Home
ಮೊಬೈಲ್

ಐಫೋನ್ Xsಗೆ ಆಪಲ್ ಖರ್ಚು ಮಾಡುವುದು ಎಷ್ಟು.? ವಿಶ್ವವನ್ನೆ ಬೆಚ್ಚಿ ಬೀಳಿಸಿದ ಮಾಹಿತಿ..!

ಜಾಗತಿಕವಾಗಿಯೇ ಅತೀ ದುಬಾರಿ ಬೆಲೆಯ ಫೋನ್ ಎನ್ನುವ ಖ್ಯಾತಿಯ ಪಡೆದುಕೊಂಡಿರುವ ಆಪಲ್ ಹೊಸದಾಗಿ ಲಾಂಚ್ ಮಾಡಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್, ಭಾರತೀಯ ಮಾರುಕಟ್ಟೆಯಲ್ಲಿ ರೂ.1,09,900ಕ್ಕೆ ಮಾರಾಟವಾಗಲಿದೆ. ಸೆಪ್ಟೆಂಬರ್ 28 ರಂದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ನಿರ್ಮಾಣ ಮಾಡಲು ಆಪಲ್ ಎಷ್ಟು ಹಣವನ್ನು ಖರ್ಚು ಮಾಡಿದೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ.

ಐಫೋನ್ Xsಗೆ ಆಪಲ್ ಖರ್ಚು ಮಾಡುವುದು ಎಷ್ಟು.?ವಿಶ್ವವನ್ನೆ ಬೆಚ್ಚಿ ಬೀಳಿಸಿದ ಮಾಹಿತಿ

ಟೆಕ್ ಇನ್ಸೆಟ್ಸ್ ಎನ್ನುವ ಜಾಲತಾಣವೊಂದು ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಅನ್ನು ಸಂಪೂರ್ಣವಾಗಿ ಬಿಚ್ಚಿಟ್ಟು, ಅದರಲ್ಲಿ ಬಳಕೆ ಮಾಡಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಇಂಚಿಂಚಾಗಿ ಬಿಚ್ಚಿಟಿದೆ. ಈ ಮಾಹಿತಿಯೂ ಸದ್ಯ ಜಾಗತಿಕವಾಗಿ ವೈರಲ್ ಆಗಿದ್ದು, ಆಪಲ್ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ನಿರ್ಮಾಣಕ್ಕೆ ಆಗಿರುವ ಖರ್ಚಿಗೆ ಲೆಕ್ಕವನ್ನು ವಿಶ್ವವೇ ಬೆಚ್ಚಿಟಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ಅರ್ಧಕ್ಕಿಂತಲೂ ಕಡಿಮೆ ಬೆಲೆ:

ಅರ್ಧಕ್ಕಿಂತಲೂ ಕಡಿಮೆ ಬೆಲೆ:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾರಾಟವಾಗುತ್ತಿರುವ ಅರ್ಧ ಬೆಲೆಯನ್ನು ನಿರ್ಮಾಣಕ್ಕಾಗಿ ಖರ್ಚು ಮಾಡಿಲ್ಲ ಎನ್ನಲಾಗಿದೆ. ಆದರೆ ಆಪಲ್ ತನ್ನದೇ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವ ಹಿನ್ನಲೆಯಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣಕ್ಕೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

ಇಲ್ಲಿದೆ ಲೆಕ್ಕಾಚಾರ:

ಇಲ್ಲಿದೆ ಲೆಕ್ಕಾಚಾರ:

ಮಾರುಕಟ್ಟೆಯಲ್ಲಿ ಸದ್ಯ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಐಫೋನ್ Xs ಮ್ಯಾಕ್ಸ್ ನಿರ್ಮಾಣಕ್ಕೆ $443 ಡಾಲರ್ ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಅಂದರೆ ಭಾರತದಲ್ಲಿ ಐಫೋನ್ Xs ಮ್ಯಾಕ್ಸ್ ರೂ.1,09,900ಕ್ಕೆ ಮಾರಾಟವಾಗಲಿದ್ದು, ಇದಕ್ಕೆ ಆಪಲ್ ಖರ್ಚು ಮಾಡುತ್ತಿರುವುದು ಕೇವಲ ರೂ.32,164 ಎನ್ನಲಾಗಿದೆ.

