ಶಿಯೋಮಿಗೆ "ಐಟೆಲ್ ಎಸ್‌41" ಸ್ಮಾರ್ಟ್‌ಫೋನ್ ಸೆಡ್ಡು!..6,999ರೂ.ಗೆ ಇಷ್ಟೋಂದು ಫೀಚರ್ಸ್!?

ಭಾರತದಲ್ಲಿ ಅಷ್ಟೇನು ಜನಪ್ರಿಯವಲ್ಲದ ಐಟೆಲ್ ಮೊಬೈಲ್ ಕಂಪೆನಿ ಮಧ್ಯಮವರ್ಗದ ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಯಾವಾಗಲೂ ಮುಂದಿದೆ. ಶಿಯೋಮಿಗೆ ಸೆಡ್ಡುಹೊಡೆಯುವಂತಹ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.!!

|

ಕಡಿಮೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಜಾಸ್ತಿ ಎನ್ನುವುದು ಮೊಬೈಲ್ ಕಂಪೆನಿಗಳಿಗೆ ಅರಿವಾಗಿದೆ.! ಹಾಗಾಗಿಯೇ, ಎಲ್ಲಾ ಮೊಬೈಲ್ ಕಂಪೆನಿಗಳಿ ಶಿಯೋಮಿ ರೀತಿಯಲ್ಲಿ ಕಡಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ.!!

ಈ ಕಂಪೆನಿಗಳ ಸಾಲಿಗೆ ಹೊಸ ಸೇರ್ಪಡೆ "ಐಟೆಲ್" ಮೊಬೈಲ್ ಕಂಪೆನಿ.!! ಹೌದು, ಭಾರತದಲ್ಲಿ ಅಷ್ಟೇನು ಜನಪ್ರಿಯವಲ್ಲದ ಐಟೆಲ್ ಮೊಬೈಲ್ ಕಂಪೆನಿ ಮಧ್ಯಮವರ್ಗದ ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಯಾವಾಗಲೂ ಮುಂದಿದೆ. ಶಿಯೋಮಿಗೆ ಸೆಡ್ಡುಹೊಡೆಯುವಂತಹ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.!!

ಅಂತಹ ಒಂದು ಸ್ಮಾರ್ಟ್‌ಪೋನ್ ಎಂದರೆ ''ಐಟೆಲ್ ಎಸ್‌41''! ಕೇವಲ 6,999 ರೂ. ಬೆಲೆಗೆ ಭಾರತಕ್ಕೆ ಕಾಲಿಟ್ಟಿರುವ ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ ಅತ್ಯುತ್ತಮ ಫೀಚರ್ಸ್ ಹೊಂದಿರುವ ಫೋನ್ ಆಗಿದೆ. ಹಾಗಾದರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಖರೀದಿಸಲು ಏಕೆ ಬೆಸ್ಟ್? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಸ್ಪೀಡ್ 4G ವೋಲ್ಟ್ ಎಕ್ಸ್‌ಪೀರಿಯನ್ಸ್!!

ಸ್ಪೀಡ್ 4G ವೋಲ್ಟ್ ಎಕ್ಸ್‌ಪೀರಿಯನ್ಸ್!!

ಒಂದು ಸ್ಮಾರ್ಟ್‌ಫೋನ್‌ನಲ್ಲಿ ಡಿಸ್‌ಪ್ಲೇ, ಕ್ಯಾಮೆರಾ ಹಾಗೂ ಬ್ಯಾಟರಿ ಫೀಚರ್‌ಗಳಂತೆ ಸ್ಪೀಡ್ 4G ವೋಲ್ಸ್ ಎಕ್ಸ್‌ಪೀರಿಯನ್ಸ್ ಸಹ ಮುಖ್ಯ.ಅಂತಹ ಅತ್ಯುತ್ತ ಅನುಭವವನ್ನು ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ ಹೊತ್ತುಬಂದಿದೆ.! ಇನ್ನು 4G ವೋಲ್ಟ್, 3G, 2G ಮತ್ತು ಬ್ಲೂಟೂತ್ ಎಲ್ಲಾ ಸಂಪರ್ಕಗಳು ಮೊಬೈಲ್‌ನಲ್ಲಿವೆ.!!

ಬಜೆಟ್ ಫೋನ್‌ ಆಕರ್ಷಕ ವಿನ್ಯಾಸ!!

ಬಜೆಟ್ ಫೋನ್‌ ಆಕರ್ಷಕ ವಿನ್ಯಾಸ!!

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ವಿನ್ಯಾಸ ಅಷ್ಟೇನು ಉತ್ತಮವಾಗಿರುವುದಿಲ್ಲ ಆದರೆ, 5 ಇಂಚ್ ಹೆಚ್‌ಡಿ (1280x720) ಡಿಸ್‌ಪ್ಲೇ ಹೋಂದಿರುವ ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ ಮಾತ್ರ ಹೈ ಎಂಡ್ ಸ್ಮಾರ್ಟ್‌ಫೋನ್ ವಿನ್ಯಾಸ ಹೊಂದಿದೆ.! ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಈ ಫೋನ್ ಮಧ್ಯಮ ಬಜೆಟ್‌ ಪೋನ್‌ಗಳ ವಿನ್ಯಾಸಕ್ಕೆ ಸಮನಾಗಿದೆ ಎಂದು ಹೇಳಬಹುದು.!!

