₹7,299 ಕ್ಕೆ 128GB ಸ್ಟೊರೇಜ್, ಮಿಲಿಟರಿ-ಗ್ರೇಡ್ ಡ್ಯುರಾಬಿಲಿಟಿ ಫೋನ್ ಲಾಂಚ್!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಅತ್ಯುತ್ತಮ ಮೌಲ್ಯವನ್ನು ಒದಗಿಸುವ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ Itel ಪಾತ್ರ ಗಮನಾರ್ಹ. ಇದೀಗ ಕಂಪೆನಿಯು ಇಂತಹುದೇ ಮತ್ತೊಂದು ಬಜೆಟ್ ಬೆಲೆಯ ಸೀಮಿತ ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. Itel A90 Limited Edition ಎಂಬ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಇದಾಗಿದ್ದು, ಇದು 7,299 ರೂ.ಗೆ 128GB ಸ್ಟೊರೇಜ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಹಾಗಾದರೆ, ಹೊಸ Itel A90 Limited Edition ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Itel A90 Limited Edition: ಬೆಲೆ ಮತ್ತು ಲಭ್ಯತೆ
ಗಮನಿಸುವುದಾದರೆ, ದೇಶದಲ್ಲಿ ಈಗಾಗಲೇ 64GB ಮಾದರಿಯ Itel A90 ಸ್ಮಾರ್ಟ್‌ಫೋನ್ ಲಭ್ಯವಿತ್ತು. ಕಂಪೆನಿಯು ಈಗ ಸೀಮಿತ ಮಾದರಿಯಾಗಿ 128GB ಸ್ಟೋರೇಜ್ ಆಯ್ಕೆಯೊಂದಿಗೆ Itel A90 Edition 128GB ಹೆಸರಿನಲ್ಲಿ ಫೋನನ್ನು ಪರಿಚಯಿಸಿದೆ. ಈ ಹೊಸ ಫೋನ್ ಬೆಲೆ ₹7,299 ಆಗಿದ್ದು, ಇದು Space Titanium, Starlit Black ಮತ್ತು Aurora Blue ಎಂಬ ಮೂರು ಬಣ್ಣಗಳಲ್ಲಿ ದೇಶದ ವಿವಿಧ ರೀಟೇಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರ 3GB + 64GB ಸ್ಟೋರೇಜ್ ಮಾದರಿಯು ₹6,399 ಗೆ ಮತ್ತು ಸ್ಟೋರೇಜ್ 4GB + 64GB ಮಾದರಿಯು ₹6,899 ಗೆ ಈ ಮೊದಲೇ ಲಭ್ಯವಿವೆ.
Itel A90 Limited Edition: ಪ್ರಮುಖ ವೈಶಿಷ್ಟ್ಯಗಳು
ಹೊಸ Itel A90 Limited Edition ಸ್ಮಾರ್ಟ್‌ಫೋನಿನಲ್ಲಿ 6.6 ಇಂಚಿನ HD+ IPS LCD ಡಿಸ್‌ಪ್ಲೇ ಇದ್ದು, ಇದು 90Hz ರಿಫ್ರೆಶ್ ರೇಟ್ ಸ್ಮೂತ್ ಅನುಭವವನ್ನು ಒದಗಿಸುತ್ತದೆ. ಈ ಫೋನ್‌ನಲ್ಲಿರುವ Dynamic Bar ವೈಶಿಷ್ಟ್ಯವು ಪ್ರಮುಖ ನೋಟಿಫಿಕೇಶನ್‌ಗಳನ್ನು ಹೈಲೈಟ್ ಮಾಡುವಲ್ಲಿ ಸಹಾಯ ಮಾಡುತ್ತದೆ, ಇದು ಪ್ರೀಮಿಯಂ ಫೋನ್‌ಗಳಲ್ಲಿ ಕಂಡುಬರುವ ವೈಶಿಷ್ಟ್ಯಗಳಿಗೆ ಹೋಲುತ್ತದೆ.
ಕಾರ್ಯಕ್ಷಮತೆಗಾಗಿ, ಈ ಫೋನ್‌ಗೆ Unisoc T7100 ಆಕ್ಟಾ-ಕೋರ್ ಪ್ರೊಸೆಸರ್ ಶಕ್ತಿ ನೀಡುತ್ತದೆ. ಮಧ್ಯಮ ಮಟ್ಟದ ಬಳಕೆಗಳಿಗೆ ಸಾಕಾಗುವಷ್ಟು ಶಕ್ತಿ ಈ ಚಿಪ್‌ಸೆಟ್‌ನಲ್ಲಿದೆ. ಸಾಫ್‌ವೇರ್ ವಿಭಾಗದಲ್ಲಿ, ಫೋನ್ Android 14 Go Edition ಆಧಾರಿತ Itel OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದೀಗ 128GB ಸ್ಟೊರೇಜ್ ಇರುವುದರಿಂದ ಸಂಗ್ರಹಿಸಬಹುದಾದ ಶಕ್ತಿಯು ಕೂಡ ಸಾಕಷ್ಟು ಹೆಚ್ಚಾಗಲಿದೆ.

