Home
ಮೊಬೈಲ್

Itel A100 ಫೋನ್ ಟೀಸರ್ ಬಿಡುಗಡೆ: ಬೆಲೆ 8,000 ಸಾವಿರಕ್ಕಿಂತ ಕಡಿಮೆ ಖಚಿತ!

ಅತ್ಯಂತ ಕಡಿಮೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಹೆಸರಾಗಿರುವ Itel ಕಂಪೆನಿಯು ತನ್ನ ಹೊಸ ತಲೆಮಾರಿನ Itel A100 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಕುರಿತು ಕಂಪೆನಿಯು ಅಧಿಕೃತ ಟೀಸರ್ ಬಿಡುಗಡೆಗೊಳಿಸಿದ್ದು, ಹೊಸ Itel A100 ಸ್ಮಾರ್ಟ್‌ಫೋನಿನ ವಿನ್ಯಾಸ, ಬಣ್ಣ ಆಯ್ಕೆಗಳು ಮತ್ತು ಪ್ರಮುಖ ಫೀಚರ್‌ಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದೆ. ಜೆಟ್ ಸೆಗ್ಮೆಂಟ್‌ನ್ನು ಗುರಿಯಾಗಿಟ್ಟುಕೊಂಡಿರುವ ಈ ಸ್ಮಾರ್ಟ್‌ಫೋನ್, ಕಳೆದ ವರ್ಷ ಮಾರುಕಟ್ಟೆಗೆ ಬಂದ Itel A90 ಗೆ ಮುಂದುವರಿದ ಮಾದರಿಯಾಗಿ ಪರಿಚಯವಾಗಲಿದೆ.

ಅಧಿಕೃತ ಟೀಸರ್ ಮಾಹಿತಿಯ ಪ್ರಕಾರ, Itel A100 ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಪ್ಯೂರ್ ಬ್ಲಾಕ್, ಸಿಲ್ಕ್ ಗ್ರೀನ್ ಮತ್ತು ಟೈಟಾನಿಯಂ ಗೋಲ್ಡ್ ಬಣ್ಣಗಳು ಯುವ ಗ್ರಾಹಕರನ್ನು ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಫೋನ್‌ಗೆ ಫ್ಲಾಟ್ ಫ್ರೇಮ್ ಹಾಗೂ ಚೌಕಾಕಾರದ ಎಡ್ಜ್‌ಗಳನ್ನು ನೀಡಲಾಗಿದ್ದು, ಹಿಂಭಾಗದಲ್ಲಿ ಮ್ಯಾಟ್ ಫಿನಿಷ್ ಕಾಣಿಸಿಕೊಳ್ಳುತ್ತದೆ. ಹಿಂದುಗಡೆ ಇರುವ ಸ್ಕ್ವಿರ್ಕಲ್ ಆಕಾರದ ಕ್ಯಾಮೆರಾ ಮಾಡ್ಯೂಲ್, ಪ್ರೀಮಿಯಂ ಲುಕ್ ನೀಡುವಂತೆ ವಿನ್ಯಾಸಗೊಂಡಿದೆ. ಇದರಲ್ಲಿ ಎರಡು ವೃತ್ತಾಕಾರದ ಕ್ಯಾಮೆರಾ ಕಟ್‌ಔಟ್‌ಗಳು ಮತ್ತು LED ಫ್ಲ್ಯಾಶ್ ಸೇರಿವೆ.

Itel ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಮೈಕ್ರೋಸೈಟ್ ಮೂಲಕ Itel A100 ನ ಇನ್ನಷ್ಟು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಫೋನ್ ಮಿಲಿಟರಿ-ಗ್ರೇಡ್ ಡ್ಯುರಬಿಲಿಟಿ ಹೊಂದಿದ್ದು, ದೈನಂದಿನ ಬಳಕೆಯಲ್ಲಿನ ಬೀಳುವ ಮತ್ತು ಕಠಿಣ ಪರಿಸ್ಥಿತಿಗಳನ್ನು ಸುಲಭವಾಗಿ ತಡೆಯಬಲ್ಲದು ಎಂಬುದು ಕಂಪನಿಯ ಹೇಳಿಕೆ. ಜೊತೆಗೆ, 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ದೀರ್ಘಕಾಲ ಬಳಕೆಗೆ ಅನುಕೂಲವಾಗಲಿದೆ. ಡಿಸ್ಪ್ಲೇ ವಿಭಾಗದಲ್ಲೂ Itel A100 ಗಮನ ಸೆಳೆಯುತ್ತದತ್ತಿದ್ದು, 90Hz ರಿಫ್ರೆಶ್ ರೇಟ್ ಹೊಂದಿರುವ ಸ್ಕ್ರೀನ್‌ನೊಂದಿಗೆ ಬರಲಿದೆ.

