Home
ಮೊಬೈಲ್

ಕೇವಲ 6,399 ರೂ.ಗೆ ಮಿಲಿಟರಿ ಗ್ರೇಡ್ ಬಿಲ್ಡ್, ವಾಟರ್‌ಫ್ರೂಫ್ ಫೋನ್ ಬಿಡುಗಡೆ!

ಐಟೆಲ್ ಕಂಪನಿಯು ತನ್ನ ಜನಪ್ರಿಯ ಐಟೆಲ್ A90 (Itel A90) ಸ್ಮಾರ್ಟ್‌ಫೋನ್‌ನ ಹೊಸ, ವಿಶೇಷ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಐಟೆಲ್ A90 ಲಿಮಿಟೆಡ್ ಎಡಿಷನ್ ಮಾದರಿಯ ಫೋನ್ ಮಿಲಿಟರಿ ದರ್ಜೆಯ ಬಾಳಿಕೆ ಮತ್ತು ಧೂಳು-ನೀರಿನ ಪ್ರತಿರೋಧಕ ಸಾಮರ್ಥ್ಯಗಳೊಂದಿಗೆ ಪರಿಚಯವಾಗಿದ್ದು, ಗ್ರಾಹಕರು ಇದೀಗ ಕೇವಲ 6,399 ರೂ. ಆರಂಭಿಕ ಬೆಲೆಯಲ್ಲಿ ಇಂತಹದೊಂದು ಫೋನ್ ಖರೀದಿಸಲು ಸಾಧ್ಯವಾಗುತ್ತಿದೆ. ಹಾಗಾದರೆ, ಹೊಸ ಲಿಮಿಟೆಡ್ ಎಡಿಷನ್ ಐಟೆಲ್ A90 ಫೋನ್ ಹೇಗಿದೆ?, ಸಂಪೂರ್ಣ ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಐಟೆಲ್ A90 ಲಿಮಿಟೆಡ್ ಎಡಿಷನ್: ಪ್ರಮುಖ ವೈಶಿಷ್ಟ್ಯಗಳು
ಲಿಮಿಟೆಡ್ ಎಡಿಷನ್‌ನ ಐಟೆಲ್ A90 ಫೋನಿನಲ್ಲಿ ವಿಶೇಷವಾಗಿ ಬಾಳಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಫೋನ್ ಮಿಲಿಟರಿ ದರ್ಜೆಯ MIL-STD-810H ಪ್ರಮಾಣೀಕರಣವನ್ನು ಹೊಂದಿದೆ. ಇದು ಬೀಳುವಿಕೆ ಮತ್ತು ಇತರೆ ಆಘಾತಗಳಿಂದ ಫೋನ್‌ಗೆ ರಕ್ಷಣೆ ನೀಡುತ್ತದೆ. ಜೊತೆಗೆ, ಧೂಳು ಮತ್ತು ನೀರಿನ ಪ್ರತಿರೋಧಕಕ್ಕಾಗಿ IP54 ರೇಟಿಂಗ್ ಅನ್ನು ಸಹ ಇದು ಹೊಂದಿದೆ. ಈ ವೈಶಿಷ್ಟ್ಯಗಳು ಈ ಫೋನ್‌ ಅನ್ನು ದೈನಂದಿನ ಬಳಕೆಯಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿಸುತ್ತವೆ. ಇದರ ಇತರ ಪ್ರಮುಖ ಫೀಚರ್‌ಗಳು ಸಾಮಾನ್ಯ ಐಟೆಲ್ A90 ಆವೃತ್ತಿಯಂತೆಯೇ ಇವೆ ಎಂದು ಕಂಪೆನಿಯು ತಿಳಿಸಿದೆ. .

ಐಟೆಲ್ A90 ಫೋನ್ 90Hz ರಿಫ್ರೆಶ್ ರೇಟ್ ಹೊಂದಿರುವ 6.6-ಇಂಚಿನ HD+ IPS LCD ಪರದೆಯೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇಯ ವಿಶೇಷ ಆಕರ್ಷಣೆಯೆಂದರೆ, ಐಫೋನ್‌ನ ಡೈನಾಮಿಕ್ ಐಲ್ಯಾಂಡ್‌ಗೆ ಹೋಲುವ 'ಡೈನಾಮಿಕ್ ಬಾರ್' ವೈಶಿಷ್ಟ್ಯ. ಈ ಫೋನ್ ಆಕ್ಟಾ-ಕೋರ್ ಯುನಿಸಾಕ್ T7100 SoC ಪ್ರೊಸೆಸರ್‌ನಿಂದ ಶಕ್ತಿ ಪಡೆಯುತ್ತದೆ. ಇದು 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಇದರ ಕಾರ್ಯನಿರ್ವಹಣೆಗಾಗಿ, ಇದು ಆಂಡ್ರಾಯ್ಡ್ 14 ಗೋ ಎಡಿಷನ್ ಆಧಾರಿತ ಐಟೆಲ್ ಓಎಸ್ 14 (itel OS 14) ಅನ್ನು ಹೊಂದಿದೆ.