ಕ್ಯಾಮೆರಾ ಮತ್ತು ಬ್ಯಾಟರಿ ವೈಶಿಷ್ಟ್ಯಗಳಲ್ಲಿ, ಈ Itel A90 Limited Edition ಫೋನಿನಲ್ಲಿ 13MP ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಬೆಲೆಯ ವಿಭಾಗದಲ್ಲಿ ಇದು ಸಾಮಾನ್ಯವಾದ ಫೀಚರ್ಸ್ ಎನ್ನಬಹುದು. ಬ್ಯಾಟರಿ ಸಾಮರ್ಥ್ಯದಲ್ಲಿ, ಫೋನಿನಲ್ಲಿ 5,000mAh ಬ್ಯಾಟರಿ ನೀಡಲಾಗಿದೆ. ಜೊತೆಗೆ 15W ಚಾರ್ಜಿಂಗ್ ಬೆಂಬಲವೂ ಇದ್ದು, ಉತ್ತಮ ಬಾಳಿಕೆಯ ನಿರೀಕ್ಷೆಯನ್ನು ಒದಗಿಸಿದೆ.
ಫೋನಿನ ಇತರೆ ವೈಶಿಷ್ಟ್ಯಗಳಲ್ಲಿ, DTS Audio ತಂತ್ರಜ್ಞಾನ, ಫೋನ್‌ಗೆ MIL-STD-810H ಮಿಲಿಟರಿ-ಗ್ರೇಡ್ ಡ್ಯುರಾಬಿಲಿಟಿ, ಧೂಳು ಮತ್ತು ತುಂತುರು ನೀರಿನಿಂದ ರಕ್ಷಣೆಗಾಗಿ IP54 ರೇಟಿಂಗ್, ಸುರಕ್ಷತೆಗೆ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಇವೆ. ಹಾಗೆಯೇ, ಫೋನ್‌ನ ಪ್ರಮುಖ ಹೈಲೈಟ್ ಆಗಿ Aivana 2.0 AI ಸಹಾಯಕವು ಸಹ ಇದ್ದು, ಇದು:
- ಡಾಕ್ಯುಮೆಂಟ್‌ಗಳನ್ನು ಅನುವಾದಿಸುವುದು
- ಚಿತ್ರಗಳನ್ನು ವಿಶ್ಲೇಷಿಸುವುದು
- WhatsApp ಕರೆಗಳನ್ನು ಆರಂಭಿಸುವುದು
- ಕಠಿಣ ಗಣಿತ ಪ್ರಶ್ನೆಗಳಿಗೂ ಪರಿಹಾರ ನೀಡುವುದು
ಹೀಗೆ ಹಲವಾರು ಕಾರ್ಯಗಳನ್ನು ನೆರವಾಗುತ್ತದೆ.
ಒಟ್ಟಾರೆಯಾಗಿ, Itel A90 Limited Edition 128GB ಆವೃತ್ತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಡ್ಯುರಾಬಲ್ ಬಿಲ್ಡ್ ಕ್ವಾಲಿಟಿ ಬಾಳಿಕೆಯ ಜೊತೆಗೆ ಹೆಚ್ಚು ಸ್ಟೊರೇಜ್, ಉತ್ತಮ ಬ್ಯಾಟರಿ ಬ್ಯಾಕಪ್, AI ವೈಶಿಷ್ಟ್ಯಗಳು ಒದಗಿಸುತ್ತಿದೆ. ಈ ಬೆಲೆಯಲ್ಲಿ ಇದು 4ಜಿ ನೆಟ್‌ವರ್ಕ್ ಸಂಪರ್ಕವನ್ನು ಮಾತ್ರ ಬೆಂಬಲಿಸುತ್ತದೆ. ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬಳಸುವವರು ಮತ್ತು ಹೆಚ್ಚು ಬಾಳಿಕೆ ಬಯಸುವ ಬಳಕೆದಾರರಿಗೆ ಈ ಫೋನ್ ಸೂಕ್ತವಾಗಿದೆ.


Click it and Unblock the Notifications








