iQoo Z9s ಬಿಡುಗಡೆಗೆ ಮುಹೂರ್ತ ಫಿಕ್ಸ್: ಒಂದೇ ದಿನ 2 ಫೋನ್ ಲಾಂಚ್.. ಯಾವಾಗ?
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಐಕ್ಯೂ (iQoo) ಇತ್ತೀಚೆಗೆ ಭಾರತದಲ್ಲಿ iQOO Z9 Lite ಫೋನನ್ನು ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿತ್ತು. ಇದೀಗ, ಈ ತಿಂಗಳು ಭಾರತದಲ್ಲಿ 'Z9s' ಸರಣಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಕಳೆದ ಕೆಲವು ದಿನಗಳಿಂದ, ಕಂಪನಿಯು ಇದರ ಟೀಸರ್‌ಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದೆ. ಈ ಸರಣಿಯು ಕಂಪನಿಯ iQoo Z9s ಮತ್ತು iQoo Z9 Pro ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ. ಬನ್ನಿ, ಈ ಹೊಸ iQoo ಸರಣಿ ಮತ್ತು ಫೋನ್‌ಗಳ ವಿವರಗಳನ್ನು ತಿಳಿಯೋಣ.
ಇತ್ತೀಚೆಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಬೆಂಚ್‌ಮಾರ್ಕಿಂಗ್ ಸೈಟ್ ಗೀಕ್‌ಬೆಂಚ್‌ನಲ್ಲಿಯೂ ಕಂಡುಬಂದಿವೆ. ಇದು ಚೀನಾದಲ್ಲಿ ಬಿಡುಗಡೆಯಾದ iQOO Z9 Turbo ಪೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಲಿದೆ. ಕಂಪನಿಯು ಈ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಬಹಿರಂಗಪಡಿಸಿದೆ. iQoo ತನ್ನ Z9s ಸರಣಿಯನ್ನು ಭಾರತದಲ್ಲಿ ಯಾವಾಗ ಮತ್ತು ಯಾವ ವೈಶಿಷ್ಟ್ಯಗಳೊಂದಿಗೆ ಪ್ರಾರಂಭಿಸಲಿದೆ ಎಂಬುದನ್ನು ತಿಳಿಯೋಣ ಬನ್ನಿ.

iQoo Z9s ಮತ್ತು iQoo Z9 Pro ಭಾರತದಲ್ಲಿ ಯಾವಾಗ ಬಿಡುಗಡೆ?
iQoo ಸಿಇಒ ನಿಪುನ್ ಮರಿಯಾ ಅವರು iQoo Z9s ಮತ್ತು iQoo Z9 Pro ಬಿಡುಗಡೆ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆಗಸ್ಟ್ 21 ರಂದು iQoo Z9s ಸರಣಿಯ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಫೋನ್ ಗೋಲ್ಡನ್ ಬಣ್ಣದಲ್ಲಿ ಕಂಡುಬರುತ್ತದೆ. ಇದರೊಂದಿಗೆ, 'ಸೆಗ್ಮೆಂಟ್‌ನಲ್ಲಿ ಅತ್ಯಂತ ವೇಗವಾದ ಬಾಗಿದ ಡಿಸ್ಲ್ಪೇಯನ್ನು ಹೊಂದಿರುವ ಫೋನ್' ಎಂಬ ಅಡಿಬರಹವನ್ನು ಪೋಸ್ಟ್‌ನಲ್ಲಿ ನೀಡಲಾಗಿದೆ.
ಈ ಸರಣಿಯ ರಿಫ್ರೆಶ್ ರೇಟ್ ಕೂಡ ಈ ಟೀಸರ್ ಮೂಲಕ ಬಹಿರಂಗವಾಗಿದೆ. ತಿಂಗಳ ಆರಂಭದಲ್ಲಿ, ನಿಪುನ್ ಮರಿಯಾ ಈ ಸರಣಿಯ ಸ್ಮಾರ್ಟ್‌ಫೋನ್‌ನ ವಿನ್ಯಾಸದ ಟೀಸರ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ಈ ಫೋನ್ ಬಿಳಿ ಬಣ್ಣದಲ್ಲಿ ಕಂಡುಬಂದಿದೆ. ಈ ಸರಣಿಯು iQoo Z9 ಸರಣಿಯ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ.
