Just In
- 8 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 9 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 10 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 11 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಒನ್ಪ್ಲಸ್ 6T' ಬಿಟ್ಟು 'ಗ್ಯಾಲಾಕ್ಸಿ ಎ9' ಖರೀದಿಗೆ ಮುಗಿಬಿದ್ದ ಭಾರತೀಯರು!!
ಭಾರತದಲ್ಲಿ ಚೀನಾದ ಒನ್ಪ್ಲಸ್ ಮೊಬೈಲ್ ಕಂಪೆನಿಗೆ ಮೊಟ್ಟ ಮೊದಲು ಭಯ ಹುಟ್ಟಿಸಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎ9 (2018) ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ವಿಶ್ವದ ಮೊಟ್ಟ ಮೊದಲ 'ಕ್ವಾಡ್ ಕೋರ್' ಕ್ಯಾಮೆರಾ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಯ ಗ್ಯಾಲಾಕ್ಸಿ ಎ9 (2018) ಸ್ಮಾರ್ಟ್ಫೋನ್ ಈಗ ಭಾರತೀಯರ ಫೇವರೇಟ್ ಸ್ಮಾರ್ಟ್ಫೋನ್ ಆಗಿ ಬದಲಾಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.
ಹೌದು, ನಿರೀಕ್ಷೆಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎ9 (2018) ಸ್ಮಾರ್ಟ್ಫೋನ್ ಬೆಲೆ ದೇಶದಲ್ಲಿ ಕೇವಲ 36,990 ರೂ.ಗಳಿಂದ ಆರಂಭವಾಗಿದೆ. ವಿದೇಶಗಳಲ್ಲಿ 45,000 ರೂ. ಆಸುಪಾಸಿನಲ್ಲಿ ಬಿಡುಗಡೆಯಾಗಿ ಯಶಸ್ವಿ ಮಾರಾಟ ಕಂಡರೂ ಸಹ ಗ್ಯಾಲಾಕ್ಸಿ ಎ9 (2018) ಬೆಲೆ ಭಾರತದಲ್ಲಿ ಕಡಿಮೆಯಾಗಿದೆ. ಇದಕ್ಕೆ ನೇರವಾಗಿ ಒನ್ಪ್ಲಸ್ ಮತ್ತು ಸ್ಯಾಮ್ಸಂಗ್ ನಡುವಣ ಪೈಪೋಟಿ ಎಂದು ಹೇಳಲಾಗಿದೆ.
ದೇಶದ ಪ್ರೀಮಿಯಮ್ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ವಶಪಡಿಸಿಕೊಂಡಿರುವ ಒನ್ಪ್ಲಸ್ ಕಂಪೆನಿಗೆ ಸ್ಯಾಮ್ಸಂಗ್ ನೇರಾನೇರಾ ಸೆಡ್ಡುಹೊಡೆಯುವ ಸಲುವಾಗಿ ಗ್ಯಾಲಾಕ್ಸಿ ಎ9 (2018) ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾದರೆ, ಒನ್ಪ್ಲಸ್ ಕಂಪೆನಿಗೆ ಭಯ ಹುಟ್ಟಿಸಿರುವ ವಿಶ್ವದ ಮೊದಲ ಕ್ವಾಡ್ ಕೋರ್ ಸ್ಮಾರ್ಟ್ಫೋನ್ ಗ್ಯಾಲಾಕ್ಸಿ ಎ9 (2018) ಹೇಗಿದೆ? ಭಾರತದಲ್ಲಿ ಗ್ಯಾಲಾಕ್ಸಿ ಎ9 (2018) ಸ್ಮಾರ್ಟ್ಪೋನ್ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ.
ಭಾರತದಲ್ಲಿ ಫೋನ್ ಬೆಲೆ ಎಷ್ಟು?
ಇತ್ತೀಚಿಗಷ್ಟೇ ಮಲೇಷ್ಯಾದ ಕೌಲಾಲಂಪುರದಲ್ಲಿ ಲಾಂಚ್ ಆಗಿದ್ದ 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ ಬೆಲೆ ಜಾಗತಿಕವಾಗಿ 549 ಪೌಂಡ್ಗಳಿಂದ ಆರಂಭವಾಗಿತ್ತು. ಅಂದರೆ, ಭಾರತದ ರೂಪಾಯಿಗಳಲ್ಲಿ 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ ಬೆಲೆ 45 ಸಾವಿರ ರೂ.ಗಳಾಗಬೇಕಿತ್ತು. ಆದರೆ, ಭಾರತದಲ್ಲಿ ಸ್ಮಾರ್ಟ್ಫೋನ್ ಬೆಲೆ ಏಕಾಏಕಿ 10,000 ರದಷ್ಟು ಕಡಿಮೆ ಇದೆ. 6ಜಿಬಿ RAM ಮತ್ತು 128 ಜಿಬಿ ವೆರಿಯಂಟ್ ಫೋನ್ ಬೆಲೆ 36,990 ರೂ.ಗಳಾಗಿದ್ದರೆ, 8 ಜಿಬಿ RAM ಮತ್ತು 128 ವೆರಿಯಂಟ್ ಫೋನ್ ಬೆಲೆ 39,990 ರೂ.ಗಳಾಗಿವೆ.
ಕ್ವಾಡ್ ಕ್ಯಾಮರಾ ಸೆಟಪ್!
