Home
ಮೊಬೈಲ್

itel A50C and itel A50: 5,699ಕ್ಕೆ ಸಿಗುತ್ತೆ! ಖರೀದಿಸುವಾಗ 5 ಅಂಶಗಳನ್ನು ಮರೆಯಲೇಬೇಡಿ!

ಪ್ರಮುಖ ಟೆಕ್ ಬ್ರ್ಯಾಂಡ್‌ ಐಟೆಲ್ (itel) ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳೇ, ಐಟೆಲ್ A50 ಮತ್ತು ಐಟೆಲ್ A50C ಸ್ಮಾರ್ಟ್‌ಫೋನ್‌. ಈ ಫೋನ್‌ಗಳು ಬಜೆಟ್ ಸ್ನೇಹಿ ಆಗಿವೆ. ಕೇವಲ 5,699 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಅಂದಹಾಗೆ, ಈ ಫೋನ್‌ಗಳನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೇಜಾನ್‌ ಮೂಲಕ ಖರೀದಿಸಬಹುದು. ಈ ಫೋನ್‌ಗಳ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಐಟೆಲ್ ತನ್ನ ಐಟೆಲ್ A50 ಸರಣಿಯನ್ನು ಭಾರತದಲ್ಲಿ ವಿಸ್ತರಿಸಿದೆ. ಐಟೆಲ್ A50 ಮತ್ತು ಐಟೆಲ್ A50C ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಐಫೋನ್‌ನಂತೆಯೇ ಎರಡೂ ಫೋನ್‌ಗಳ ವಿನ್ಯಾಸ ಕಾಣುತ್ತದೆ. ಆದರೆ, ಎರಡೂ ಮೊಬೈಲ್‌ಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಕಂಪನಿಯು 6.6 ಇಂಚಿನ HD+ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್, ಆಂಡ್ರಾಯ್ಡ್ ಗೋ ಸಾಫ್ಟ್‌ವೇರ್ ಮತ್ತು ಆಕ್ಟಾ ಕೋರ್ ಯುನಿಸಾಕ್ ಪ್ರೊಸೆಸರ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿವೆ.

itel A50C and itel A50: 5,699ಕ್ಕೆ ಸಿಗುತ್ತೆ! ಖರೀದಿಸುವಾಗ 5 ಅಂಶ ಮರೆಯಬೇಡಿ

ಐಟೆಲ್ A50 ಮತ್ತು ಐಟೆಲ್ A50C ಫೋನಿನ ಬೆಲೆ ಮತ್ತು ಲಭ್ಯತೆ

ಐಟೆಲ್ A50C ಫೋನ್ ಆರಂಭಿಕ ಬೆಲೆ 5,699 ರೂ. ಇದೆ. ಕಂಪನಿಯು ಐಟೆಲ್ A50 ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. 3GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 6,099 ರೂ. ಇದೆ. 4GB RAM ಮತ್ತು 64GB ಸ್ಟೋರೇಜ್ ಬೆಲೆ 6,499 ರೂ. ಇದೆ. ಐಟೆಲ್ A50C ಐಫೋನ್ 13 ನಂತೆ ಕಾಣುತ್ತದೆ. ಇನ್ನೂ ಐಟೆಲ್ A50 iPhone 13 Pro ನಂತಹ ವಿನ್ಯಾಸವನ್ನು ಹೊಂದಿದೆ.

ಐಟೆಲ್ A50C ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಸಫೈರ್ ಬ್ಲ್ಯಾಕ್, ಡಾನ್ ಬ್ಲೂ ಮತ್ತು ಮಿಸ್ಟಿ ಆಕ್ವಾ ಬಣ್ಣಗಳಲ್ಲಿ ಲಭ್ಯವಿದೆ. ಐಟೆಲ್ A50 ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಮಿಸ್ಟ್ ಬ್ಲಾಕ್, ಲೈಮ್ ಗ್ರೀನ್, ಸಯಾನ್ ಬ್ಲೂ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಎರಡೂ ಫೋನ್‌ಗಳನ್ನು ಅಮೇಜಾನ್ ಮೂಲಕ ಖರೀದಿಸಬಹು. ಎರಡೂ ಫೋನ್‌ಗಳು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು 1 ವರ್ಷದ ವಾರಂಟಿಯನ್ನು ನೀಡುತ್ತವೆ.

ಐಟೆಲ್ A50 ಮತ್ತು ಐಟೆಲ್ A50C ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಕಂಪನಿಯು ಎರಡೂ ಫೋನ್‌ಗಳನ್ನುಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು 6.6 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿವೆ. ಇದು 1612×720 ಪಿಕ್ಸೆಲ್ ರೆಸಲ್ಯೂಶನ್, 60Hz ರಿಫ್ರೆಶ್ ರೇಟ್‌ ಒಳಗೊಂಡಿದೆ.

ಪ್ರೊಸೆಸರ್: ಹೊಸ ಐಟೆಲ್ ಮೊಬೈಲ್‌ಗಳು nisoc T603 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತವೆ. ಐಟೆಲ್ 50C ಫೋನ್ 2GB RAM ಮತ್ತು 32GB ಸ್ಟೋರೇಜ್‌ ಆಯ್ಕೆಯೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್: ಐಟೆಲ್ A50 ಮತ್ತು ಐಟೆಲ್ A50C ಫೋನ್‌ಗಳು 8 ಮೆಗಾಪಿಕ್ಸೆಲ್ ಎಐ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ: ಐಟೆಲ್ A50 ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಇದು 10W USB ಟೈಪ್-C ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಐಟೆಲ್ A50C ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಇತರೆ ಫೀಚರ್ಸ್‌: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ಗೋ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಎರಡೂ ಫೋನ್‌ಗಳಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಲಭ್ಯವಿದೆ. 4G VoLTE, ಡ್ಯುಯಲ್ ಬ್ಯಾಂಕ್ ವೈ-ಫೈ, ಬ್ಲೂಟೂತ್ 5.2, ಜಿಪಿಎಸ್ ಮತ್ತು ಡೈನಾಮಿಕ್ ಬಾರ್‌ನಂತಹ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.

Best Mobiles in India

English summary
itel A50 and A50C Smartphones Launched in India: itel A50, A50C: Know these 5 things before buying these two phones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+