ಕೇವಲ 6,399 ರೂ.ಗೆ ಮಿಲಿಟರಿ ಗ್ರೇಡ್ ಬಿಲ್ಡ್, ವಾಟರ್‌ಫ್ರೂಫ್ ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, ಫೋನ್‌ನ ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಸೆನ್ಸರ್ ಇದೆ. ಉತ್ತಮ ಗುಣಮಟ್ಟದ ಆಡಿಯೋ ಅನುಭವಕ್ಕಾಗಿ ಇದು ಡಿಟಿಎಸ್ ಆಡಿಯೋ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದರ ಜೊತೆಗೆ, ಇದು ಐವಾನಾ 2.0 ಎಂಬ ಬುದ್ಧಿವಂತ AI ಅಸಿಸ್ಟೆಂಟ್ ಅನ್ನು ಹೊಂದಿದೆ. ಇದು ಡಾಕ್ಯುಮೆಂಟ್ ಅನುವಾದ, ಫೋಟೋಗಳಿಂದ ಪಠ್ಯ ಅರ್ಥೈಸುವುದು, ಮತ್ತು ವಾಟ್ಸಾಪ್ ಕರೆಯಂತಹ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯವು 5,000mAh ಆಗಿದ್ದು, ಇದು 15W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಸುರಕ್ಷತೆಗಾಗಿ, ಈ ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಅಳವಡಿಸಲಾಗಿದೆ. ಆದರೆ, 5G ಸಪೋರ್ಟ್ ಹೊಂದಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಐಟೆಲ್ A90 ಲಿಮಿಟೆಡ್ ಎಡಿಷನ್: ಬೆಲೆ ಎಷ್ಟು?
ಈ ವಿಶೇಷ ಆವೃತ್ತಿಯು ಐಟೆಲ್ A90ಫೀನ್ ಎರಡು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ. ಇದರ 3GB RAM ಮತ್ತು 64GB ಸ್ಟೋರೇಜ್ ಹೊಂದಿರುವ ರೂಪಾಂತರದ ಬೆಲೆ ರೂ. 6,399 ಆಗಿದೆ. ಹಾಗೆಯೇ, 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ರೂಪಾಂತರದ ಬೆಲೆ ರೂ. 6,899. ಈ ಎರಡೂ ಫೋನ್‌ಗಳು ಬಜೆಟ್ ವಿಭಾಗದಲ್ಲಿ ಉತ್ತಮ ಆಯ್ಕೆಗಳಾಗಿವೆ. ಇವು ಅರೋರಾ ಬ್ಲೂ, ಸ್ಪೇಸ್ ಟೈಟಾನಿಯಂ ಮತ್ತು ಸ್ಟಾರ್‌ಲಿಟ್ ಬ್ಲ್ಯಾಕ್ ಬಣ್ಣಗಳಲ್ಲಿ ದೇಶಾದ್ಯಂತ ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿವೆ.

ಗಮನಿಸಬೇಕಾದ ಸಂಗತಿಯೆಂದರೆ, ಸ್ಟ್ಯಾಂಡರ್ಡ್ ಐಟೆಲ್ A90 ಮಾದರಿಯ 4GB+64GB ಮತ್ತು 4GB+128GB ಆಯ್ಕೆಗಳ ಬೆಲೆ ಕ್ರಮವಾಗಿ ರೂ. 6,499 ಮತ್ತು ರೂ. 6,999 ಆಗಿವೆ. ಹೊಸ ಲಿಮಿಟೆಡ್ ಎಡಿಷನ್ ಹೆಚ್ಚುವರಿ ರಕ್ಷಣೆಯೊಂದಿಗೆ, ಸ್ಟ್ಯಾಂಡರ್ಡ್ ಮಾದರಿಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.! ಒಟ್ಟಾರೆಯಾಗಿ, ಐಟೆಲ್ A90 ಲಿಮಿಟೆಡ್ ಎಡಿಷನ್, ಬಾಳಿಕೆ ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡುವ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಕೈಗೆಟಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಒದಗಿಸುವ ಈ ಫೋನ್ ಬಜೆಟ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

Best Mobiles in India

English summary
The Itel A90 Limited Edition has been launched in India, featuring MIL-STD-810H military-grade durability for enhanced toughness. The device combines a stylish design with robust build quality, making it suitable for users who need both performance and reliability in everyday use.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+