ಅತ್ಯುತ್ತಮ ಚಿತ್ರಗಳನ್ನು ಪಡೆಯಲು ಪಿಕ್ಸೆಲ್ ವಿಲೀನಗೊಳಿಸುವ ತಂತ್ರಜ್ಞಾನದೊಂದಿಗೆ 'ಗ್ಯಾಲಕ್ಸಿ ಎ 9' ಸ್ಮಾರ್ಟ್ಫೋನ್ 24 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಎರಡನೆಯ ಕ್ಯಾಮೆರಾ 2x ಜೂಮ್ ಟೆಲಿಫೋಟೋ ಲೆನ್ಸ್ ಮತ್ತು ಪ್ರತ್ಯೇಕ ಡೀಪ್ ಕ್ಯಾಮರಾ ಲೆನ್ಸ್ವ್ಳೊಂದಿಗೆ ಜೋಡಿಯಾಗಿ 120-ಡಿಗ್ರಿ ಅಲ್ಟ್ರಾ-ವೈಡ್ ಕ್ಯಾಮರಾ ಸಂವೇದಕವಾಗಿದೆ. ಈ ಎಲ್ಲಾ ಕ್ಯಾಮೆರಾಗಳು ಕಂಪನಿಯ ಸ್ವಂತ AI ಕ್ಯಾಮರಾ ಸಾಫ್ಟ್ವೇರ್ನಿಂದ ಬೆಂಬಲಿತವಾಗಿವೆ. ಹಾಗಾಗಿ, ಇದು ಮಾರುಕಟ್ಟೆಯ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ಫೋನ್ ಆಗಿದೆ.
24MP ಸೆಲ್ಫಿ ಕ್ಯಾಮೆರಾ!
ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ ಮುಂಬಾಗದಲ್ಲಿ 24MP ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ ಪ್ರಾಥಮಿಕ ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾಗಳೆರಡು 24MP ಸಾಮರ್ಥ್ಯವನ್ನು ಹೊಂದಿರುವುದು 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನಿನ ವಿಶೇಷತೆಯಾಗಿದೆ. ಸೆಲ್ಫಿ ಕ್ಯಾಮೆರಾ ಕೂಡ AI ಕ್ಯಾಮರಾ ಸಾಫ್ಟ್ವೇರ್ ಬೆಂಬಲಿತವಾಗಿದ್ದು, ಇಂಟೆಲಿಜೆಂಟ್ ಕ್ಯಾಮೆರಾ ವೈಶಿಷ್ಟ್ಯವಾಗಿ ಡಬ್ ಮಾಡಲಾಗಿದೆ.
ಡಿಸ್ಪ್ಲೇ ಮತ್ತು ವಿನ್ಯಾಸ!
'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ 6.3-ಇಂಚಿನ ಪೂರ್ಣ HD + AMOLED ಡಿಸ್ಪ್ಲೇಯನ್ನು ಹೊಂದಿದೆ. 1080x2220 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿರುವ ಡಿಸ್ಪ್ಲೇ ಎಡ್ಜ್ ಟು ಎಡ್ಜ್ ವಿನ್ಯಾಸವನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳು ಹಾಗೂ ಫಿಂಗರ್ಪ್ರಿಂಟ್ ಫೀಚರ್ ಆಯ್ಕೆಯನ್ನು ಹೊಂದಿರುವ ಈ 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ ಹೈ ಎಂಡ್ ಲುಕ್ ಹೊಂದಿರುವುದರಲ್ಲಿ ಎರಡು ಮಾತಿಲ್ಲ.
ಪ್ರೊಸೆಸರ್ ಮತ್ತು RAM!
6ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿ ಹಾಗೂ 8 ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿಯ ಎರಡು ಮಾದರಿಗಳಲ್ಲಿ 'ಗ್ಯಾಲಕ್ಸಿ ಎ9' ಸ್ಮಾರ್ಟ್ಫೋನ್ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 660 SOC ಓಕ್ಟಾ ಕೋರ್ ಪ್ರೊಸೆಸರ್(2.2GHz ನಲ್ಲಿ ನಾಲ್ಕು ಕೋರ್ಗಳು ಮತ್ತು 1.8GHz ನಲ್ಲಿ ನಾಲ್ಕು ಕೋರ್ಗಳು ದೊರೆಯುತ್ತವೆ.) ಚಾಲಿತ ಈ ಸ್ಮಾರ್ಟ್ಫೋನ್ ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದು ಎಂದು ಸ್ಯಾಮ್ಸಂಗ್ ಕಂಪೆನಿ ತಿಳಿಸಿದೆ.
ಇತರೆ ಏನೆಲ್ಲಾ ಫೀಚರ್ಸ್?
3,800 mAh ಬ್ಯಾಟರಿಯಿಂದ ಬೆಂಬಲಿತವಾಗಿರುವ ಗ್ಯಾಲಕ್ಸಿ A9 'ಗ್ಯಾಲಕ್ಸಿ ಎ9' ಆಂಡ್ರಾಯ್ಡ್ 8.0 ಓರಿಯೊದಲ್ಲಿ ರನ್ ಆಗಲಿದೆ. 162.5 x 77 x 7.8 ಮಿಮೀ ಅಳತೆ ಮತ್ತು 183 ಗ್ರಾಂ ತೂಕವಿರುವ ಈ ಸಾಧನದಲ್ಲಿ ಅಕ್ಸೆಲೆರೊಮೀಟರ್, ಫಿಂಗರ್ಪ್ರಿಂಟ್ ಸೆನ್ಸರ್, ಗೈರೋ ಸಂವೇದಕ, ಭೂಕಾಂತೀಯ ಸಂವೇದಕ, ಹಾಲ್ ಸಂವೇದಕ, RGB ಬೆಳಕಿನ ಸಂವೇದ ಹಾಗೂ ಸಾಮೀಪ್ಯ ಸಂವೇದಕಗಳಿವೆ. ಇನ್ನು ಎನ್ಎಫ್ಸಿ ಮೂಲಕ ಸ್ಯಾಮ್ಸಂಗ್ ಪೇ ಅನ್ನು ಬೆಂಬಲಿಸುತ್ತದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999