Home
ಮೊಬೈಲ್

ಜಸ್ಟ್ 8,950 ರೂ.! 32MP ಸೆಲ್ಫಿ ಕ್ಯಾಮೆರಾ.. 256GB ಸ್ಟೋರೇಜ್‌.. 2 ಹೊಸ itel ಫೋನ್ ಲಾಂಚ್

ಐಟೆಲ್ (Itel) ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದೆ. ಸದ್ದಿಲ್ಲದೆ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಅದೂ ಅಗ್ಗದೆ ಬೆಲೆಗೆ ಎನ್ನುವುದು ವಿಶೇಷ. ಹೌದು, ಕಂಪನಿಯು ತನ್ನ S25 ಸರಣಿಯನ್ನು ಅನಾವರಣಗೊಳಿಸಿದೆ. ಇದರಲ್ಲಿ ಐಟೆಲ್ S25 (Itel S25) ಮತ್ತು ಐಟೆಲ್ S25 ಅಲ್ಟ್ರಾ (itel S25 Ultra) ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವೆರಡೂ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಾಗಿವೆ. ಬನ್ನಿ, ಹೊಸ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಇಡೀ ಟೆಕ್ ಜಗತ್ತು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S25 (Galaxy S25) ಸರಣಿಗಾಗಿ ಕಾಯುತ್ತಿದೆ. ಆದರೆ, ಐಟೆಲ್‌ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ S25 ಸರಣಿಯನ್ನು ರಿಲೀಸ್ ಮಾಡಿದೆ. ಹೊಸ ಫೋನ್‌ಗಳು ಯುನಿಸೊಕ್‌ನ ಟೈಗರ್ T620 ಪ್ರೊಸೆಸರ್‌ ಹೊಂದಿವೆ. ಇದರಲ್ಲಿ ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್‌ನೊಂದಿಗೆ 6.78 ಇಂಚಿನ ಡಿಸ್ಪ್ಲೇ ಇದೆ. ಎರಡೂ ಮೊಬೈಲ್‌ಗಳು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಕೇವಲ 8,950 ರೂ.! itel S25 ಮತ್ತು itel S25 Ultra ಬಿಡುಗಡೆ; ಫೀಚರ್ಸ್ ಹೇಗಿವೆ?

ಐಟೆಲ್ S25 ಮತ್ತು ಐಟೆಲ್ S25 ಅಲ್ಟ್ರಾ ಬೆಲೆ

ಐಟೆಲ್ S25 ಮತ್ತು ಐಟೆಲ್ S25 ಅಲ್ಟ್ರಾ ಫೋನ್‌ಗಳನ್ನು ಫಿಲಿಪೈನ್ಸ್‌ನಲ್ಲಿ 8GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಐಟೆಲ್ S25 ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 8,950 ರೂ. (6,199 ಫಿಲಿಪೈನ್ ಪೆಸೊ) ಆಗಿದೆ. ಐಟೆಲ್ S25 ಅಲ್ಟ್ರಾ ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವನ್ನು 15,880 ರೂ.ಗೆ (10,999 ಫಿಲಿಪೈನ್ ಪೆಸೊ) ಬಿಡುಗಡೆ ಮಾಡಲಾಗಿದೆ.

ಐಟೆಲ್ S25 ಮೊಬೈಲ್ ಬ್ರೋಮೊ ಬ್ಲ್ಯಾಕ್, ಮ್ಯಾಂಬೊ ಮಿಂಟ್ ಮತ್ತು ಸಹಾರಾ ಗ್ಲೀಮ್ ಬಣ್ಣಗಳಲ್ಲಿ ಬರುತ್ತದೆ. ಐಟೆಲ್ S25 ಅಲ್ಟ್ರಾ ಫೋನ್ ಬ್ರೋಮೊ ಬ್ಲ್ಯಾಕ್, ಕೊಮೊಡೊ ಓಷನ್ ಮತ್ತು ಮೆಟಿಯರ್ ಟೈಟಾನಿಯಂ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಕಂಪನಿಯು ಶೀಘ್ರದಲ್ಲೇ ಇವುಗಳನ್ನು ಭಾರದಲ್ಲಿ ಬಿಡುಗಡೆ ಮಾಡಲಿದೆ. ನೀವು, ಶಾಪೀ (Shopee) ಮೂಲಕ ಐಟೆಲ್ S25 ಅನ್ನು ಪ್ರೀ ಬುಕಿಂಗ್ ಮಾಡಬಹುದು. ಆದರೆ, ಐಟೆಲ್ S25 ಅಲ್ಟ್ರಾ ಫೋನ್ ಭಾನುವಾರದಿಂದ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತದೆ.

