Home
ಮೊಬೈಲ್

6,799 ರೂ.ಗೆ ಸ್ಟೈಲೀಶ್ ಆಗಿರುವ ಹೊಸ Itel ಫೋನ್ ಬಿಡುಗಡೆ: ಇಲ್ಲಿದೆ ಫುಲ್ ಡೀಟೇಲ್ಸ್!

Itel ಕಂಪನಿಯು ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ Itel A100 4G ಅನ್ನು ಭಾರತದಲ್ಲಿ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ವಿಭಾಗದಲ್ಲಿ ಹೆಚ್ಚು ಫೀಚರ್‌ಗಳನ್ನು ನೀಡುವ ಉದ್ದೇಶದಿಂದ ರೂಪಿಸಲಾದ ಈ ಹೊಸ ಫೋನ್, ತನ್ನ ಆಧುನಿಕ ವಿನ್ಯಾಸ ಮತ್ತು ಬಲಿಷ್ಠ ನಿರ್ಮಾಣದಿಂದ ಗಮನ ಸೆಳೆಯುತ್ತಿದೆ. ಪ್ರೀಮಿಯಂ ಲುಕ್ ನೀಡುವ ವಿನ್ಯಾಸ, ದೊಡ್ಡ ಡಿಸ್‌ಪ್ಲೇ ಮತ್ತು ದೀರ್ಘ ಬ್ಯಾಟರಿ ಬ್ಯಾಕಪ್‌ಗಾಗಿ ಈ ಸ್ಮಾರ್ಟ್‌ಫೋನ್ ಬಜೆಟ್ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡಿರುವಂತಿದೆ.

Itel A100 4G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Itel A100 4G ಸ್ಮಾರ್ಟ್‌ಫೋನ್‌ ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 3GB RAM + 64GB ಸ್ಟೋರೇಜ್ ವೇರಿಯಂಟ್‌ ಅನ್ನು ರೂ. 6,799ಕ್ಕೆ ಖರೀದಿಸಬಹುದು. 4GB RAM ವೇರಿಯಂಟ್‌ನ ಬೆಲೆ ರೂ. 7,499 ಆಗಿದೆ. ಈ ಫೋನ್ Silk Green, Pure Black ಮತ್ತು Titanium Gold ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರು ಕಂಪೆನಿಯ ಆನ್‌ಲೈನ್ ಮತ್ತು ಎಲ್ಲಾ ಆಫ್‌ಲೈನ್ ರಿಟೇಲ್ ಅಂಗಡಿಗಳ ಮೂಲಕ ಈ ಫೋನ್ ಖರೀದಿಸಬಹುದು. ಕಂಪನಿ ಈ ಫೋನ್ ಮೇಲೆ 100 ದಿನಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಸೌಲಭ್ಯವನ್ನು ನೀಡುತ್ತಿದೆ.

Itel A100 4G: ಪ್ರಮುಖ ವೈಶಿಷ್ಟ್ಯಗಳು
Itel A100 4G ಫೋನ್‌ಗೆ MIL-STD-810H ಮಿಲಿಟರಿ ಗ್ರೇಡ್ ಪ್ರಮಾಣೀಕರಣ ದೊರೆತಿದೆ ಎಂದು ಕಂಪನಿ ಹೇಳಿದೆ. ಇದರಿಂದ ಫೋನ್ ದಿನನಿತ್ಯದ ಸಣ್ಣ ಹೊಡೆತಗಳು, ಕಂಪನ ಮತ್ತು ಸಾಮಾನ್ಯ ಅಪಘಾತಗಳನ್ನು ಎದುರಿಸಲಿದೆ ಎಂದು ಕಂಪೆನಿಯು ತಿಳಿಸಿದೆ. ಜೊತೆಗೆ, ಈ ಫೋನಿನಲ್ಲಿ IPX4 ಸ್ಪ್ಲ್ಯಾಶ್ ರೆಸಿಸ್ಟನ್ಸ್ ಇರುವುದರಿಂದ ನೀರಿನ ಛಿತ್ತರಗಳಿಂದಲೂ ಮೂಲಭೂತ ರಕ್ಷಣೆ ಲಭ್ಯವಾಗುತ್ತದೆ ಎಂದು ತಿಳಿಸಲಾಗಿದ್ದು, ಈ ವೈಶಿಷ್ಟ್ಯಗಳು ಈ ಬೆಲೆ ವಿಭಾಗದಲ್ಲಿ ಫೋನ್‌ಗೆ ಹೆಚ್ಚುವರಿ ಮೌಲ್ಯ ನೀಡುವಂತೆ ಕಾಣುತ್ತಿದೆ.

