ಕೇವಲ 7,999 ರೂ.! 50MP ಕ್ಯಾಮೆರಾ.. 5,000mAh ಬ್ಯಾಟರಿ.. ಅದೂ 5G ಫೋನ್!
ಐಟೆಲ್ (Itel) ಇತ್ತೀಚೆಗೆ ಐಟೆಲ್ ಕಲರ್ ಪ್ರೊ 5G (itel Color Pro 5G) ಫೋನಿನ 4GB ಸ್ಟೋರೇಜ್ ರೂಪಾಂತರವನ್ನು ಬಿಡುಗಡೆ ಮಾಡಿದೆ. ಕಂಪನಿಯು, ಇದನ್ನು ಕೇವಲ 7,999 ರೂ.ಗೆ ಮಾರಾಟ ಮಾಡುತ್ತಿದೆ. ವಿಶೇಷವೆಂದರೆ, ಈ ಮೊಬೈಲ್ ಐವಿಸಿಒ (IVCO) ತಂತ್ರಜ್ಞಾನದೊಂದಿಗೆ ಬಣ್ಣ ಬದಲಾಯಿಸುವ ಬ್ಯಾಕ್ ಪ್ಯಾನೆಲ್ ಹೊಂದಿದೆ. ಜೊತೆಗೆ, ಶಕ್ತಿಯುತ NRCA (5G++) ತಂತ್ರಜ್ಞಾನ ಹೊಂದಿದೆ. ಸ್ಮಾರ್ಟ್‌ಫೋನ್ ಪ್ರಿಯರು ಈ ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಂಪನಿಯು ಅಗ್ಗದ ಐಟೆಲ್ ಕಲರ್ ಪ್ರೊ 5G ಅನ್ನು ಕಳೆದ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಇದೀಗ, 4GB ರೂಪಾಂತರವನ್ನು ಪರಿಚಿಸಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಹೊಂದಿದೆ. ಇದು 6.6 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು, ಈ ಅಗ್ಗದ ಫೋನ್ ಖರೀದಿಸಿದರೆ, 1000 ಡಿಸ್ಕೌಂಟ್ ಸಹ ಸಿಗುತ್ತದೆ.

ಐಟೆಲ್ ಕಲರ್ ಪ್ರೊ ಫೋನಿನ 4GB ಸ್ಟೋರೇಜ್ ಬೆಲೆ
ಐಟೆಲ್ ಕಲರ್ ಪ್ರೊ 5G ಫೋನಿನ 4GB RAM+128GB ಸ್ಟೋರೇಜ್ ರೂಪಾಂತರದ ಬೆಲೆ 8,999 ರೂ. ಆಗಿದೆ. ನೀವು, 1,000 ರೂ.ಗಳ ಕ್ಯಾಶ್‌ಬ್ಯಾಕ್‌ನೊಂದಿಗೆ ಕೇವಲ 7,999 ರೂ.ಗೆ ಖರೀದಿಸಬಹುದು. ಕಂಪನಿಯು ಜುಲೈನಲ್ಲಿ 6GB RAM+128GB ಸ್ಟೋರೇಜ್ ರೂಪಾಂತರವನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ 9,999 ರೂ. ಇದೆ. ಈ ಫೋನ್ 4GB ಮತ್ತು 6GB ಮೆಮೊರಿ ಫ್ಯೂಷನ್ ತಂತ್ರಜ್ಞಾನವನ್ನು ಸಹ ಹೊಂದಿದೆ. ನೀವು, ಆನ್‌ಲೈನ್ ಮತ್ತು ಚಿಲ್ಲರೆ ಮಳಿಗೆಗಳಲ್ಲಿ ಫೋನ್ ಕೊಳ್ಳಬಹುದು.
ಐಟೆಲ್ ಕಲರ್ ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಟೆಲ್ ಕಲರ್ ಪ್ರೊ 5G ಮೊಬೈಲ್ 6.6 ಇಂಚಿನ ಎಚ್‌ಡಿ ಪ್ಲಸ್ ಪಿಎಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಡಿಸ್ಪ್ಲೇಯು ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಐಟೆಲ್ ಕಲರ್ ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ 420,000 AnTuTu ಸ್ಕೋರ್ ಪಡೆದಿದೆ ಎಂದು ಕಂಪನಿ ಹೇಳಿದೆ. ಈ ಮೊಬೈಲ್ 4GB RAM + 128GB ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಮೆಮೊರಿ ಫ್ಯೂಷನ್ ತಂತ್ರಜ್ಞಾನದೊಂದಿಗೆ 12GB RAM ಅನ್ನು ಬಳಸಬಹುದು.
ಕ್ಯಾಮೆರಾ ಸೆಟಪ್
ಐಟೆಲ್ ಕಲರ್ ಪ್ರೊ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ ಎಐ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಫೋನಿನಲ್ಲಿ 8 ಮೆಗಾಪಿಕ್ಸೆಲ್ ಎಐ ಫ್ರಂಟ್ ಕ್ಯಾಮೆರಾ ಇದೆ. ಫೋನಿನ ಹಿಂಭಾಗದ ಕ್ಯಾಮೆರಾದಲ್ಲಿ ಪನೋರಮಾ ಮೋಡ್, ಪ್ರೊ ಮೋಡ್, ಎಆರ್ ಶಾಟ್ ಮತ್ತು ಟೈಮ್ ಲ್ಯಾಪ್ಸ್ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಟೆಲ್ ಕಲರ್ ಪ್ರೊ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಐಟೆಲ್ ಕಲರ್ ಪ್ರೊ 5G ಫೋನ್ 10 5G ಬ್ಯಾಂಡ್‌ಗಳಿಗೆ ಬೆಂಬಲವನ್ನು ಪಡೆಯುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ವೈಫೈ ಮತ್ತು ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