iQoo Z9s ಮತ್ತು iQoo Z9 Pro ವೈಶಿಷ್ಟ್ಯಗಳು
ಬಿಡುಗಡೆಯಾದ ಟೀಸರ್‌ನಲ್ಲಿ, ಈ ಫೋನ್‌ನ ಮೇಲಿನ ಎಡ ಮೂಲೆಯಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಕಂಡುಬರುತ್ತದೆ. ಅದರ ಬಲ ಮೂಲೆಯಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಅನ್ನು ಒದಗಿಸಲಾಗಿದೆ. iQoo Z9 Pro ಅನ್ನು BIS ವೆಬ್‌ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ i2305 ನೊಂದಿಗೆ ಪಟ್ಟಿ ಮಾಡಲಾಗಿದೆ.
ಟೀಸರ್‌ನಿಂದ ಈ ಫೋನ್‌ನ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಕ್ಯಾಮೆರಾ FV-5 ಡೇಟಾಬೇಸ್‌ನಲ್ಲಿನ ಮತ್ತೊಂದು ಪಟ್ಟಿಯು ಈ ಫೋನ್ ಪ್ರಾಥಮಿಕ ಕ್ಯಾಮೆರಾಗೆ OIS ಬೆಂಬಲವನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಅಲ್ಲದೆ, ಮೀಡಿಯಾ ಟೆಕ್ ಡೈಮೆನ್ಶನ್ 9300+ ಅನ್ನು iQoo Z9 Pro ಪ್ರೊಸೆಸರ್ ಆಗಿ ಹೊಂದಿರಲಿದೆ.

iQoo Z9s ಸರಣಿಯ ನಿರೀಕ್ಷಿತ ಫೀಚರ್ಸ್
ಡಿಸ್‌ಪ್ಲೇ: iQOO Z9S Pro ಸ್ಮಾರ್ಟ್‌ಫೋನ್ 6.78 ಇಂಚಿನ FullHD+ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರವನ್ನು ಒಳಗೊಂಡಿರಲಿದೆ.
ಪ್ರೊಸೆಸರ್: ಈ ಫೋನನ್ನು ಮೀಡಿಯಾ ಟೆಕ್ ಡೈಮೆನ್ಶನ್ 9300+ ಚಿಪ್‌ಸೆಟ್‌ನಲ್ಲಿ ಪ್ರಾರಂಭಿಸಬಹುದು. ಜೊತೆಗೆ, Android 14 ಆಧಾರಿತ Funtouch OS 14 ಲಭ್ಯವಿರಬಹುದು.
ಸ್ಟೋರೇಜ್: ಈ 'ಪ್ರೊ' ಮಾದರಿಯು ದೊಡ್ಡ RAM ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಪ್ರಾರಂಭಿಸಬಹುದು.
ಕ್ಯಾಮೆರಾ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರಲಿದೆ. ಫೋನ್‌ನ ಹಿಂಭಾಗದ ಫಲಕದಲ್ಲಿ 50 ಮೆಗಾಪಿಕ್ಸೆಲ್ OIS ಸಂವೇದಕವನ್ನು ಒದಗಿಸಬಹುದು. ಇದರೊಂದಿಗೆ ವೈಡ್ ಆಂಗಲ್ ಲೆನ್ಸ್ ಮತ್ತು ಮ್ಯಾಕ್ರೋ ಸಂವೇದಕವನ್ನು ಪಡೆಯುವ ನಿರೀಕ್ಷೆಯಿದೆ.
ಬ್ಯಾಟರಿ: iQOO Z9s Pro 5G ಫೋನ್‌ನಲ್ಲಿ ದೊಡ್ಡ 5,500mAh ಬ್ಯಾಟರಿಯನ್ನು ಒದಗಿಸಬಹುದು. ಕಂಪನಿಯು ತನ್ನ Z9s ಮತ್ತು Z9 Pro ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಹೊಸ ಫೀಚರ್ಸ್‌ಗಳನ್ನು ತರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