6,799 ರೂ.ಗೆ ಸ್ಟೈಲೀಶ್ ಆಗಿರುವ ಹೊಸ Itel ಫೋನ್ ಬಿಡುಗಡೆ: ಇಲ್ಲಿದೆ ಫುಲ್ ಡೀಟೇಲ್

ಡಿಸ್‌ಪ್ಲೇ ಮತ್ತು ಸಾಫ್ಟ್‌ವೇರ್
Itel A100 4G ಫೋನಿನಲ್ಲಿ 6.6 ಇಂಚಿನ HD+ IPS LCD ಡಿಸ್‌ಪ್ಲೇ ನೀಡಲಾಗಿದ್ದು, 90Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ಮತ್ತು ವೀಡಿಯೋ ವೀಕ್ಷಣೆ ಹೆಚ್ಚು ಸ್ಮೂತ್ ಆಗಿರುತ್ತದೆ. ಜೊತೆಗೆ, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಸ್ಪಂದನಶೀಲ ಟಚ್ ಅನುಭವವನ್ನು ಒದಗಿಸುತ್ತದೆ. ದೊಡ್ಡ ಡಿಸ್‌ಪ್ಲೇ ಇರುವುದರಿಂದ ಆನ್‌ಲೈನ್ ವೀಡಿಯೋ, ಸೋಷಿಯಲ್ ಮೀಡಿಯಾ ಮತ್ತು ಸಾಮಾನ್ಯ ಬ್ರೌಸಿಂಗ್‌ಗೆ ಇದು ಸೂಕ್ತವಾಗಿರುವಂತೆ ಕಾಣುತ್ತಿದೆ.

ಕಾರ್ಯಕ್ಷಮತೆ ಮತ್ತು ಸ್ಟೋರೇಜ್
ಈ ಸ್ಮಾರ್ಟ್‌ಫೋನ್‌ನಲ್ಲಿ UniSoC T7100 ಆಕ್ಟಾ-ಕೋರ್ ಪ್ರೊಸೆಸರ್ ಬಳಕೆಯಾಗಿದೆ. ದಿನನಿತ್ಯದ ಅಪ್ಲಿಕೇಶನ್‌ಗಳಿಗೆ ಇದು ಸಮರ್ಪಕ ಕಾರ್ಯಕ್ಷಮತೆಯನ್ನು ನೀಡುತ್ತದೆ. ಫೋನ್‌ನಲ್ಲಿ ಗರಿಷ್ಠ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ದೊರೆಯುತ್ತದೆ. ಜೊತೆಗೆ, ವರ್ಚುವಲ್ RAM ಫೀಚರ್ ಮೂಲಕ ಒಟ್ಟು 8GB RAM ವರೆಗೆ ವಿಸ್ತರಿಸುವ ಅವಕಾಶವೂ ಇದೆ. ಹಾಗೂ Android 15 ಆಧಾರಿತ Itel OS 15 ಮೇಲೆ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ಮತ್ತು ಕನೆಕ್ಟಿವಿಟಿ
ಫೋಟೋಗ್ರಫಿ ವಿಭಾಗದಲ್ಲಿ Itel A100 4G ಫೋನ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್ ಜೊತೆಗೆ ಹೊಂದಿದೆ. ಸಾಮಾನ್ಯ ದಿನನಿತ್ಯದ ಫೋಟೋಗಳು ಮತ್ತು ದಾಖಲೆ ಉದ್ದೇಶಕ್ಕೆ ಇದು ಉಪಯುಕ್ತವಾಗಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, Bluetooth, GPS, 3.5mm ಹೆಡ್‌ಫೋನ್ ಜಾಕ್, IR ಬ್ಲಾಸ್ಟರ್ ಮತ್ತು USB Type-C ಪೋರ್ಟ್ ಸೇರಿವೆ.

ಬ್ಯಾಟರಿ ಮತ್ತು ವಿಶೇಷ ಫೀಚರ್
Itel A100 4G ಫೋನ್‌ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಒಂದು ದಿನದಷ್ಟು ಸುಲಭವಾಗಿ ಬಳಕೆಗೆ ಸಾಕಾಗುತ್ತದೆ. ಇದು 10W ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ. ವಿಶೇಷವಾಗಿ ಗಮನ ಸೆಳೆಯುವ ಫೀಚರ್ ಎಂದರೆ Ultralink. ಈ ತಂತ್ರಜ್ಞಾನವು ನೆಟ್‌ವರ್ಕ್ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ಇತರೆ Itel ಬಳಕೆದಾರರೊಂದಿಗೆ ಕರೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

ಒಟ್ಟಿನಲ್ಲಿ, Itel A100 4G ಕಡಿಮೆ ಬೆಲೆಯಲ್ಲಿ ದೊಡ್ಡ ಡಿಸ್‌ಪ್ಲೇ, ಬಲಿಷ್ಠ ನಿರ್ಮಾಣ, ದೀರ್ಘ ಬ್ಯಾಟರಿ ಬ್ಯಾಕಪ್ ಮತ್ತು ಉಪಯುಕ್ತ ವೈಶಿಷ್ಟ್ಯಗಳನ್ನು ಬಯಸುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ. ಬಜೆಟ್ ಸೆಗ್ಮೆಂಟ್‌ನಲ್ಲಿ 4G ಸ್ಮಾರ್ಟ್‌ಫೋನ್ ಹುಡುಕುತ್ತಿರುವವರಿಗೆ ಈ ಹೊಸ Itel ಫೋನ್ ಉತ್ತಮ ಆಯ್ಕೆಯಾಗಿ ಕಾಣಿಸುತ್ತಿದೆ.

Best Mobiles in India

English summary
Itel has launched the new Itel A100 4G in India at a starting price of ₹6,799. The budget smartphone features a stylish design, large display, long-lasting battery, and MIL-STD-810H military-grade durability, making it an attractive option for entry-level users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+