ಐಟೆಲ್ S25 ಅಲ್ಟ್ರಾ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಟೆಲ್ S25 ಅಲ್ಟ್ರಾ ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 3D ಕರ್ವ್ ಅಮೋಲೆಡ್ ಪ್ಯಾನೆಲ್‌ನಲ್ಲಿ ಬರುತ್ತದೆ. ಇದು 2436 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 1400 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್ ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಐಟೆಲ್ S25 ಅಲ್ಟ್ರಾ ಫೋನ್ ಯುನಿಸೊಕ್‌ನ ಟೈಗರ್ T620 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಐಟೆಲ್ S25 ಅಲ್ಟ್ರಾ ಮೊಬೈಲ್‌ 8GB RAM ನೊಂದಿಗೆ ಬಿಡುಗಡೆಯಾಗಿದೆ. ಇದು 8GB ಎಕ್ಸ್‌ಟೆಂಡೆಡ್ RAM ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ ಭೌತಿಕ RAM ಜೊತೆಗೆ 16GB RAM (8GB+8GB) ಲಭ್ಯವಿದೆ. ಈ ಮೊಬೈಲ್ 256GB ಇಂಟರ್ನಲ್ ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ಐಟೆಲ್ S25 ಅಲ್ಟ್ರಾ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಮೈಕ್ರೋ ಲೆನ್ಸ್ ಮತ್ತು ಇನ್ನೊಂದು ಮೂರನೇ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಐಟೆಲ್ S25 ಅಲ್ಟ್ರಾ ಫೊನಿನಲ್ಲಿ 5000mAh ಸಾಮರ್ಥ್ಯ ಬ್ಯಾಟರಿಯನ್ನು ಅಳವಡಿಸಿದೆ. ಈ ಸ್ಮಾರ್ಟ್‌ಫೋನ್ ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಇತರೆ ವೈಶಿಷ್ಟ್ಯಗಳು

ಐಟೆಲ್ S25 ಅಲ್ಟ್ರಾ ಮೊಬೈಲ್ ನೀರು ಮತ್ತು ಧೂಳು ನಿರೋಧಕ IP64 ರೇಟಿಂಗ್ ಪಡೆದಿದೆ. ಎಐ ಅಸಿಸ್ಟೆಂಟ್, ಐಆರ್ ಬ್ಲಾಸ್ಟರ್ ಮತ್ತು ಡಿಟಿಎಸ್ ಸೌಂಡ್ ಸ್ಪೀಕರ್‌ ಮತ್ತು ಎನ್‌ಎಫ್‌ಸಿ ಬೆಂಬಲವೂ ಲಭ್ಯವಿದೆ.

ಐಟೆಲ್ S25 ವಿಶೇಷತೆಗಳು

ಐಟೆಲ್ S25 ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1800 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನಿನಲ್ಲಿ 8GB RAM + 128GB ಸ್ಟೋರೇಜ್ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ IP54 ರೇಟಿಂಗ್‌ನೊಂದಿಗೆ ಬರುತ್ತದೆ.

Best Mobiles in India

English summary
Itel S25 and Itel S25 Ultra Launched: Price, Specifications. ಐಟೆಲ್ S25 ಮತ್ತು ಐಟೆಲ್ S25 ಅಲ್ಟ್ರಾ ಫೋನ್‌ ಬಿಡುಗಡೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+