್ಷಮತೆಗಾಗಿ ಶಕ್ತಿಯುತ ಪ್ರೊಸೆಸರ್ ಅನ್ನು ಹೊಂದಿರಲಿದೆ.

ಈ ಫೋನಿನಲ್ಲಿದೆ ಡ್ಯುಯಲ್ ಕ್ಯಾಮೆರಾ ಸೆಟಪ್

ಪೋಸ್ಟರ್ ಚಿತ್ರದ ಪ್ರಕಾರ, ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಪೋಸ್ಟರ್ ಚಿತ್ರವು ಮೊಬೈಲ್ ಹಿಂದಿನ ಫಲಕವನ್ನು ಮಾತ್ರ ಬಹಿರಂಗಪಡಿಸುತ್ತದೆ. ಕ್ಯಾಮೆರಾಗಳ ಬಲಭಾಗದಲ್ಲಿ ರಿಂಗ್ ಲೈಟ್ ಅನ್ನು ಇರಿಸಲಾಗಿದೆ. ಪೋಸ್ಟರ್‌ನಲ್ಲಿ ಝೂಮ್ ಇನ್ ಮಾಡಿದರೆ, ಕ್ಯಾಮೆರಾ ಆಸ್ಫೆರಿಕಲ್ ಲೆನ್ಸ್ ಅನ್ನು ಹೊಂದಿದೆ ಎಂದು ತಿಳಿಯುತ್ತದೆ. ಫಲಕವು ವರ್ಣರಂಜಿತ ಹಿಂಭಾಗವನ್ನು ಹೊಂದಿದ್ದು, ಫೋನಿನ ಬಲಭಾಗದ ಮೂಲೆಯಲ್ಲಿ ಕ್ಯಾಮೆರಾ ಲೈಟ್‌ ಅಳವಡಿಸಲಾಗಿದೆ.

ಇದು iQOO Z9 Turbo ಫೋನಿನ ಮರುಬ್ರಾಂಡೆಡ್!

ಆಸ್ಫೆರಿಕಲ್ ಲೆನ್ಸ್ ವೈಶಿಷ್ಟ್ಯವು ಚಿತ್ರದ ಗುಣಮಟ್ಟವನ್ನು ಸುಧಾರಿಸುತ್ತದೆ. ಅಗತ್ಯವಿರುವ ಆಪ್ಟಿಕಲ್ ಅಂಶಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಕ್ಯಾಮೆರಾ ಗುಣಮಟ್ಟವನ್ನು ಉತ್ತಮಗೊಳಿಸಬಹುದು. ಈ ವಿವರಗಳನ್ನು ಹೊರತುಪಡಿಸಿ, ಪೋಸ್ಟರ್ ಚಿತ್ರ ಅಥವಾ ಪೋಸ್ಟ್‌ನಲ್ಲಿ ಬೇರೆ ಯಾವುದೇ ಫೀಚರ್ಸ್‌ಗಳ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಆದರೆ, ಮುಂಬರುವ iQOO Z9s ಸರಣಿಯು iQOO Z9 Turbo ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ರೀತಿಯ ಕೆಲವು ವಿಶೇಷತೆಗಳನ್ನು ನಿರೀಕ್ಷಿಸಬಹುದು.

iQOO Z9 ಟರ್ಬೊ ಫೀಚರ್ಸ್

iQOO Z9 Turbo ಆಕ್ಟಾ-ಕೋರ್ Qualcomm Snapdragon 8s Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಅದ್ಭುತ ಗೇಮಿಂಗ್ ಅನುಭವವನ್ನು ನೀಡುತ್ತದೆ. 6000 mAh ಬ್ಯಾಟರಿಯನ್ನು ಹೊಂದಿದೆ. 144Hz ವರೆಗಿನ ರಿಫ್ರೆಶ್ ದರದೊಂದಿಗೆ 1.5K OLED ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿದೆ. ವಿನ್ಯಾಸದ ವಿಷಯದಲ್ಲಿ, ವೆಬ್‌ಸೈಟ್‌ನಲ್ಲಿನ ಅಧಿಕೃತ ಫೋಟೋ ಮುಂಬರುವ iQOO Z9 ಟರ್ಬೊ ಸ್ಮಾರ್ಟ್‌ಫೋನ್‌ನ ಸ್ನೀಕ್ ಪೀಕ್ ಅನ್ನು ಒದಗಿಸುತ್ತದೆ.

iQOO Z9 Lite 5G: ಫೀಚರ್ಸ್ ಏನು?

iQOO Z9 Lite 5G ಫೊನಿನ ಆರಂಭಿಕ ಬೆಲೆ 10,499 ರೂಪಾಯಿ. ಇದು 6.56 ಇಂಚಿನ 90Hz ಡಿಸ್ಪ್ಲೇ, ಮೀಡಿಯಾಟೆಕ್ ಆಯಾಮ 6300 ಪ್ರೊಸೆಸರ್, 6GB RAM ಹೊಂದಿದೆ. ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಮುಖ್ಯ ಕ್ಯಾಮೆರಾ ಮತ್ತು 2MP ಬೊಕೆ ಲೆನ್ಸ್, 8MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 15W ವೇಗ ಜಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದೆ.

Best Mobiles in India

English summary
iQOO will launch Z9s series in August in India. It is speculated to be a rebranded version of iQOO Z9 Turbo, which was launched in China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+