ಯಾವುದಕ್ಕೆ ಎಷ್ಟು:

ಯಾವುದಕ್ಕೆ ಎಷ್ಟು:

ಐಫೋನ್ Xs ಮ್ಯಾಕ್ಸ್ ಡಿಸ್‌ಪ್ಲೇಗಾಗಿ $80.50 ಖರ್ಚು ಮಾಡುತ್ತಿದೆ. ಇದೇ ಮಾದರಿಯಲ್ಲಿ A12 ಚಿಪ್ ನಿರ್ಮಾಣಕ್ಕಾಗಿ $72 ಮಾತ್ರವೇ ವೆಚ್ಚ ಮಾಡುತ್ತಿದೆ ಎನ್ನಲಾಗಿದೆ. ಇದಲ್ಲದೇ ಸ್ಟೋರೆಜ್‌ಗಾಗಿ $64 ಖರ್ಚು ಮಾಡುತ್ತಿದ್ದು, ಕ್ಯಾಮೆರಾಕ್ಕಾಗಿ $55 ವೆಚ್ಚವಾಗುತ್ತಿದೆ. ಅಲ್ಲದೇ ಬೇರೆ ಕಾಂಪೋನೆಂಟ್‌ಗಳಿಗೆ $55 ಖರ್ಚು ಮಾಡಲಿದೆ. ಇದೆಲ್ಲವೂ ಸೇರಿದರೆ $443 ಆಗಲಿದೆ.

ಬೆಲೆ ಯಾಕೆ ಎಷ್ಟು..?

ಬೆಲೆ ಯಾಕೆ ಎಷ್ಟು..?

ಆಪಲ್ ಇಷ್ಟು ಕಡಿಮೆ ಬೆಲೆ ಐಫೋನ್ ನಿರ್ಮಾಣ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಎಂದರೆ ಐಫೋನಿನಲ್ಲಿ ಹಾಕಿರುವ ಕಾಂಪೋನೆಂಟ್ ನಿರ್ಮಾಣಕ್ಕೆ ಆಪಲ್ ಹೆಚ್ಚಿನ ಖರ್ಚು ಮಾಡುತ್ತಿದೆ. ಅಲ್ಲದೇ ಈ ವೆಚ್ ದಲ್ಲಿ ಅಸೆಂಬಲ್ ಮಾಡಲು ಮತ್ತು ಮ್ಯಾನುಫ್ಯಾಚ್ಚರ್ ಮಾಡಲು ಎಷ್ಟು ವೆಚ್ಷವಾಗಿದೆ ಎಂಬುದನ್ನು ಸೇರಿಸಿಲ್ಲ.

ಆಡ್‌ಗೆ:

ಆಡ್‌ಗೆ:

ಇದಲ್ಲದೇ ಆಪಲ್ ತನ್ನ ಐಫೋನ್‌ಗಾಗಿ ರಿಸರ್ಚ್ ಮತ್ತು ಡೆವಲಪ್ಮೆಂಟ್‌ಗಾಗಿ ಹೆಚ್ಚಿನ ವೆಚ್ಚ ಮಾಡುತ್ತಿದೆ. ಅಲ್ಲದೇ ಐಫೋನ್ ಮಾರ್ಕೆಟ್ ಮಾಡುವ ಸಲುವಾಗಿ ಹಾಗೂ ಜಾಹಿರಾತು ಪ್ರಸಾರಕ್ಕಾಗಿ ಹೆಚ್ಚಿನ ಹಣವನ್ನು ವ್ಯಯ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಐಫೋನ್ ತನ್ನ ಫೋನ್‌ ಬೆಲೆಯನ್ನು ಅಧಿಕವಾಗಿಸಿದೆ ಎನ್ನಲಾಗಿದೆ.

Best Mobiles in India

English summary
It Costs Apple Just $443 To Build The iPhone XS Max, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+