Home
ಮೊಬೈಲ್

ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗೆ ಐಲವ್ ಆಡಿಯೋ ಡಕ್

By Super
ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗೆ ಐಲವ್ ಆಡಿಯೋ ಡಕ್

ಟ್ಯಾಬ್ಲೆಟ್ ಮಾರುಕಟ್ಟೆ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಇದಕ್ಕೆ ಟ್ಯಾಬ್ಲೆಟ್ ಗೆಂದೇ ಲಭ್ಯವಿರುವ ಇನ್ನಿತರ ಸಾಧನಗಳೂ ಕಾರಣವಿರಬಹುದು. ಕೀ ಬೋರ್ಡ್, ಹೈ ಫೈ ಡಕ್ ಸ್ಟೇಷನ್ ನಿಂದಿಡಿದು ಎಲ್ಲವೂ ಕೂಡ ಟ್ಯಾಬ್ಲೆಟ್ ಮಾರುಕಟ್ಟೆ ವಿಸ್ತಾರಗೊಳ್ಳಲು ಕಾರಣವೆನ್ನಬಹುದು. ಆದರೆ ಎಲ್ಲಕ್ಕಿಂತ ಆಡಿಯೋ ಡಕ್ ಸ್ಟೇಷನ್ ಹೆಚ್ಚು ಸೂಕ್ತ. ನಿಮ್ಮ ಟ್ಯಾಬ್ಲೆಟ್ ನಿಂದ ಉತ್ಕ್ರಷ್ಟ ಗುಣಮಟ್ಟದ ಸಂಗೀತವನ್ನು ನೀವು ನಿರೀಕ್ಷಿಸುವುದಾದರೆ ಈ ಆಡಿಯೋ ಡಕ್ ಸ್ಟೇಷನ್ ಅನಿವಾರ್ಯವೂ ಹೌದು.

ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ಲೆಟ್ ಗೆಂದೇ ವಿನೂತನ ಆಡಿಯೋ ಡಕಿಂಗ್ ಸ್ಟೇಷನ್ ಬಂದಿದೆ. ಐ ಲವ್ ಕಂಪನಿ ಸ್ಯಾಮ್ ಸಂಗ್ ಗ್ಯಾಲಕ್ಸಿಗೆಂದೇ ಈ ಆಡಿಯೋ ಸಾಧನವನ್ನು ಬಿಡುಗಡೆಗೊಳಿಸಿದ್ದು, ಇದರ ಹೆಸರು iSM524 ಆರ್ಟ್ ಸ್ಟೇಷನ್ ಪ್ರೊ ಆಗಿದೆ.

ಈ ಸ್ಪೀಕರ್ ಡಕ್ ಅಗಲವಾಗಿರುವುದರಿಂದ ಸ್ವಲ್ಪ ಭಾರವೆನಿಸಬಹುದು. ಆದರೆ ವಿನ್ಯಾಸ ತುಂಬಾ ಸೊಗಸಾಗಿದೆ ಎಂದರೆ ತಪ್ಪಿಲ್ಲ. ಈ iSM524 ಆರ್ಟ್ ಸ್ಟೇಷನ್ ಪ್ರೊ ನಲ್ಲಿ jAura ಸೌಂಡ್ ತಂತ್ರಜ್ಞಾನ ಅಳವಡಿಸಿದ್ದು, 3.5 ಎಂಎಂ ಆಡಿಯೋ ಜ್ಯಾಕನ್ನೂ ಒಳಗೊಂಡಿದೆ.

ಟ್ಯಾಬ್ಲೆಟ್ ಅನ್ನು ವ್ಯವಸ್ಥಿತವಾಗಿಡಬಹುದಾದ ಉತ್ತಮ ಸಾಧನ ಇದಾಗಿದೆ. ಇದರಿಂದ ಸಂಗೀತದ ಉತ್ತಮ ಅನುಭವ ಪಡೆಯುವುದು ಖಚಿತ.

ಸ್ಯಾಮ್ ಸಂಗ್ ಗ್ಯಾಲಕ್ಸಿಯ 8.9 ಇಂಚಿನ ಮತ್ತು 10.1 ಇಂಚಿನ ಎರಡೂ ಆಯಾಮಗಳಿಗೂ ಈ ಡಕ್ ಸ್ಟೇಷನ್ ಸೂಕ್ತವಾಗಲಿದೆ. ಈ ಸಾಧನದೊಂದಿಗೆ IR ರಿಮೋಟ್ ಕಂಟ್ರೋಲ್ ಕೂಡ ನೀಡಲಾಗಿದೆ. ಇದು ಟ್ಯಾಬ್ಲೆಟ್ ಕಾರ್ಯ ವೈಖರಿಗೆ ಸಹಾಯ ಮಾಡುತ್ತೆ.

ನೀವು ಬಯಸುವ ಮನರಂಜನೆ ಈ ಸಾಧನದಿಂದ ದೊರೆಯುವುದರಲ್ಲಿ ಸಂಶಯವೇ ಇಲ್ಲ. ಆದರೆ ಈ ಐಲವ್ ಸಾಧನದ ಬೆಲೆ ಭಾರತದಲ್ಲಿ ಎಷ್ಟಿದೆ ಎಂಬ ಕುರಿತು ನಿಖರ ಮಾಹಿತಿ ತಿಳಿದುಬಂದಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+