Itel A100 ಫೋನ್ ಟೀಸರ್ ಬಿಡುಗಡೆ: ಬೆಲೆ 8,000 ಸಾವಿರಕ್ಕಿಂತ ಕಡಿಮೆ ಖಚಿತ!

ಈ ಫೋನ್‌ನಲ್ಲಿನ ಮತ್ತೊಂದು ವಿಶೇಷತೆ ಎಂದರೆ UltraLink ಸಪೋರ್ಟ್. ಸೆಲ್ಯುಲರ್ ನೆಟ್‌ವರ್ಕ್ ಲಭ್ಯವಿಲ್ಲದ ಪ್ರದೇಶಗಳಲ್ಲೂ ಆಯ್ದ ಸಾಧನಗಳಿಗೆ ವಾಯ್ಸ್ ಕಾಲ್ ಮಾಡಲು ಈ ಫೀಚರ್ ಸಹಾಯ ಮಾಡುತ್ತದೆ. ಇದಲ್ಲದೆ, ಇನ್‌ಬಿಲ್ಟ್ IR ಬ್ಲಾಸ್ಟರ್ ಮೂಲಕ ಟಿವಿ, ಎಸಿ ಸೇರಿದಂತೆ ಮನೆ ಉಪಕರಣಗಳನ್ನು ನಿಯಂತ್ರಿಸುವ ಅವಕಾಶವೂ ಲಭ್ಯವಾಗಲಿದೆ. Itel ಹೇಳಿಕೆಯಂತೆ, ರೂ. 8,000 ಒಳಗಿನ ಬೆಲೆ ವಿಭಾಗದಲ್ಲಿ ಇದು ಅತ್ಯಂತ ಬಾಳಿಕೆಬರುವ ಸ್ಮಾರ್ಟ್‌ಫೋನ್ ಆಗಿರಲಿದೆ. ಅಂದರೆ, ಈ ಫೋನ್ 8,000 ಒಳಗಿನ 90Hz ರಿಫ್ರೆಶ್ ರೇಟ್ ಹೊಂದಿರುವ ಕೆಲವೇ ಫೋನ್‌ಗಳಲ್ಲಿ ಒಂದಾಗಿರಲಿದೆ.

ಗಮನಿಸುವುದಾದರೆ, ಈ ಹಿಂದಿನ ಮಾದರಿ Itel A90 ಅನ್ನು ಭಾರತದಲ್ಲಿ ರೂ. 6,499 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ Unisoc T7100 ಚಿಪ್‌ಸೆಟ್, 6.6 ಇಂಚಿನ ಡಿಸ್ಪ್ಲೇ, 5,000mAh ಬ್ಯಾಟರಿ ಮತ್ತು 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ನೀಡಲಾಗಿತ್ತು. ಹೊಸ Itel A100 ಈ ವೈಶಿಷ್ಟ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಿ, ಕಡಿಮೆ ಬಜೆಟ್ ಬಳಕೆದಾರರಿಗೆ ಹೆಚ್ಚು ಮೌಲ್ಯ ನೀಡುವ ಉದ್ದೇಶ ಹೊಂದಿದೆ.

Itel A100 ಫೋನಿನ ನಿಖರ ಲಾಂಚ್ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಆದರೆ, ಅಧಿಕೃತ ಟೀಸರ್‌ಗಳು ಈಗಾಗಲೇ ಬಿಡುಗಡೆಯಾಗಿರುವುದರಿಂದ, ಭಾರತದಲ್ಲಿ ಇದರ ಬಿಡುಗಡೆ ಹೆಚ್ಚು ದೂರದಲ್ಲಿಲ್ಲ ಎಂದು ನಿರೀಕ್ಷಿಸಬಹುದು. ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸ, ದೊಡ್ಡ ಬ್ಯಾಟರಿ ಮತ್ತು ಉಪಯುಕ್ತ ಫೀಚರ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ Itel A100 ಒಂದು ಗಮನಾರ್ಹ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Itel A100 smartphone has been officially teased ahead of its India launch, revealing a flat-edge design, matte finish, and three colour options—Pure Black, Silk Green, and Titanium Gold.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+