Home
ಮೊಬೈಲ್

10749 ಸಾಕು! 50MP ಕ್ಯಾಮೆರಾ.. 6000mAh ಬ್ಯಾಟರಿ.. ಯಾವ ಫೋನ್?

ಐಕ್ಯೂ ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ನೂತನ ಐಕ್ಯೂ 13 (iQOO 13) ಫೋನನ್ನು ಡಿಸೆಂಬರ್ 3 ರಂದು ಬಿಡುಗಡೆ ಮಾಡಲಿದೆ. ಇದಕ್ಕೂ ಮೊದಲೇ, ಐಕ್ಯೂ Z9x 5G (iQOO Z9x 5G) ಮೊಬೈಲ್‌ನ ಬೆಲೆಯನ್ನು ಇಳಿಕೆ ಮಾಡಿದೆ. ಕಂಪನಿಯು ಕೂಪನ್ ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ ಸಹ ನೀಡುತ್ತಿದೆ. ನೀವು ಡಿಸ್ಕೌಂಟ್‌ನೊಂದಿಗೆ ಕೇವಲ 10,749 ರೂ.ಗೆ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ಫೀಚರ್ಸ್‌ ತಿಳಿಯೋಣ.

ಕಂಪನಿಯು ಐಕ್ಯೂ Z9x 5G ಫೋನನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಕಡಿಮೆ ಬಜೆಟ್ ವಿಭಾಗದಲ್ಲಿ ಪರಿಚಯಿಸಲಾಗಿತ್ತು. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8GB RAM ಮತ್ತು 128GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ, ಕಂಪನಿಯು 2,250 ರೂ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

10749 ಸಾಕು! 50MP ಕ್ಯಾಮೆರಾ.. 6000mAh ಬ್ಯಾಟರಿ.. ಯಾವ ಫೋನ್?

ಐಕ್ಯೂ Z9x 5G ಫೋನಿನ ಬೆಲೆ ಮತ್ತು ಆಫರ್‌ಗಳು

4GB RAM + 128GB ಸ್ಟೋರೇಜ್ ಬೆಲೆ = 12,999 ರೂ.
ಆಫರ್‌ ಬೆಲೆ = 10,749 ರೂ.

6GB RAM + 128GB ಸ್ಟೋರೇಜ್ ಬೆಲೆ = 14,499 ರೂ.
ಆಫರ್‌ ಬೆಲೆ = 12,249 ರೂ.

8GB RAM + 128GB ಸ್ಟೋರೇಜ್ ಬೆಲೆ = 15,999 ರೂ.
ಆಫರ್‌ ಬೆಲೆ = 13,749 ರೂ.

ಕಂಪನಿಯು ಐಕ್ಯೂ Z9x 5G ಫೋನನ್ನು ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದು 4GB RAM, 6GB RAM ಮತ್ತು 8GB RAM ಒಳಗೊಂಡಿದೆ. ಈ ಫೋನಿನ ಆರಂಭಿಕ ಬಿಡುಗಡೆ ಬೆಲೆ 12,999 ರೂ. ಆಗಿದೆ. ಪ್ರಸ್ತುತ, ಈ ಫೋನಿನ ಎಲ್ಲಾ ರೂಪಾಂತರಗಳನ್ನು ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನೀವು, ಕೂಪನ್ ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ನೊಂದಿಗೆ ಈ ಮೊಬೈಲ್ ಅನ್ನು 2,250 ರೂ.ಗಿಂತ ಕಡಿಮೆ ಬೆಲೆಗೆ ಕೊಳ್ಳಬಹುದು.

ಅಮೆಜಾನ್‌ನಲ್ಲಿ ಐಕ್ಯೂ Z9x 5G ಮೊಬೈಲ್‌ನ ಎಲ್ಲಾ ರೂಪಾಂತರಗಳನ್ನು ಬಿಡುಗಡೆ ಬೆಲೆಗಿಂತ 500 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ, ಹೆಚ್ಚುವರಿಯಾಗಿ 500 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಫೋನಿನಲ್ಲಿ 1,250 ರೂ.ಗಳ ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ ಸಹ ಲಭ್ಯವಿದೆ. ನೀವು ಒಟ್ಟಾರೆ, ಈ ಮೊಬೈಲ್ ಖರೀದಿ ಮೇಲೆ 2,250 ಡಿಸ್ಕೌಂಟ್ ಪಡೆಯಬಹುದು.

ಐಕ್ಯೂ Z9x 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ Z9x 5G ಮೊಬೈಲ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2,408 × 1,080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್‌ ಬ್ರೈಟ್‌ನೆಸ್‌ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಐಕ್ಯೂ Z9x 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Funtouch ಓಎಸ್‌ 14 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಐಕ್ಯೂ Z9x 5G ಸ್ಮಾರ್ಟ್‌ಫೋನ್ 4GB, 6GB ಮತ್ತು 8GB RAM ಹೊಂದಿದೆ. ಇದು 8GB ಎಕ್ಸ್‌ಟೆಂಡೆಡ್ RAM ತಂತ್ರಜ್ಞಾನ ಹೊಂದಿದೆ. ಫೋನ್ ಭೌತಿಕ RAMಗೆ ವರ್ಚುವಲ್ RAM ಸೇರಿಸುವ ಮೂಲಕ 16GB RAM ಒದಗಿಸುತ್ತದೆ. ಜೊತೆಗೆ, 128GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ನೀವು 1TB ವರೆಗೆ ವಿಸ್ತರಿಸಬಹುದು.

10749 ಸಾಕು! 50MP ಕ್ಯಾಮೆರಾ.. 6000mAh ಬ್ಯಾಟರಿ.. ಯಾವ ಫೋನ್?

ಕ್ಯಾಮೆರಾ ಸೆಟಪ್

ಐಕ್ಯೂ Z9x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ, ಇದು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯಿ ಐಕ್ಯೂ Z9x 5G ಅನ್ನು 6000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ Z9x 5G ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ. ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಹೊಂದಿದೆ.

Best Mobiles in India

English summary
iQOO Z9x 5G received huge price cut on amazon: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+