ಅತ್ಯದ್ಬುತ ಕ್ಯಾಮೆರಾ ತಂತ್ರಜ್ಞಾನ!!

ಅತ್ಯದ್ಬುತ ಕ್ಯಾಮೆರಾ ತಂತ್ರಜ್ಞಾನ!!

ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ 8MP ರಿಯರ್ ಕ್ಯಾಮೆರಾ, ಹಾಗೂ 8MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದ್ದು, ಅತ್ಯದ್ಬುತ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿದೆ. ಒಂದೇ ಶಾಟ್‌ನಲ್ಲಿ 120 ಡಿಗ್ರಿ ಪನೋರಮಾ ಶಾಟ್ ತೆಗೆಯುವ ಆಯ್ಕೆ ಇದರಲ್ಲಿದ್ದು, ಚಿತ್ರಗಳ ಗುಣಮಟ್ಟ ಅತ್ಯುತ್ತಮವಾಗಿದೆ.!! ಇನ್ನು ಒಪ್ಪೊ-ವಿವೊ ಫೋನ್‌ಗಳು ಹೊಂದಿರುವ 17ಕ್ಕಿಂತ ಹೆಚ್ಚು ಕ್ಯಾಮೆರಾ ತಂತ್ರಜ್ಞಾನಗಳು ಈ ಫೋನ್‌ನಲ್ಲಿವೆ.!!

ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಹೇಗಿದೆ?

ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಹೇಗಿದೆ?

1.25GHz ಮೀಡಿಯಾಟೆಕ್ ಕ್ವಾಡ್‌ಕೋರ್ ಪ್ರೊಸೆಸರ್ ಮತ್ತು 3GB RAM ಹೊಂದಿರುವ ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.0 ನ್ಯೂಗಾ ಮೂಲಕ ಉತ್ತಮ ಕಾರ್ಯನಿರ್ವಹಣೆ ನೀಡಲಿದೆ. ಒಂದೇ ಬಾರಿ ಹಲವು ಆಪ್‌ಗಳ ರನ್ ಅನ್ನು ತಡೆದುಕೊಳ್ಳಿವಂತಹ 3GB RAM ಮತ್ತು 16GB ಮೆಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ಹೆಚ್ಚಿಸಬಹುದಾದ ಅವಕಾಶ ಕೂಡ ಇದೆ.!!

ಬ್ಯಾಟರಿ ಮತ್ತು ಇತರ ಫೀಚರ್ಸ್!!

ಬ್ಯಾಟರಿ ಮತ್ತು ಇತರ ಫೀಚರ್ಸ್!!

ಐಟೆಲ್ ಎಸ್‌41 ಸ್ಮಾರ್ಟ್‌ಫೋನ್ 2,700mAh ಲಿ-ಪಾಲಿಮರ್ ಬ್ಯಾಟರಿಯನ್ನು ಹೋಂದಿದ್ದು, ಸಮರ್ಥ ಸಿಪಿಯು ಮತ್ತು ಗ್ರಾಫಿಕಲ್ ಯುನಿಟ್ ಬ್ಯಾಟರಿ ನಿರ್ವಹಣೆಯಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಲಿವೆ. ಹಾಗಾಗಿ, ಬ್ಯಾಟರಿ ಬಾಳಿಕೆ ಹೆಚ್ಚು ಬರಲಿದೆ ಎಂದು ಕಂಪೆನಿ ಹೇಳಿದೆ. ಮೊದಲೇ ಹೇಳಿದಂತೆ ಅತ್ಯಂತ ಕಡಿಮೆ ಬೆಲೆ 6,999 ರೂ.ಗೆ ಬಹುತೇಕ ಎಲ್ಲಾ ಫೀಚರ್‌ಗಳು ಲಭ್ಯವಿವೆ.!!

</a></strong><a class=ಶೀತಲ ಸಮರದಲ್ಲಿ ಅಮೆರಿಕಾ ವಿರುದ್ದ ಗೆದ್ದ ರಷ್ಯಾ!..ಇದಕ್ಕೆ ಕಾರಣ ಫೇಸ್‌ಬುಕ್!!" title="ಶೀತಲ ಸಮರದಲ್ಲಿ ಅಮೆರಿಕಾ ವಿರುದ್ದ ಗೆದ್ದ ರಷ್ಯಾ!..ಇದಕ್ಕೆ ಕಾರಣ ಫೇಸ್‌ಬುಕ್!!" loading="lazy" width="100" height="56" />ಶೀತಲ ಸಮರದಲ್ಲಿ ಅಮೆರಿಕಾ ವಿರುದ್ದ ಗೆದ್ದ ರಷ್ಯಾ!..ಇದಕ್ಕೆ ಕಾರಣ ಫೇಸ್‌ಬುಕ್!!

Best Mobiles in India

English summary
There's an immense demand for affordable yet feature loaded smartphones in the Indian market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X