ಬಜೆಟ್ ಬೆಲೆ ಮೂರು ಐಟೆಲ್ ಫೋನ್: ಬೆಲೆ ಮಾತ್ರ ತೀರಾ ಕಡಿಮೆ..!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಐಟೆಲ್ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರಲ್ಲಿ ಮುಂದಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಐಟೆಲ್, ಸದ್ಯ ಒಟ್ಟು ಮೂರು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯವನ್ನು ಮಾಡಿದೆ. ಈ ಸ್ಮಾರ್ಟ್‌ಪೋನ್ ಗಳು ಬೆಜಟ್ ವಿಭಾಗದಲ್ಲಿ ಹೆಚ್ಚು ಸದ್ದು ಮಾಡಲಿವೆ.

ಬಜೆಟ್ ಬೆಲೆ ಮೂರು ಐಟೆಲ್ ಫೋನ್: ಬೆಲೆ ಮಾತ್ರ ತೀರಾ ಕಡಿಮೆ..!

ಐಟೆಲ್ ಒಟ್ಟಾಗಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಐಟೆಲ್ ಎ45, ಐಟೆಲ್ ಎ22 ಮತ್ತು ಐಟೆಲ್ ಎ22 ಪ್ರೊ ಒಟ್ಟಾಗಿ ಕಾಣಿಸಿಕೊಂಡಿದೆ. ಬೆಲೆ ವಿಚಾರದಲ್ಲಿಯೂ ಒಂದೇ ಮಾದರಿಯಲ್ಲಿ ಇರುವ ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿಯೂ ಮುಂದಿದೆ.

ಐಟೆಲ್ ಎ45 ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ45 ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ45 ಸ್ಮಾರ್ಟ್‌ಫೋನಿನಲ್ಲಿ 5.45 ಇಂಚಿನ ಫುಲ್ ಸ್ಕ್ರಿನ್ HD+ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 720x1440 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. IPS ಫುಲ್ ಸ್ಕ್ರೀನ್ ಡಿಸ್‌ಪ್ಲೇ ಇದಾಗಿದ್ದು, ಕ್ವಾಡ್ ಕೋರ್ ಮೀಡಿಯಾಟೆಕ್ MT6739WA SoC ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 8.1 ಒರಿಯೋ (ಗೊ ಆವೃತ್ತಿ)ದಲ್ಲಿ ಕಾರ್ಯನಿರ್ವಹಿಸಲಿದೆ.

ಐಟೆಲ್ ಎ45 ಸ್ಮಾರ್ಟ್‌ಫೋನ್ ಪ್ರೋಸೆಸರ್:

ಐಟೆಲ್ ಎ45 ಸ್ಮಾರ್ಟ್‌ಫೋನ್ ಪ್ರೋಸೆಸರ್:

1GB RAM ಈ ಫೋನಿನಲ್ಲಿದ್ದು, 8GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಸಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು. 5MP ಜತೆಗೆ VGA ಸೆನ್ಸಾರ್ ಹಿಂಭಾಗದಲ್ಲಿ 5MP ಫ್ರಂಟ್ ಸೆಲ್ಫಿ ಕ್ಯಾಮೆರಾ ವನ್ನು ಅಳವಡಿಸಲಾಗಿದೆ.

ಐಟೆಲ್ ಎ22 ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ22 ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ22 ಸ್ಮಾರ್ಟ್‌ಫೋನಿನಲ್ಲಿ 5 ಇಂಚುಗಳ IPS ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಕ್ವಾಡ್ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 210 SoC ಪ್ರೊಸೆಸರ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಆಂಡ್ರಾಯ್ಡ್ 8.1 ಒರಿಯೋ (ಗೋ ಆವೃತ್ತಿ)ಯನ್ನು ಅಳವಡಿಸಲಾಗಿದೆ. 5MP ಹಿಂಬದಿ ಕ್ಯಾಮೆರಾವನ್ನು ಆಟೋಫೋಕಸ್ ಲೆನ್ಸ್ ನೊಂದಿಗೆ ಕಾಣಬಹುದಾಗಿದ್ದು, LED ಫ್ಲ್ಯಾಷ್ ಸಹ ಇದೆ. 2MP ಸೆಲ್ಫಿ ಶೂಟರ್ ಅನ್ನು ನೋಡಬಹುದು. ಅಲ್ಲದೇ ಇದರಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ನೋಡಬಹುದು. 2400mAh ಬ್ಯಾಟರಿಯೂ ಇದೆ.

ಐಟೆಲ್ ಎ22 ಪ್ರೋ ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ22 ಪ್ರೋ ಸ್ಮಾರ್ಟ್‌ಫೋನ್ ವಿಶೇಷತೆಗಳು:

ಐಟೆಲ್ ಎ22 ಫ್ರೋ ಸ್ಮಾರ್ಟ್‌ಫೋನಿನಲ್ಲಿ 5 ಇಂಚುಗಳ IPS ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಕ್ವಾಡ್ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 210 SoC ಪ್ರೊಸೆಸರ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಆಂಡ್ರಾಯ್ಡ್ 8.1 ಒರಿಯೋವನ್ನು ನೋಡಬಹುದಾಗಿದೆ. . 5MP ಹಿಂಬದಿ ಕ್ಯಾಮೆರಾವನ್ನು ಆಟೋಫೋಕಸ್ ಲೆನ್ಸ್ ನೊಂದಿಗೆ ಕಾಣಬಹುದಾಗಿದ್ದು, LED ಫ್ಲ್ಯಾಷ್ ಸಹ ಇದೆ. 2MP ಸೆಲ್ಫಿ ಶೂಟರ್ ಅನ್ನು ನೋಡಬಹುದು. ಅಲ್ಲದೇ ಇದರಲ್ಲಿ 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯನ್ನು ನೋಡಬಹುದು. 2400mAh ಬ್ಯಾಟರಿಯೂ ಇದೆ.

ಬೆಲೆ :

ಬೆಲೆ :

ಐಟೆಲ್ ಎ45 ಸ್ಮಾರ್ಟ್‌ಫೋನ್ ರೂ.5,999ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಟೆಲ್ ಎ22 ಸ್ಮಾರ್ಟ್‌ಫೋನ್ ರೂ. 5,499ಕ್ಕೆ ಹಾಗೂ ಐಟೆಲ್ ಎ22 ಪ್ರೋ ಸ್ಮಾರ್ಟ್‌ಫೋನ್ ರೂ. 6,499ಕ್ಕೆ ಮಾರಾಟವಾಗಲಿದೆ. ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಾಗಿದೆ.

Best Mobiles in India

English summary
Itel A45, A22, A22 Pro With 18:9 Displays Launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X